ನವದೆಹಲಿ : ನಿದ್ರಾಹೀನತೆ, ಒತ್ತಡ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಅನಾಬೊಲಿಕ್ ಔಷಧಿ ಬಳಸಲು ಅದರ ಗುಣಲಕ್ಷಣಗಳಿಗೆ ಪ್ರಮುಖವಾಗಿ ಹೆಸರುವಾಸಿಯಾದ ಅಶ್ವಗಂಧವು ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ಎದುರಿಸಲು ವ್ಯಾಪಕವಾಗಿ ಬಳಸಲಾಗುವ ಒಂದು ಗಿಡಮೂಲಿಕೆ ಔಷಧಿಯಾಗಿದೆ.
ಅಶ್ವಗಂಧವನ್ನು ವಿಂಟರ್ ಚೆರ್ರಿ ಅಥವಾ ಇಂಡಿಯನ್ ಜಿನ್ಸೆಂಗ್ ಎಂದೂ ಕರೆಯುತ್ತಾರೆ. ತಜ್ಞ ವೈದ್ಯ ಡಾ. ರಂಗನಾಯುಕುಲು, ಆಯುರ್ವೇದದಲ್ಲಿ ಪಿಹೆಚ್‌ಡಿ ಮುಗಿಸಿರುವ ಇವರ ಪ್ರಕಾರ, ವಿಥಾನಿಯಾ ಸೋಮ್ನಿಫೆರಾ (ಅಶ್ವಗಂಧ್ರಾ) ಸೋಲಾನೇಶಿಯ ಜಾತಿಗೆ ಸೇರಿದ ಸಸ್ಯವಾಗಿದೆ ಎಂದು ವಿವರಿಸುತ್ತಾರೆ.
ಇದು ದೀರ್ಘಕಾಲಿಕ ಸಸ್ಯ. ಇದರ ಮೂಲ ಔಷಧೀಯ ಬಳಕೆಗಳಿಗೆ ಉತ್ತಮವಾಗಿದೆ. ಅಶ್ವಗಂಧ ಭಾರತದಾದ್ಯಂತ ಬೆಳೆಯುತ್ತದೆ ಮತ್ತು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಅದರ ಬೆಳವಣಿಗೆಯು ಉತ್ತಮವಾಗಿರುತ್ತದೆ.
ಲಭ್ಯತೆ
ಅಶ್ವಗಂಧದ ಒಣಗಿದ ಕಾಂಡಗಳು ಮತ್ತು ಪುಡಿ ಸೇರಿ ವಿವಿಧ ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ ಎಂದು ಡಾ.ರಂಗನಾಯುಕುಲು ತಿಳಿಸಿದ್ದಾರೆ. ಇದಲ್ಲದೆ, ಸಿದ್ಧಪಡಿಸಿದ ಉತ್ಪನ್ನಗಳಾದ ಘೃತಮ್ (ತುಪ್ಪ), ಕ್ವಾಥಾ (ಕಷಾಯ), ಅರಿಸ್ಟಾ (ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ನಾರು), ತೈಲಾ, ಲೆಪಾ, ಚೂರ್ನಾ (ಪುಡಿ), ಲೆಹ್ಯಾ (ಸೇವಿಸಬಹುದಾದ) ಮತ್ತು ಟ್ಯಾಬ್ಲೆಟ್ ರೂಪಗಳು ಆಯುರ್ವೇದ ವೈದ್ಯಕೀಯ ಅಂಗಡಿಗಳಲ್ಲಿ ಮತ್ತು ಕೆಲ ವೈದ್ಯಕೀಯ ಅಂಗಡಿಗಳಲ್ಲಿ ಲಭ್ಯವಿದೆ.
