ETV Bharat / state

ಅಕ್ರಮ ಗಣಿಗಾರಿಕೆ: 10 ಸಿ ಪ್ರವರ್ಗ ಗಣಿ ಗುತ್ತಿಗೆ ಎಸ್​ಐಟಿ ತನಿಖೆಗೆ ವಹಿಸಲು ಸಂಪುಟ ತೀರ್ಮಾನ

ಅಕ್ರಮ ಗಣಿಗಾರಿಕೆ ಕುರಿತಂತೆ 10 ಕಂಪನಿಗಳ ಗಣಿ ಗುತ್ತಿಗೆಗಳ ಬಗ್ಗೆ ಲೋಕಾಯುಕ್ತ ವಿಶೇಷ ತನಿಖಾ ದಳಕ್ಕೆ ವಹಿಸಲು ಸಂಪುಟ ನಿರ್ಣಯಿಸಿದೆ. ಅಲ್ಲದೆ, ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಇತರ ತೀರ್ಮಾನಗಳ ಮಾಹಿತಿ ಇಲ್ಲಿದೆ.

cabinet meeting
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Nov 14, 2024, 7:16 PM IST

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತಂತೆ 10 ಕಂಪನಿಗಳ 'ಸಿ' ಪ್ರವರ್ಗದ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ತನಿಖಾ ದಳಕ್ಕೆ (ಎಸ್​ಐಟಿಗೆ) ವಹಿಸಲು ತೀರ್ಮಾನಿಸಲಾಗಿದೆ.‌

10 ಕಂಪನಿಗಳಾದ ಮೈಸೂರು ಮ್ಯಾಂಗನೀಸ್ ಕಂ., ಎಂಎಸ್ ದಶರತ್ ರಾಮೀರೆಡ್ಡಿ, ಎಂಎಸ್ ಅಲ್ಲಂ ವೀರಭದ್ರಪ್ಪ, ಎಂಎಸ್ ಕರ್ನಾಟಕ ಲಿಂಪೋ, ಅಂಜನ ಮಿನರಲ್ಸ್, ಎಂಎಸ್ ರಜಿಯಾ ಖಾನಂ, ಮಿಲನ ಮಿನರಲ್ಸ್, ಎಂ.ಶ್ರೀನಿವಾಸಲು, ಲಕ್ಷ್ಮಿ ನರಸಿಂಹ ಮೈನಿಂಗ್ ಕಂ., ಎಂಎಸ್ ಜಿ. ರಾಜಶೇಖರ್ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ಲೋಕಾಯುಕ್ತ ಎಸ್​​ಐಟಿ ತನಿಖೆಗೆ ವಹಿಸಲು ತೀರ್ಮಾನ ಮಾಡಲಾಗಿದೆ.

ಈ ಕಂಪನಿಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10ಕ್ಕಿಂತ ಹೆಚ್ಚು ಗಣಿಗಾರಿಕೆ ಹೊಂಡಗಳು ಮತ್ತು ಮಂಜೂರಾದ ಗುತ್ತಿಗೆಗಿಂತ ಅಧಿಕ ಗಣಿಗಾರಿಕೆ ಮಾಡಿರುವ ಆರೋಪವಿದೆ. ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಲ್ಲಿ ತೊಡಗಿರುವ ಗುತ್ತಿಗೆಗಳು ಮತ್ತು ಇತರೆ ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಒಳಗೊಂಡಿದೆ. ರಾಜ್ಯದಲ್ಲಿ ಒಟ್ಟು 51ಸಿ ಕೆಟಗರಿ ಗಣಿ ಗುತ್ತಿಗೆಗಳಿವೆ. ಸುಪ್ರೀಂಕೋರ್ಟ್ ಈ ಮುಂಚೆ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಿ ಕೆಟಗರಿ ಕಂಪನಿಗಳ ಪರವಾನಿಗೆ ರದ್ದು ಮಾಡಿತ್ತು. ಈ ಸಿ ಕೆಟಗರಿ ಗಣಿ ಸಂಸ್ಥೆಗಳ ಮೇಲೆ ಎಸ್ಐಟಿ ತನಿಖೆಗೆ ವಹಿಸಲು ಸಮ್ಮತಿಸಿದೆ.

