ETV Bharat / bharat

ಪಂಚರಾಜ್ಯ ಫೈಟ್​: ಪಂಜಾಬ್, ಉತ್ತರಾಖಂಡ, ಗೋವಾದಲ್ಲಿ ಒಂದೇ ಹಂತ, ಮಣಿಪುರದಲ್ಲಿ 2 ಹಂತದ ವೋಟಿಂಗ್​​ - ಗೋವಾ ವಿಧಾನಸಭೆ ಚುನಾವಣೆ

Assembly Election date : ಮಹಾಮಾರಿ ಕೊರೊನಾ ಕರಿನೆರಳಿನ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಮತದಾನ ನಡೆಸಲು ನಿರ್ಧರಿಸಿದೆ. ಕೋವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಐದು ರಾಜ್ಯಗಳಲ್ಲಿ ಒಟ್ಟು ಏಳು ಹಂತದಲ್ಲಿ ಮತದಾನ ನಡೆಸಲಿದೆ..

Assembly Election 2022
Assembly Election 2022
author img

By

Published : Jan 8, 2022, 5:40 PM IST

ನವದೆಹಲಿ : ಬಹುನಿರೀಕ್ಷಿತ ಗೋವಾ, ಪಂಜಾಬ್​, ಉತ್ತರಪ್ರದೇಶ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆಗೆ ಮುಹೂರ್ತ ಫಿಕ್ಸ್ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದೆ.

ಅತಿ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಉಳಿದಂತೆ ಗೋವಾ, ಪಂಜಾಬ್​, ಉತ್ತರಾಖಂಡ್​ ರಾಜ್ಯಗಳಿಗೆ ಒಂದೇ ಹಂತ ಹಾಗೂ ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ.

ಮಣಿಪುರ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 60

  • ಮೊದಲ ಹಂತ ಫೆ. 27ರಂದು ಮತದಾನ
  • (38 ಕ್ಷೇತ್ರಗಳಲ್ಲಿ ವೋಟಿಂಗ್)
  • 2ನೇ ಹಂತದ ಚುನಾವಣೆ ಮಾರ್ಚ್​ 3
  • (22 ಕ್ಷೇತ್ರಗಳಿಗೆ ಮತದಾನ)

ಪಂಜಾಬ್​ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 117

  • ಫೆ. 14ರಂದು ಒಂದೇ ಹಂತದಲ್ಲಿ ವೋಟಿಂಗ್

ಗೋವಾ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 40

  • ಫೆ. 14ರಂದು ಒಂದೇ ಹಂತದಲ್ಲಿ ಮತದಾನ

ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ : ಒಟ್ಟು ಕ್ಷೇತ್ರ 70

  • ಫೆ. 14ರಂದು ಒಂದೇ ಹಂತದಲ್ಲಿ ವೋಟಿಂಗ್​​

ಎಲ್ಲ ಮತಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್​​ ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಅತಿ ಹೆಚ್ಚಿನ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಚುನಾವಣೆ ಡ್ಯೂಟಿ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೋವಿಡ್​ನ ಎರಡು ಡೋಸ್​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

Assembly Election 2022
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ

ಇದನ್ನೂ ಓದಿರಿ: ಉತ್ತರ ಪ್ರದೇಶ ಚುನಾವಣೆಗೆ ಮುಹೂರ್ತ ಫಿಕ್ಸ್​: 7 ಹಂತಗಳಲ್ಲಿ ವೋಟಿಂಗ್​, ಮಾರ್ಚ್​​ 10ಕ್ಕೆ ಫಲಿತಾಂಶ

ಒಮಿಕ್ರಾನ್​, ಕೋವಿಡ್​ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಆದರೆ, ಮತದಾನ ನಡೆಸಬೇಕಾಗಿರುವುದು ಇಲಾಖೆ ಕರ್ತವ್ಯವಾಗಿದೆ. ಕೇಂದ್ರದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್​, ಮಾಸ್ಕ್​ ಹಾಗೂ ಸ್ಯಾನಿಟೈಸರ್​ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಎಲ್ಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ಪೋಸ್ಟಲ್​​ ವ್ಯವಸ್ಥೆ ಮಾಡಲಾಗಿದೆ ಎಂದಿದೆ.

ಪ್ರಮುಖವಾಗಿ ಮಣಿಪುರದಲ್ಲಿ ಪ್ರತಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 28 ಲಕ್ಷ ರೂ. ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ ₹40 ಲಕ್ಷಕ್ಕೆ ವೆಚ್ಚವನ್ನ ನಿಗದಿಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.