ಅಶ್ವಗಂಧದ ಪ್ರಯೋಜನಗಳು
ತ್ವಚೆಯಲ್ಲಿ ಹೊಳಪು
1 ರಿಂದ 3 ಗ್ರಾಂ ಅಶ್ವಗಂಧ ಬೇರಿನ ಪುಡಿಯನ್ನು ಹಾಲು ಅಥವಾ ತುಪ್ಪ ಅಥವಾ ಬೆಚ್ಚಗಿನ ನೀರಿನಿಂದ 15 ದಿನಗಳವರೆಗೆ ತೆಗೆದುಕೊಂಡರೆ ಯೌವ್ವನಯುಕ್ತ ತ್ವಚೆಯಂತೆ ಹೊಳಪು ಬರಲಿದೆ. ದೇಹದ ತೂಕ ಹೆಚ್ಚಿಸುವವರಿಗೆ ಉತ್ತಮ.
ನಿದ್ರಾಹೀನತೆ
ಸಕ್ಕರೆ ಮತ್ತು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿದ 2 ರಿಂದ 4 ಗ್ರಾಂ ಅಶ್ವಗಂಧ ಪುಡಿಯನ್ನು ತೆಗೆದುಕೊಳ್ಳಿ. ಇದು ನಿದ್ರಾಹೀನತೆ ನಿವಾರಿಸುತ್ತದೆ ಮತ್ತು ಉತ್ತಮ ನಿದ್ರೆ ಉಂಟು ಮಾಡುತ್ತದೆ. ಇದು ಆತಂಕ, ನರರೋಗದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಖಿನ್ನತೆ ಶಮನಕಾರಿ ಮತ್ತು ಸೈಕೋಟ್ರೋಪಿಕ್ ಔಷಧದಂತೆ ಕಾರ್ಯನಿರ್ವಹಿಸುತ್ತದೆ.
ಶ್ವಾಸನಾಳದ ಅಸ್ತಮಾ
ಅಶ್ವಗಂಧದ ಬೂದಿ (ಕ್ಷಾರ) ಅನ್ನು ಜೇನುತುಪ್ಪದೊಂದಿಗೆ ತೆಗೆದುಕೊಂಡರೆ ಅಸ್ತಮಾ ನಿವಾರಣೆಗೆ ಸಹಕಾರಿಯಾಗಿದೆ.
ಬಂಜೆತನ ನಿವಾರಣೆ
ಬಂಜೆತನ ನಿವಾರಣೆಗೆ ಅಶ್ವಗಂಧ ಕಷಾಯದಿಂದ ತಯಾರಿಸಿದ ತುಪ್ಪ ಮತ್ತು ಹಾಲು ಸೇವಿಸಬಹುದು.
ಗಾಯಗಳು
ಬೆಲ್ಲ ಅಥವಾ ತುಪ್ಪದೊಂದಿಗೆ 2 ರಿಂದ 4 ಗ್ರಾಂ ಅಶ್ವಗಂಧ ಪುಡಿ ಸೇವಿಸಿ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಮೂತ್ರ ನಿಗ್ರಹಕ್ಕೆ ಪರಿಹಾರ
ಅಶ್ವಗಂಧದ 20 ಮಿಲಿ ಕಷಾಯವನ್ನು ಪ್ರತಿದಿನ ಸೇವಿಸುವುದರಿಂದ ಮೂತ್ರ ನಿಗ್ರಹದಂತ ಸಮಸ್ಯೆ ನಿವಾರಣೆಯಾಗುತ್ತದೆ. ಮೂತ್ರ ವಿಸರ್ಜನೆಯಲ್ಲಿ ನಿರಾತಂಕ, ನಿರ್ಜಲೀಕರಣ, ಮೂತ್ರಪಿಂಡದ ತೊಂದರೆಗಳು ನಿವಾರಣೆಯಾಗುತ್ತದೆ.
