ದಿಸ್ಪೂರ್(ಅಸ್ಸೋಂ): ಉಲ್ಫಾ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಒಎನ್ಜಿಸಿಯ ಮೂವರು ಉದ್ಯೋಗಿಗಳ ಪೈಕಿ ಇಬ್ಬರನ್ನು ಭದ್ರತಾ ಪಡೆ ರಕ್ಷಿಸಿದ್ದು, ಮತ್ತೋರ್ವನಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಭಾರತೀಯ ಸೇನೆ ಹಾಗೂ ಅಸ್ಸೋಂ ರೈಫಲ್ ಟ್ರೂಪ್ಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಮೋಹಿನಿ ಮೋಹನ್ ಹಾಗೂ ಅಲಕೇಶ್ ಸೈಕಿಯಾ ಅವರನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ರಿತುಲ್ ಸೈಕಿಯಾಗೋಸ್ಕರ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಅಸ್ಸೋಂನ ಲಾಕ್ವಾ ಫೀಲ್ಡ್ ನಲ್ಲಿನ ರಿಗ್ ಸೈಟ್ನಲ್ಲಿ ಕಳೆದ ವಾರ ಕಾರ್ಯನಿರ್ವಹಿಸುತ್ತಿದ್ದ ವೇಳೆ ಇವರನ್ನ ಅಪಹರಣ ಮಾಡಲಾಗಿತ್ತು. ಕಾರ್ಯಾಚರಣೆ ಈಗಲೂ ಪ್ರಗತಿಯಲ್ಲಿದ್ದು, ಒಂದು AK 47 ನ್ನು ವಶಕ್ಕೆ ಪಡೆಯಲಾಗಿದೆ. ಈ ಸಿಬ್ಬಂದಿಯ ಅಪಹರಣದ ಹೊಣೆಯನ್ನು ಉಲ್ಫಾ ಹೊತ್ತುಕೊಂಡಿಲ್ಲ ಎನ್ನಲಾಗ್ತಿದೆ.
ಈ ಕಾರ್ಯಾಚರಣೆ ನಡೆಯುವುದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ ಪೊಲೀಸರು ಉಲ್ಫಾ ಬೆಂಬಲಿಗರು ಸೇರಿ 14 ಮಂದಿಯನ್ನು ರಕ್ಷಿಸಿದ್ದರು.