ಇದೇ ವೇಳೆ, ಸಿಬಿಐ ಅವರು ಆರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆ ನಡೆಸುವುದನ್ನು ನಿರಾಕರಿಸಿದೆ. ವಿವಿಧ ಕಾರಣ ಹೇಳಿ ತನಿಖೆಗೆ ನಿರಾಕರಣೆ ಮಾಡಲಾಗಿದೆ. ಹೀಗಾಗಿ, ಇದರ ತನಿಖೆ ಮಾಡುವ ಅಗತ್ಯ ಇದೆ. ಬೇಲೆಕೇರಿಯಂತೆ ಮದ್ರಾಸ್ ಸೇರಿ ಬೇರೆ ಬೇರೆ ಬಂದರುಗಳಿಂದ ಅದಿರು ಕಳ್ಳಸಾಗಣೆ ಮಾಡಿದ ಪ್ರಕರಣಗಳು ಇವಾಗಿವೆ. ಈ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.‌ ಇದರಲ್ಲಿ ವಿಶಾಖಪಟ್ಟಣಂ, ಕೃಷ್ಣಪಟ್ಟಣಂ ಬಂದರಿನಿಂದ ಅದಿರು ಕಳ್ಳ ಸಾಗಣೆ ಸೇರಿ ಅಂತಾರಾಜ್ಯದ ಪ್ರಕರಣಗಳೂ ಸೇರಿವೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಈ ಪ್ರಕರಣಗಳ ಸಂಬಂಧ ವಿವರವಾದ ಮಾಹಿತಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸಂಪುಟ ಸಭೆ ಸೂಚಿಸಿದೆ.

ಸಿಬಿಐ ತನಿಖೆಗೆ ವಹಿಸಿದ 9 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ತನಿಖೆಗೆ ನಿರಾಕರಿಸಿರುವ 6 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ವಹಿಸಲು ತೀರ್ಮಾನಿಸಲಾಗಿದೆ. ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿಬಿಐ ವಾಪಸ್​​ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ.

ಸಂಪುಟ ಸಭೆಯ ಇತರ ತೀರ್ಮಾನಗಳು;

