ETV Bharat / bharat

ಅಜ್ಞಾತ ಮೂಲಗಳಿಂದ ಬಂದ ಲಕ್ಷಾಂತರ ರೂಪಾಯಿ ಬ್ಯಾಂಕ್ ಖಾತೆಗಳಿಗೆ ಜಮಾ: ಹಣ ವಿತ್​ಡ್ರಾಕ್ಕೆ ನೂಕುನುಗ್ಗಲು

ಅಜ್ಞಾತ ಮೂಲಗಳಿಂದ ಬಂದ ಲಕ್ಷಾಂತರ ರೂಪಾಯಿ ಒಡಿಶಾ ಗ್ರಾಮ್ಯ ಬ್ಯಾಂಕ್‌ನ ಖಾತೆದಾರರಿಗೆ ಜಮಾ ಆಗಿದೆ. ತಮ್ಮ ಬ್ಯಾಂಕ್​ಗೆ ಜಮಾ ಆದ ಹಣವನ್ನು ವಿತಡ್ರಾ ಮಾಡಿಕೊಳ್ಳಲು ಜನರು ಮುಂದಾಗಿದ್ದಾರೆ.

author img

By ETV Bharat Karnataka Team

Published : Sep 8, 2023, 2:03 PM IST

Odisha Gramya Bank
ಅಜ್ಞಾತ ಮೂಲಗಳಿಂದ ಬಂದ ಲಕ್ಷಾಂತರ ರೂಪಾಯಿ ಬ್ಯಾಂಕ್ ಖಾತೆಗಳಿಗೆ ಜಮಾ: ಹಣ ವಿತ್​ಡ್ರಾ ಮಾಡಿಕೊಳ್ಳಲು ನೂಕುನುಗ್ಗಲು...

ಕೇಂದ್ರಪಾರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ಔಲ್ ಬ್ಲಾಕ್‌ನ ಬಟಿಪಾಡಾ ಗ್ರಾಮದ ಒಡಿಶಾ ಗ್ರಾಮ್ಯ ಬ್ಯಾಂಕ್‌ನಲ್ಲಿ ನೂಕುನುಗ್ಗಲು ಕಂಡು ಬಂದಿದೆ. ಕೇಂದ್ರಪಾರ ಜಿಲ್ಲೆಯ ಔಲ್ ಬ್ಲಾಕ್‌ನಲ್ಲಿರುವ ಒಡಿಶಾ ಗ್ರಾಮ್ಯ ಬ್ಯಾಂಕ್‌ನ ಬಟಿಪಾಡಾ ಶಾಖೆಯ 40ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಗುರುವಾರ 'ಅಜ್ಞಾತ ಮೂಲಗಳಿಂದ' ಲಕ್ಷಾಂತರ ರೂಪಾಯಿ ಜಮಾ ಆಗಿರುವುದು ಅಚ್ಚರಿ ಮೂಡಿಸಿದೆ.

ಎರಡು ಸಾವಿರದಿಂದ ಎರಡು ಲಕ್ಷ ರೂಪಾಯಿಗಳವರೆಗೆ ಖಾತೆಗೆ ಹಣ ಜಮಾ ಆಗಿದೆ. ತಮ್ಮ ಖಾತೆಗೆ ಹಣ ಜಮಾ ಆಗುತ್ತಿದ್ದಂತೆಯೇ ಜನರು ತಕ್ಷಣ ಬ್ಯಾಂಕ್​​ಗೆ ಓಡಿಹೋದರು. ನಂತರ ಬ್ಯಾಂಕ್ ಇದ್ದಕ್ಕಿದ್ದಂತೆ ಜನರಿಂದ ತುಂಬಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಬ್ಯಾಂಕ್ ಅಧಿಕಾರಿಗಳು ಪೊಲೀಸರನ್ನು ನಿಯೋಜಿಸಬೇಕಾಯಿತು.

ಬ್ಯಾಂಕ್‌ ಎದುರು ಗ್ರಾಹಕರ ದಂಡು: ಮಾಹಿತಿಯ ಪ್ರಕಾರ, ಹಲವು ಖಾತೆದಾರರ ಮೊಬೈಲ್ ಫೋನ್‌ಗಳಿಗೆ ಅಜ್ಞಾತ ಮೂಲದಿಂದ ಎರಡು ಸಾವಿರ ರೂಪಾಯಿಯಿಂದ ಎರಡು ಲಕ್ಷದವರೆಗೆ ಹಣ ಜಮಾ ಆಗಿರುವ ಕುರಿತಂತೆ ಸಂದೇಶಗಳು ಬಂದಿವೆ. ಮೊಬೈಲ್‌ಗೆ ಸಂದೇಶ ಬಂದ ನಂತರ ಹಣ ಹಿಂಪಡೆಯಲು ಖಾತೆದಾರರು ಬ್ಯಾಂಕ್‌ಗೆ ತೆರಳಿದ್ದಾರೆ. ಗುರುವಾರ ಬೆಳಿಗ್ಗೆ ಬ್ಯಾಂಕ್‌ ತೆರೆಯುವ ಮುನ್ನವೇ ಬ್ಯಾಂಕ್‌ ಎದುರು ಗ್ರಾಹಕರ ದಂಡೇ ನೆರೆದಿತ್ತು.

