ETV Bharat / bharat

ರಾಜಸ್ಥಾನದ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದಿಂದ ಬಂದ ಹಬೀಬಾ - ಬಾಂಗ್ಲಾದೇಶದಿಂದ ಬಂದ ಯುವತಿ

ಬಾಂಗ್ಲಾದೇಶದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ರಾಜಸ್ಥಾನಕ್ಕೆ ಬಂದಿದ್ದಾಳೆ.

bangladesh-girl-reached-rajastan-for-the-sake-of-her-love
ರಾಜಸ್ಥಾನದ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದಿಂದ ಬಂದ ಹಬೀಬಾ
author img

By ETV Bharat Karnataka Team

Published : Sep 5, 2023, 10:33 PM IST

ಅನೂಪ್​ಗಢ(ರಾಜಸ್ಥಾನ) : ಪಾಕಿಸ್ತಾನದಿಂದ ತನ್ನ ಪ್ರಿಯಕರನನ್ನು ಭೇಟಿಯಾಗಲು ನಾಲ್ಕು ಮಕ್ಕಳ ತಾಯಿಯೊಬ್ಬಳು ಉತ್ತರಪ್ರದೇಶಕ್ಕೆ ಬಂದಿದ್ದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಇದೀಗ ಇಂತಹುದೇ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ದೂರದ ಬಾಂಗ್ಲಾದೇಶದಿಂದ ಯುವತಿಯೊಬ್ಬಳು ತನ್ನ ರಾಜಸ್ಥಾನದ ಪ್ರಿಯಕರನನ್ನು ಭೇಟಿಯಾಗಲು ಗಡಿ ದಾಟಿ ಬಂದಿದ್ದಾಳೆ.

ಹಬೀಬಾ ಅಲಿಯಾಸ್​ ಹನಿ ಬಾಂಗ್ಲಾದೇಶದಿಂದ ಬಂದ ಯುವತಿ. ಈಕೆ ಕಳೆದ ಎರಡು ದಿನಗಳ ಹಿಂದೆ ಅನೂಪ್​ಗಢ ಜಿಲ್ಲೆಯ 13 ಡಾಲ್​ ಗ್ರಾಮದ ರಾವ್ಲ ಮಂಡಿಗೆ ಆಗಮಿಸಿದ್ದು, ಗೆಳೆಯನ ಮನೆಯಲ್ಲಿ ವಾಸವಿದ್ದಳು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಹನಿ ಮತ್ತು ರೋಶನ್​ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿದ್ದಾರೆ. ಇವರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಬಳಿಕ ಹನಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದೇಶದಿಂದ ಟೂರಿಸ್ಟ್​ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ಬಳಿಕ ಪ್ರಿಯಕರ ರೋಶನ್​ನ ಮನೆಯಲ್ಲಿ ಕಳೆದೆರಡು ದಿನಗಳಿಂದ ವಾಸವಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪೊಲೀಸರು ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಬಾಂಗ್ಲಾದೇಶ ಹನಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಹನಿ ಬಾಂಗ್ಲಾದೇಶದಿಂದ ಕೊಲ್ಕತಾ- ದೆಹಲಿ ಮಾರ್ಗವಾಗಿ ಬಿಕನೇರ್​ ತಲುಪಿರುವುದಾಗಿ ಮಾಹಿತಿ ಕೂಡಾ ಕೊಟ್ಟಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಶನ್​ ತಾಯಿ, ರೋಶನ್​ಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದೆ. ಈತನಿಗೆ 7 ತಿಂಗಳ ಮಗುವಿದೆ ಎಂದು ಹೇಳಿದ್ದಾರೆ. ರೋಶನ್​ ತಂಗಿ ಪ್ರತಿಕ್ರಿಯಿಸಿ, ಕಳೆದ ಎರಡು ದಿನಗಳ ಹಿಂದೆ ನಮ್ಮ ಮನೆಗೆ ಹಬೀಬಾ ಬಂದಿದ್ದರು. ಇದೀಗ ಬಾಂಗ್ಲಾದೇಶಕ್ಕೆ ವಾಪಸ್​ ತೆರಳುವುದಿಲ್ಲ ಎನ್ನುತ್ತಿದ್ದಾಳೆ. ಆಕೆಯ ಬಳಿಯಲ್ಲಿ ಟೂರಿಸ್ಟ್​ ವೀಸಾ ಇದೆ. ಟೂರಿಸ್ಟ್​ ವೀಸಾ ಮುಗಿಯುವವರೆಗೆ ಅವಳು ಇಲ್ಲಿಂದ ತೆರಳುವುದಿಲ್ಲ. ನಾನು ಬಾಂಗ್ಲಾದೇಶಕ್ಕೆ ಮರಳಿದರೆ ನನ್ನನ್ನು ನಿಂದಿಸುತ್ತಾರೆ ಎಂದು ಹೇಳಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ.

ನನ್ನ ಮಗನಿಗೆ ಈಗಾಗಲೇ ಮದುವೆಯಾಗಿದೆ. ನಾವು ಹನಿಯನ್ನು ನಮ್ಮ ಜೊತೆ ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಆಕೆಯನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ರೋಶನ್​ ತಾಯಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾವಾಲ ಪೊಲೀಸ್​ ಅಧಿಕಾರಿ, ಹಬೀಬಾ ಟೂರಿಸ್ಟ್​ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ಇವರ ಬಳಿಯಲ್ಲಿ ಬಾಂಗ್ಲಾದೇಶದ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಪ್ರಧಾನಿ ಮೋದಿ, ಅಮಿತ್​ ಶಾ, ಯೋಗಿ, ಮೋಹನ್​ ಭಾಗವತ್​ಗೆ ರಾಖಿ ಕಳುಹಿಸಿದ ಪಾಕ್​ ಪ್ರಜೆ ಸೀಮಾ ಹೈದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.