ETV Bharat / bharat

ಶಬರಿಮಲೆ ಯಾತ್ರಾರ್ಥಿಗಳಿಗಾಗಿ 'ಅಯ್ಯನ್​' ಮಾರ್ಗಸೂಚಿ ಆ್ಯಪ್ ಅಭಿವೃದ್ಧಿ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಲಭ್ಯ

author img

By ETV Bharat Karnataka Team

Published : Nov 11, 2023, 8:08 PM IST

Ayyan App for Sabarimala Devotees: ಪ್ರಸಿದ್ಧ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮಲಯಾಳಂ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿ ಒದಗಿಸುವ ಅಯ್ಯನ್​ ಎಂಬ ಹೊಸ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.

Ayyan app for Sabarimala devotees from Kerala Forest Department Launched in five languages
ಶಬರಿಮಲೆ ಯಾತ್ರಾರ್ಥಿಗಳಿಗಾಗಿ 'ಅಯ್ಯನ್​' ಮಾರ್ಗಸೂಚಿ ಆ್ಯಪ್ ಅಭಿವೃದ್ಧಿ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಲಭ್ಯ

ಪತ್ತನಂತಿಟ್ಟ (ಕೇರಳ): ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರವಾದ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಕೇರಳ ಅರಣ್ಯ ಇಲಾಖೆಯು 'ಅಯ್ಯನ್​' ಎಂಬ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಹೊಸ ಅಪ್ಲಿಕೇಶನ್ ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ಮಲಯಾಳಂ, ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿಯನ್ನು ಇದು ಒದಗಿಸುತ್ತದೆ.

ಕೇರಳ ಅರಣ್ಯ ಇಲಾಖೆಯ ಹೊಸ ಆ್ಯಪ್ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮೀಸಲಾಗಿ ಕಾರ್ಯನಿರ್ವಹಿಸುತ್ತದೆ. ಶಬರಿಮಲೆಗೆ ಬರುವ ಯಾತ್ರಿಕರು ಮುಂಬರುವ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಪೂಜೆ ಋತುವಿನಲ್ಲಿ ಇದನ್ನು ಬಳಸಬಹುದು. ಪಂಪಾ - ಸನ್ನಿಧಾನಂ - ಸ್ವಾಮಿ ಅಯ್ಯಪ್ಪ ರಸ್ತೆ, ಪಂಪಾ - ನಿಲಿಮಲ - ಸನ್ನಿಧಾನಂ, ಎರುಮೇಲಿ - ಅಝುಟಕಡವ್ - ಪಂಂಬಾ, ಸತ್ರಂ - ಉಪ್ಪುಪಾರ - ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ.

ಜೊತೆಗೆ ಸೇವಾ ಕೇಂದ್ರಗಳು, ವೈದ್ಯಕೀಯ ತುರ್ತು ಚಿಕಿತ್ಸಾ ಘಟಕ, ವಸತಿ, ಆನೆಗಳ ಬಗ್ಗೆ ಮಾಹಿತಿಯನ್ನೂ ಆ್ಯಪ್ ಒಳಗೊಂಡಿದೆ. ಸ್ಕ್ವಾಡ್ ತಂಡ, ಸಾರ್ವಜನಿಕ ಶೌಚಾಲಯಗಳು, ಪ್ರತಿ ಬೇಸ್‌ನಿಂದ ಸನ್ನಿಧಾನಂವರೆಗಿನ ಅಂತರ, ಅಗ್ನಿಶಾಮಕ ದಳ, ಪೊಲೀಸ್ ಸಹಾಯ ಪೋಸ್ಟ್, ಇಕೋ ಶಾಪ್, ಉಚಿತ ಕುಡಿಯುವ ನೀರಿನ ವಿತರಣಾ ಕೇಂದ್ರಗಳು ಮತ್ತು ಸಾಂಪ್ರದಾಯಿಕ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದು ಸ್ಥಳದಿಂದ ಮುಂದಿನ ಕೇಂದ್ರಗಳಿಗೆ ದೂರ, ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆಚರಣೆಗಳು ಮತ್ತು ಸಾಮಾನ್ಯ ಮಾರ್ಗಸೂಚಿಗಳನ್ನು ಸಹ ಹೊಸ ಆ್ಯಪ್‌ನಲ್ಲಿ ವಿವರಿಸಲಾಗಿದೆ.

ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಆ್ಯಪ್​ ಲಭ್ಯ: ಇದು ಯಾತ್ರಾರ್ಥಿಗಳಿಗೆ ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಜೈವಿಕ ವೈವಿಧ್ಯತೆ ಮತ್ತು ಶ್ರೀಮಂತಿಕೆಯ ಒಳನೋಟವನ್ನೂ ವಿವರಿಸುತ್ತದೆ. ಶಬರಿಮಲೆ ದೇವಸ್ಥಾನದ ಬಗ್ಗೆ ಎಲ್ಲ ಪೂಜೆ ಮತ್ತು ಕೊಡುಗೆ ವಿವರಗಳು ಮತ್ತು ಇತರ ಮಾಹಿತಿ ಸಹ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ 'ಅಯ್ಯನ್' ಅಪ್ಲಿಕೇಶನ್​ಅನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯಾವುದೇ ಸ್ಮಾರ್ಟ್‌ಫೋನ್‌ನಲ್ಲೂ ಇದು ಕಾರ್ಯನಿರ್ವಹಿಸುತ್ತದೆ.

ಐದು ಭಾಷೆಗಳಲ್ಲಿ ಮಾಹಿತಿ: 'ಅಯ್ಯನ್​' ಆ್ಯಪ್ ಮಲಯಾಳಂ ಮತ್ತು ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳಲ್ಲೂ ಮಾಹಿತಿ ನೀಡುತ್ತದೆ. ತಮಿಳು, ತೆಲುಗು ಜೊತೆಗೆ ಹಿಂದಿಯಲ್ಲೂ ಮಾಹಿತಿ ಸಿಗಲಿದೆ. ಶಬರಿಮಲೆಯ ನೈಸರ್ಗಿಕ ಚಾರಣ ಮಾರ್ಗಗಳ ಎಲ್ಲ ಗೇಟ್‌ಗಳಲ್ಲಿ ಅಪ್ಲಿಕೇಶನ್‌ನ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಯಾತ್ರಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಇದು ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ತುರ್ತು ಸಹಾಯವಾಣಿ ಸಂಖ್ಯೆಗಳನ್ನೂ ಸಹ ಒಳಗೊಂಡಿದೆ.

ಈ ಆ್ಯಪ್‌ನ ವಿಶೇಷತೆಯೆಂದರೆ ಒಬ್ಬರು ಅದನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳಲ್ಲೂ ಬಳಕೆ ಮಾಡಬಹುದು. ಆಯ್ದ ಮಾರ್ಗಗಳಲ್ಲಿ ವಿವಿಧ ಎಚ್ಚರಿಕೆಗಳನ್ನು ಅಪ್ಲಿಕೇಶನ್ ಮೂಲಕ ಸ್ವೀಕರಿಸಬಹುದು. ಕಂಜಿರಪಲ್ಲಿ ಮೂಲದ ಲೆಪರ್ಡ್ ಟೆಕ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್​ಅನ್ನು ಶಬರಿಮಲೆ ಮಾರ್ಗಗಳಲ್ಲಿ ಅಯ್ಯಪ್ಪನ ಭಕ್ತರಿಗೆ ನೆರವು ಆಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಸಿಂಧು: 'ಲಕ್ಕಿ ಡ್ರಾ' ಆಯ್ಕೆ ರದ್ಧತಿ ಕೋರಿ ಸಲ್ಲಿಸಿದ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.