ಬಟಿಪದ, ಶಾಹಿರಾ, ನುವಾಪದ, ಸನ್ಮಾನಂಗ್ ಪ್ರದೇಶದ ಖಾತೆದಾರರು ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯಿಂದ ಹಣ ವಿತ್​ಡ್ರಾ ಮಾಡಿಕೊಂಡಿದ್ದಾರೆ. ಜನಸಂದಣಿಯನ್ನು ಗಮನಿಸಿದ ಪಟ್ಟಮುಂಡಿ ಎಸ್‌ಡಿಪಿಒ ಹಾಗೂ ಪೊಲೀಸರು ಬ್ಯಾಂಕ್‌ಗೆ ಆಗಮಿಸಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು.

ಖಾತೆಗಳಿಗೆ ಹಣ ಜಮೆ ಕುರಿತು ತನಿಖೆ ಆರಂಭ: ಬ್ಯಾಂಕ್‌ನಲ್ಲಿ ಜನ ಜಮಾಯಿಸಿದ್ದರು, ಹಣ ಎಲ್ಲಿಂದ ಬಂತು ಎಂದು ತಿಳಿಯಲು 300 ಖಾತೆಗಳನ್ನು ಪರಿಶೀಲಿಸಿದ್ದೇವೆ. ಇದರಿಂದ ಜನರು ತುಂಬಾ ಸಂತೋಷವಾಗಿದ್ದಾರೆ. 30,000 ಮತ್ತು 40,000 ರೂ. ಹಾಗೂ 2 ಲಕ್ಷ ರೂ. ಖಾತೆದಾರರಿಗೆ ಜಮಾ ಆಗಿದೆ. ಈ ಕುರಿತ ತನಿಖೆ ನಡೆಯುತ್ತಿದೆ ಎಂದು ಒಡಿಶಾ ಗ್ರಾಮ್ಯ ಬ್ಯಾಂಕ್​ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಹಿಂದಿನ ಪ್ರಕರಣ, ಪಾಲಿಕೆಯ ಮಾಜಿ ಸದಸ್ಯರ ಖಾತೆಗೆ ಲಕ್ಷಾಂತರ ಹಣ ಜಮೆ: ದಾವಣಗೆರೆ, ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ ಆರು ಸಾವಿರ ಗೌರವಧನ ಹಾಕುವ ಬದಲು 50 ಪಾಲಿಕೆಯ ಮಾಜಿ ಸದಸ್ಯರ ಅಕೌಂಟುಗಳಿಗೆ 6 ರೂಪಾಯಿಯಿಂದ 16 ಲಕ್ಷ ರೂಪಾಯಿವರೆಗೆ 2021ರ ಜೂನ್​ನಲ್ಲಿ ಜಮಾ ಆಗಿತ್ತು. ಈ ವಿಚಾರದ ಕುರಿತು ಆಗ ಸಾಕಷ್ಟು ಗೊಂದಲ ಮೂಡಿಸಿತ್ತು. ಮಾಜಿ ಮೇಯರ್ ಎಸ್.ಟಿ. ವೀರೇಶ ಅವರು ಈ ಕುರಿತು ಸ್ಪಷ್ಟನೆಯನ್ನೂ ನೀಡಿದ್ದರು. ''ಪಾಲಿಕೆ‌ ಸದಸ್ಯರಿಗೆ ಆರು ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತದೆ. ಆದರೆ, ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಅಚಾತುರ್ಯ ಆಗಿತ್ತು. ಪಾಲಿಕೆ ಸದಸ್ಯರ ಖಾತೆಗೆ ಹಾಕಿದ್ದ ಹಣವನ್ನು ಬ್ಯಾಂಕ್ ಸಿಬ್ಬಂದಿ ಹಿಂಪಡೆದಿದ್ದರು. ಕೆಲವು ಪಾಲಿಕೆ ಸದಸ್ಯರ ಖಾತೆಗೆ ಹಾಕಿದ ಹಣ ಸಾಲಕ್ಕೆ ಕಡಿತವಾಗಿತ್ತು. ಅಂತಹ ಸದಸ್ಯರು ಹಣ ಹಿಂದಿರುಗಿಸುವುದಾಗಿ ಹೇಳಿದ್ದರು ಎಂದು ಅವರು ತಿಳಿಸಿದ್ದರು. ಇನ್ನೂ ಅವರ ಖಾತೆಗೂ 16 ಲಕ್ಷ ರೂಪಾಯಿ ಜಮಾ ಆಗಿತ್ತು. ಅದನ್ನು ಅವರು ಹಿಂದಿರುಗಿಸಿದ್ದರು.

ಇದನ್ನೂ ಓದಿ: 15% ಕಮಿಷನ್ ಹೆಸರಿನಲ್ಲಿ 2.20 ಕೋಟಿ ರೂಪಾಯಿ ವಂಚನೆ: ಇಬ್ಬರ ಬಂಧನ

ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಬಡ್ಡಿ ಹೊರೆ ಜಾಸ್ತಿ! ಹೆಚ್ಚಿಸಿಕೊಳ್ಳುವುದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.