ETV Bharat / bharat

ಲೋನ್​ ಆ್ಯಪ್ ಮೂಲಕ ವಂಚಿಸುತ್ತಿದ್ದ ಪುತ್ರನ ಬಂಧನಕ್ಕೆ ಕೈಜೋಡಿಸಿದ ತಂದೆ

author img

By

Published : Jan 1, 2021, 5:46 PM IST

ಚೀನಾದ ಕಂಪನಿಗಳು ಆರು ತಿಂಗಳಲ್ಲಿ 21,000 ಕೋಟಿ ರೂ. ವಂಚನೆ ಎಸಗಿವೆ. ಕರ್ನೂಲ್‌ನ ನಾಗರಾಜು ಈ ಕಂಪನಿಗಳ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ನಾಗರಾಜು ಅವರನ್ನು ಎರಡು ದಿನಗಳ ಹಿಂದೆ ಹೈದರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.

ASI helps to arrest his son in cheating people with loan apps business
ಲೋನ್​ ಆ್ಯಪ್ ಮೂಲಕ ವಂಚನೆ ಮಾಡುತ್ತಿದ್ದ ಪುತ್ರನ ಬಂಧನಕ್ಕೆ ಕೈಜೋಡಿಸಿದ ತಂದೆ

ಹೈದರಾಬಾದ್: ಲೋನ್​ ಆ್ಯಪ್​ ಮೂಲಕ ಜನರಿಗೆ ವಂಚಿಸುತ್ತಿದ್ದ ಮಗನನ್ನು ಕಂಬಿ ಹಿಂದೆ ತಳ್ಳುವಲ್ಲಿ ಪೊಲೀಸರಿಗೆ ತಂದೆ ಸಹಾಯ ಮಾಡಿದ ಘಟನೆ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ.

ಲೋನ್​ ಅಪ್ಲಿಕೇಶನ್‌ಗಳ ವ್ಯವಹಾರವು ತೆಲುಗು ರಾಜ್ಯಗಳಲ್ಲಿ ಆತಂಕ ಸೃಷ್ಟಿಸುತ್ತಿದೆ. ಚೀನಾದ ಕಂಪನಿಗಳು ಆರು ತಿಂಗಳಲ್ಲಿ 21,000 ಕೋಟಿ ರೂ. ವಂಚನೆ ಎಸಗಿವೆ. ಕರ್ನೂಲ್‌ನ ನಾಗರಾಜು ಈ ಕಂಪನಿಗಳ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಅವರ ಸಹೋದರ ಈಶ್ವರ್ ಕುಮಾರ್ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜು ಅವರನ್ನು ಎರಡು ದಿನಗಳ ಹಿಂದೆ ಹೈದರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.

ನಾಗರಾಜು ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದು, ಮಗನನ್ನು ಬಂಧಿಸಲು ಸಹಾಯ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ನಾಗರಾಜು ಪರೋಕ್ಷವಾಗಿ ಅನೇಕ ಜನರಿಗೆ ಮೋಸ ಮಾಡಿದ್ದಾರೆ ಮತ್ತು ಅಪರಾಧ ಕೃತ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಅದನ್ನರಿತ ತಂದೆ ಮಗನಿಗೆ ಊರಿಗೆ ಬರುವಂತೆ ಪಟ್ಟು ಹಿಡಿದಿದ್ದಾರೆ. ನಾಗರಾಜು ಮೂರು ದಿನಗಳ ಹಿಂದೆ ತಮ್ಮ ಮನೆಗೆ ಬಂದಿದ್ದಾರೆ. ತಕ್ಷಣ ನಾಗರಾಜು ತಂದೆ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿ, ಪುತ್ರನ ಬಂಧನಕ್ಕೆ ಸಹಕರಿಸಿದ್ದಾರೆ.

ಇದನ್ನೂ ಓದಿ: ರಾತ್ರಿ ವೇಳೆ ಆ್ಯಕ್ಟೀವ್ ಆಗ್ತಿದ್ದ ಕಾಮುಕ ; ಖ್ಯಾತ ಲೈಂಗಿಕ ತಜ್ಞೆ ಹೆಸರಿನಲ್ಲಿ ಮಹಿಳೆಯರಿಗೆ ಅಶ್ಲೀಲ 'ಸಂದೇಶ'!

ಆರೋಪಿ ನಾಗರಾಜು ತಂದೆ ಕರ್ನೂಲ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ನಾಗರಾಜು ಮೊದಲು ಇನ್ ಆ್ಯಪ್ ಸಾಲ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಆತನ ಸಹೋದರ ಈಶ್ವರ್ ಕುಮಾರ್ ಸಹ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡರು. ಸಹೋದರ ನಾಗರಾಜು ಬಂಧನದ ನಂತರ ಈಶ್ವರ್ ಕುಮಾರ್ ಕೂಡ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.