ಹೈದರಾಬಾದ್: 2023ರ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ 103 ಮಂದಿ ಹಾಲಿ ಶಾಸಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2018ಕ್ಕೆ ಹೋಲಿಸಿದರೆ, 2023 ರ ವೇಳೆಗೆ ಅಭ್ಯರ್ಥಿಗಳ ಆಸ್ತಿಯ ಮೌಲ್ಯ ಗಮನಾರ್ಹವಾಗಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಪ್ಲಾಟ್ಫಾರ್ಮ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಚುನಾವಣ ಕಣದಲ್ಲಿರುವ 103 ಮಂದಿ ಹಾಲಿ ಶಾಸಕರ ಆಸ್ತಿಗಳ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 103 ಶಾಸಕರ ಪೈಕಿ 90 ಶಾಸಕರ ಆಸ್ತಿ ಶೇ.3 ರಿಂದ 1331ರಷ್ಟು ಏರಿಕೆಯಾಗಿದ್ದರೆ ಉಳಿದ 13 ಶಾಸಕರ ಆಸ್ತಿ ಶೇ.1ರಿಂದ ಶೇ.79 ರಷ್ಟಕ್ಕೆ ಇಳಿಕೆಯಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಆಸ್ತಿ ಮೌಲ್ಯವು 2018 ರಲ್ಲಿ 23.55 ಕೋಟಿ ರೂ.ಗಳಿಂದ 2023 ರ ವೇಳೆಗೆ 58.93 ಕೋಟಿ ರೂ.ಗೆ ಅಂದರೆ ಶೇ.150 ರಷ್ಟು ಹೆಚ್ಚಾಗಿದೆ. ಅವರ ಪುತ್ರ ಕೆಟಿಆರ್ ಅವರ ಆಸ್ತಿ ಮೌಲ್ಯವು 41.82 ಕೋಟಿ ರೂ.ಗಳಿಂದ 53.31 ಕೋಟಿ ರೂ.ಗಳಿಗೆ ಏರಿದರೆ, ಕೆಸಿಆರ್ ಅವರ ಸಂಬಂಧಿ ಹರೀಶ್ ರಾವ್ ಅವರ ಆಸ್ತಿಯ ಮೌಲ್ಯವು 11.44 ಕೋಟಿ ರೂ.ಗಳಿಂದ 24.29 ಕೋಟಿ ರೂ.ಗೆ ಹೆಚ್ಚಳವಾಗಿದೆ. ಪ್ರಸ್ತುತ ಚುನಾವಣಾ ಕಣದಲ್ಲಿರುವ ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 14.44 ಕೋಟಿ ರೂ.ಗಳಷ್ಟಿದ್ದರೆ, 2023 ರ ಚುನಾವಣೆಯಲ್ಲಿ ಇದು 23.87 ಕೋಟಿ ರೂ.ಗೆ ತಲುಪಿದೆ. ಐದು ವರ್ಷಗಳಲ್ಲಿ ಸರಾಸರಿ ಆಸ್ತಿ ಮೌಲ್ಯವು ರೂ.9.43 ಕೋಟಿಗಳಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ರಾಜ್ಯಾದ್ಯಂತ 144 ಸೆಕ್ಷನ್ ಜಾರಿ
ಬಿಆರ್‌ಎಸ್‌ನಿಂದ 90 ಮಂದಿ ಹಾಲಿ ಶಾಸಕರು ಸ್ಪರ್ಧಿಸುತ್ತಿದ್ದಾರೆ. ಅವರ ಸರಾಸರಿ ಆಸ್ತಿ ರೂ.14.94 ಕೋಟಿಗಳಿಂದ ರೂ.25.18 ಕೋಟಿಗಳಿಗೆ ಏರಿಕೆಯಾಗಿದೆ. ಕಾಂಗ್ರೆಸ್ ನಿಂದ ಆರು ಶಾಸಕರು ಸ್ಪರ್ಧಿಸಿದ್ದಾರೆ. ಅವರ ಸರಾಸರಿ ಆಸ್ತಿ ರೂ.4.22 ಕೋಟಿಗಳಿಂದ ರೂ.6.55 ಕೋಟಿಗಳವರೆಗೆ ಹೆಚ್ಚಾಗಿದೆ. ಎಂಐಎಂ ನಿಂದ ನಾಲ್ವರು ಶಾಸಕರು ಸ್ಪರ್ಧಿಸುತ್ತಿದ್ದಾರೆ. ಅವರ ಸರಾಸರಿ ಆಸ್ತಿ ರೂ.12.28 ಕೋಟಿಗಳಿಂದ ರೂ.19.52 ಕೋಟಿಗೆ ಏರಿಕೆಯಾಗಿದೆ. ಬಿಜೆಪಿಯಿಂದ ಮೂವರು ಶಾಸಕರು ಸ್ಪರ್ಧಿಸುತ್ತಿದ್ದಾರೆ. ಅವರ ಸರಾಸರಿ ಆಸ್ತಿ ರೂ.22.84 ಕೋಟಿಗಳಿಂದ ರೂ.25.05 ಕೋಟಿಗೆ ಹೆಚ್ಚಾಗಿದೆ.
ಹೆಸರು | ಪಕ್ಷ | ಕ್ಷೇತ್ರ | 2018(ರೂ.ಕೋಟಿಗಳಲ್ಲಿ) | 2023 (ರೂ.ಕೋಟಿಗಳಲ್ಲಿ) | ಶೇ.ಹೆಚ್ಚಳ |
ಪೈಲಾ ಶೇಖರ್ ರೆಡ್ಡಿ | ಬಿಆರ್ಎಸ್ | ಭುವನಗಿರಿ | 91.04 | 227.51 | 150 |
ಅಲ್ಲಾ ವೆಂಕಟೇಶ್ವರ ರೆಡ್ಡಿ | ಬಿಆರ್ಎಸ್ | ದೇವರಕದ್ರಾ | 20.15 | 79.17 | 293 |
ಮಂಚಿಕಾಂತಿ ಕಿಶನ್ ರೆಡ್ಡಿ | ಬಿಆರ್ಎಸ್ | ಇಬ್ರಾಹಿಂಪಟ್ಟಣಂ | 7.99 | 60.58 | 658 |
ಸಿ.ಎಚ್.ಮಲ್ಲಾರೆಡ್ಡಿ | ಬಿಆರ್ಎಸ್ | ಮೆಡ್ಚಲ್ | 49.26 | 95.94 | 95 |
ಎಸ್.ರಾಜೇಂದರ್ ರೆಡ್ಡಿ | ಬಿಆರ್ಎಸ್ | ನಾರಾಯಣಪೇಟಾ | 66.21 | 111.42 | 68 |