  • ಕರ್ನಾಟಕ ರಾಜ್ಯ ವಿಧಾನಪರಿಷತ್​ನ ಒಂದು ಸದಸ್ಯ ಹುದ್ದೆಗೆ ರಾಜ್ಯಪಾಲರಿಂದ ನಾಮನಿರ್ದೇಶನ ಮಾಡಲು ಸಮ್ಮತಿ.
  • 2024-25, 2025-26ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು Cup and Cap ಮಾದರಿಯಲ್ಲಿ ಅನುಷ್ಠಾನಗೊಳಿಸಲು ಹೊರಡಿಸಿರುವ ಆದೇಶಕ್ಕೆ ಹಾಗೂ ಯೋಜನೆಯನ್ನು ಜಾರಿಗೊಳಿಸಲು ಕ್ಲಸ್ಟರ್‌ವಾರು ವಿಮಾ ಸಂಸ್ಥೆಗಳಿಗೆ ಕಾರ್ಯ ಹಂಚಿಕೆ ಮಾಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
  • ಬೆಂಗಳೂರಿನ ಹೆಬ್ಬಾಳದಲ್ಲಿ 20 ಕೋಟಿಗಳ ರೂ. ವೆಚ್ಚದಲ್ಲಿ (ಕೇಂದ್ರದ 12 ಕೋಟಿ ರೂ., ರಾಜ್ಯದ 8 ಕೋಟಿ ರೂ.) ''ಸಾವಯವ ಮತ್ತು ಸಿರಿಧಾನ್ಯ ಹಬ್'' ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಉಡುಪಿ, ದಾವಣಗೆರೆ, ವಿಜಯಪುರ ಜಿಲ್ಲಾಸ್ಪತ್ರೆಗಳ ತೀವ್ರ ನಿಗಾ ಆರೈಕೆ ಘಟಕಗಳಿಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಒಟ್ಟು ಅಂದಾಜು ಮೊತ್ತ 39.37 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ.
  • ರಾಮನಗರ ಜಿಲ್ಲೆ, ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಹಂತ-2ರ ಕಾಮಗಾರಿಯನ್ನು 125 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣದ 13.94 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಘಟನೋತ್ತರ ಆಡಳಿತಾತ್ಮಕ ಅನುಮೋದನೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನದ ಭೀಮ್ ಯೋಜನೆಯಡಿ ರಾಜ್ಯದ 7 ವೈದ್ಯಕೀಯ ಕಾಲೇಜುಗಳಲ್ಲಿ (ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಹುಬ್ಬಳ್ಳಿ, ಹಾಸನ, ಬಳ್ಳಾರಿ) 50 ಹಾಸಿಗೆಗಳ ಸಾಮರ್ಥ್ಯದ ಒಟ್ಟು Block 7 Critical Care ನಿರ್ಮಾಣದ 148.20 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
  • ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 69,919 ಅಂಗನವಾಡಿ ಕೇಂದ್ರಕ್ಕೆ ಪ್ರತಿ ಕೇಂದ್ರಕ್ಕೆ 3,000 ರೂ. ಘಟಕ ವೆಚ್ಚದಂತೆ ಶಾಲಾ ಪೂರ್ವ ಶಿಕ್ಷಣ ಕಿಟ್​ ಅನ್ನು 20.98 ಕೋಟಿ ರೂ‌. ವೆಚ್ಚದಲ್ಲಿ ಖರೀದಿಗೆ ಸಮ್ಮತಿ.
  • ಪ್ರಧಾನ ಮಂತ್ರಿ ಆವಾಸ್​ ಯೋಜನೆ ರಾಜ್ಯದಲ್ಲಿ ಅನುಷ್ಠಾನದ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಯೋಜನೆಯಡಿ ಪ್ರತಿ ಮನೆಗೆ ಕೇಂದ್ರದಿಂದ 1.50 ಲಕ್ಷ ರೂ. ಮಾತ್ರ ನೆರವು ಸಿಗುತ್ತಿದೆ. ಈ ಸಂಬಂಧ ಕೇಂದ್ರದಿಂದ ಪಾಲನ್ನು ಹೆಚ್ಚಿಸುವಂತೆ ಕೋರಿ ಸಿಎಂರಿಂದ ಕೇಂದ್ರ ಸರ್ಕಾರಕ್ಕೆ ವಿವರವಾದ ಪತ್ರ ಬರೆಯಲು ತೀರ್ಮಾನ.
  • ಬಡ್ಡಿ ಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲು ರಾಜ್ಯ ರೈತರು ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು (ಡಿಸಿಸಿ) ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್​ಗಳಿಂದ (ಪಿಕಾರ್ಡ್) ಸಾಲ ಪಡೆದು ದಿನಾಂಕ: 31.12.2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ಪಾವತಿಸಲು ನಿಗದಿಪಡಿಸಿದ್ದ 29.02.2024ನ್ನು 31.03.2024ರ ವರೆಗೆ ವಿಸ್ತರಿಸಿ ಹೊರಡಿಸಿರುವ ಸರ್ಕಾರದ ಆದೇಶಕ್ಕೆ ಘಟನೋತ್ತರ ಅನುಮೋದನೆ.
  • ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 55 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಹಾಗೂ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 3 ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಅವಧಿಪೂರ್ವ ಬಿಡುಗಡೆಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಬೆಂಗಳೂರು ಕಾರಾಗೃಹದ 19, ಮೈಸೂರು-04, ಬೆಳಗಾವಿ-09, ಕಲಬುರಗಿ-07, ವಿಜಯಪುರ-04, ಬಳ್ಳಾರಿ-09 ಮತ್ತು ಧಾರವಾಡ-03 ಸೇರಿ ಒಟ್ಟು 55 ಜೀವಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆಗೊಳಿಸಲು ನಿರ್ಣಯ.
  • ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತಾ ಕೇಂದ್ರವನ್ನು (CoE) 28 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 5 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಅನುಮೋದನೆ.

ಇದನ್ನೂ ಓದಿ: ಕೋವಿಡ್ ಹಗರಣ: ತನಿಖೆ, ಕ್ರಮ ವಹಿಸಲು ಎಸ್​​ಐಟಿ ರಚನೆಗೆ ಸಂಪುಟದ ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.