ಇವಷ್ಟೇ ಅಲ್ಲ ಅಶ್ವಗಂಧ ಬ್ಯಾಕ್ಟೀರಿಯಾ ಕೊಲ್ಲುತ್ತದೆ, ಆಂಟಿಪೈರೆಟಿಕ್ (ಜ್ವರವನ್ನು ಕಡಿಮೆ ಮಾಡುತ್ತದೆ), ನೋವು ನಿವಾರಕ, ಉರಿಯೂತ, ಸ್ನಾಯುವಿನ ಚಲನೆಯನ್ನು ಸರಾಗಗೊಳಿಸುತ್ತದೆ ಎಂದು ಡಾ.ರಂಗ ನಾಯಕುಲು ತಿಳಿಸಿದ್ದಾರೆ.
ಡೋಸೇಜ್
ಆಯುರ್ವೇದ ತಜ್ಞರು ಶಿಫಾರಸ್ಸು ಮಾಡಿದಂತೆ ಸಾಮಾನ್ಯ ಡೋಸೇಜ್ :
ಮಕ್ಕಳು: 500 ಮಿ.ಗ್ರಾಂ
ವಯಸ್ಕರು: 1 ಗ್ರಾಂನಿಂದ 3 ಗ್ರಾಂ ಅಥವಾ ದ್ರವ: 10 ರಿಂದ 20 ಮಿ.ಲೀ
ಮುಂಜಾಗ್ರತೆ ಅಗತ್ಯ
ಗರ್ಭಾವಸ್ಥೆಯಲ್ಲಿ ಅಶ್ವಗಂಧವನ್ನು ಶಿಫಾರಸು ಮಾಡಲಾಗುವುದಿಲ್ಲ. ಯಾಕೆಂದರೆ, ಇದು ಆರಂಭಿಕ ಅವಧಿ ಪೂರ್ವ ಹೆರಿಗೆಗೆ ಕಾರಣವಾಗಬಹುದು. ಅಲ್ಲದೆ ಹಾಲುಣಿಸುವ ತಾಯಂದಿರು ಅಶ್ವಗಂಧ ಸೇವನೆಯಿಂದ ದೂರವಿರಬೇಕು.
ಇತರೆ ಪ್ರಯೋಜನಗಳು
ಡಾ.ರಂಗ ನಾಯಕುಲು ತಿಳಿಸಿದಂತೆ ಅಶ್ವಗಂಧವು ಕೆಲವು ಉಪಯೋಗಗಳನ್ನು ಹೊಂದಿದೆ
- ಇದು ಸಾಮಾನ್ಯ ಶಕ್ತಿಯನ್ನು ನೀಡುತ್ತದೆ
- ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ
- ನಿದ್ದೆಯನ್ನು ವೃದ್ಧಿಸುತ್ತದೆ
- ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
- ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ
- ಜ್ಞಾಪಕ ಶಕ್ತಿ ವೃದ್ಧಿಸುತ್ತದೆ
- ಕ್ಯಾನ್ಸರ್ ಅನ್ನು ತಡೆಯುತ್ತದೆ, ಇದು ಕ್ಯಾನ್ಸರ್ ಚಿಕಿತ್ಸೆಯಲ್ಲೂ ಬಳಕೆಯಲ್ಲಿದೆ
ಹೀಗಾಗಿ, ಅಶ್ವಗಂಧವು ಅತ್ಯಂತ ಪರಿಣಾಮಕಾರಿಯಾದ ಆಯುರ್ವೇದ ಚಿಕಿತ್ಸೆಯಲ್ಲಿ ಒಂದಾಗಿದೆ. ಆದರೆ, ಈ ಔಷಧಿಯನ್ನು ಮೊದಲಿಗೆ ಆರಂಭಿಸುವಾಗ ಸೂಕ್ತ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ. ವಿಶೇಷವಾಗಿ ಥೈರಾಯ್ಡ್ ಗ್ರಂಥಿಯ ಹೈಪರ್ ಅಥವಾ ಹೈಪೋ ಸಮಸ್ಯೆಯಂತಹ ಜನರಿಗೆ ವೈದ್ಯರ ಸಲಹೆ ಅತ್ಯಗತ್ಯ.