ಮೇಷ: ಆರಂಭಿಸಿದ ಕಾರ್ಯಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಅಪಾಯಗಳು ದೂರವಾಗುತ್ತವೆ. ಎಚ್ಚರಿಕೆಯಿಂದ ಮಾತನಾಡಿ. ಅಷ್ಟಲಕ್ಷ್ಮಿ ಸ್ತೋತ್ರ ಓದುವುದು ಒಳಿತು.
ವೃಷಭ: ಈಗಾಗಲೇ ಆರಂಭಿಸಿರುವ ಕೆಲಸಗಳಲ್ಲಿ ಅಡೆತಡೆಗಳು ಎದುರಾದರೂ ನಿವಾರಿಸಲು ಪ್ರಯತ್ನಿಸುತ್ತೀರಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ಲಕ್ಷ್ಮೀ ಸ್ತುತಿ ಓದುವುದು ಶ್ರೇಯಸ್ಕರ.
ಮಿಥುನ: ಉತ್ಸಾಹದಿಂದ ಕೆಲಸ ಮಾಡುತ್ತೀರಿ. ಬಂಧುಗಳ ಸಹಕಾರ ದೊರೆಯುವುದು. ಎಲ್ಲ ವಿಷಯವನ್ನು ಕುಟುಂಬದೊಂದಿಗೆ ಚರ್ಚಿಸುವ ಮೂಲಕ ಪ್ರಾರಂಭಿಸಿ. ಲಕ್ಷ್ಮೀ ಸಹಸ್ರನಾಮ ಓದಿದರೆ ಶುಭಫಲ.
ಕರ್ಕಾಟಕ: ಪ್ರಾರಂಭಿಸಿದ ಕಾರ್ಯಗಳಲ್ಲಿ ಚಿಕ್ಕ ಸಮಸ್ಯೆಗಳು ಎದುರಾದ್ರೂ ಪೂರ್ಣಗೊಳಿಸುತ್ತೀರಿ. ನಿಮ್ಮ ಧೈರ್ಯವೇ ನಿಮ್ಮನ್ನು ಗೆಲ್ಲಿಸುತ್ತದೆ. ಕೆಲವು ಪರಿಸ್ಥಿತಿಗಳು ನಿಮ್ಮನ್ನು ನಿರುತ್ಸಾಹಗೊಳಿಸಬಹುದು. ಕೆಲವು ವ್ಯವಹಾರಗಳಲ್ಲಿ ಬುದ್ದಿಯಿಂದ ವ್ಯವಹರಿಸಿ. ವಿಷ್ಣುನಾಮ ಸ್ಮರಣ ಮಾಡಿ.
ಸಿಂಹ: ಒಂದು ಪ್ರಮುಖ ವಿಷಯದಲ್ಲಿ ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಪ್ರಗತಿ ಹೊಂದುತ್ತೀರಿ. ನಿಮ್ಮ ಅಭಿವೃದ್ಧಿಯ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತೀರಿ. ಪ್ರಾರಂಭಿಸಿದ ಕಾರ್ಯಗಳಲ್ಲಿ ಕೆಲವು ತೊಂದರೆಗಳು ಎದುರಾದರೂ ಆ ಕಾರ್ಯ ಸಂಪನ್ನವಾಗುತ್ತದೆ. ಲಕ್ಷ್ಮೀದೇವಿ ಸ್ತೋತ್ರವನ್ನು ಓದುವುದು ಇನ್ನೂ ಉತ್ತಮ.
ಕನ್ಯಾ: ನೀವು ನಿಮ್ಮ ಸ್ವಂತ ಕ್ಷೇತ್ರಗಳಲ್ಲಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂಬಂಧಿಕರೊಂದಿಗೆ ವೈರತ್ವ ಬೆಳೆಯುವ ಸಾಧ್ಯತೆಯಿದೆ. ಮನಸ್ತಾಪ, ಶ್ರಮ ಹೆಚ್ಚಾಗುತ್ತದೆ. ಗಣಪತಿ ಪೂಜಿಸುವುದರಿಂದ ಇನ್ನೂ ಉತ್ತಮ ಫಲಿತಾಂಶ ದೊರೆಯುತ್ತದೆ.
ತುಲಾ: ಸ್ಮರಣೀಯ ವಿಜಯಗಳು ಸ್ವಂತವಾಗುತ್ತವೆ. ನಿಮ್ಮ ಕೆಲಸಗಳಿಂದ ಎಲ್ಲರ ಮನ ಗೆಲ್ಲುತ್ತೀರಿ. ಒಂದು ಒಳ್ಳೆಯ ಸುದ್ದಿ ಸಂತಸ ತರುತ್ತದೆ. ದುರ್ಗಾ ಧ್ಯಾನ ಸ್ತೋತ್ರ ಪಠಿಸಿ.
ವೃಶ್ಚಿಕ: ವೃತ್ತಿ, ಉದ್ಯೋಗ, ವ್ಯಾಪಾರ ಲಾಭದಾಯಕ. ಪ್ರಯತ್ನಗಳು ಫಲ ನೀಡುತ್ತವೆ. ಕಟುಂಬ ನೆಮ್ಮದಿಯಾಗಿರುತ್ತದೆ. ಇಷ್ಟ ದೇವರನ್ನು ಪ್ರಾರ್ಥಿಸಿ.
ಧನು: ಅಭಿವೃದ್ಧಿಯ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತೀರಿ. ಕುಟುಂಬದ ವಾತಾವರಣ ಅನುಕೂಲಕರ. ಪ್ರಾರಂಭಿಸಿದ ಕಾರ್ಯಗಳನ್ನು ಯೋಜಿಸಿದಂತೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಮಕರ: ಪ್ರಾರಂಭಿಸಲಿರುವ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತೀರಿ. ಮಾನಸಿಕ ಆನಂದವನ್ನು ಪಡೆಯುತ್ತೀರಿ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಬಂಧು, ಮಿತ್ರರ ಜೊತೆ ಖುಷಿಯಿಂದ ಸಮಯ ಕಳೆಯುವಿರಿ. ವಿಷ್ಣು ಸಹಸ್ರನಾಮ ಓದಿ.
ಕುಂಭ: ನಿಮ್ಮ ಕ್ಷೇತ್ರಗಳಲ್ಲಿ ನೀವು ಯಶಸ್ಸು ಸಾಧಿಸುವಿರಿ. ಅಧಿಕಾರಿಗಳೊಂದಿಗೆ ತೃಪ್ತಿಕರ ಸಂಬಂಧ ಏರ್ಪಡುತ್ತದೆ. ಗೆಳೆಯರ ಸಹಕಾರದಿಂದ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಶ್ರೀರಾಮನಾಮ ಜಪ ಮಾಡುವುದೊಳಿತು.
ಮೀನ: ಶುಭಕಾಲ. ಇಷ್ಟಪಟ್ಟವರ ಜೊತೆ ಸಮಯ ಕಳೆಯುತ್ತೀರಿ. ನಿಮ್ಮ ಪ್ರತಿಭೆಯನ್ನು ಪ್ರಶಂಸಿಸಲಾಗುತ್ತದೆ. ವ್ಯವಹಾರವೊಂದಲ್ಲಿ ಹಣ ಕೈಗೆ ಸೇರುತ್ತದೆ. ಬುದ್ಧಿಬಲ ಚೆನ್ನಾಗಿರುತ್ತದೆ. ನಿರ್ಣಾಯಕ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಓದುವುದು ಒಳ್ಳೆಯದು.