ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಂದು ಮಕ್ಕಳ ದಿನಾಚರಣೆ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ತಾಯಿಯಾಗಿ ತಮ್ಮ ಜೀವನದ ಬಗ್ಗೆ ಹೆಚ್ಚೇನು ಪೋಸ್ಟ್ ಶೇರ್ ಮಾಡದ ಅನುಷ್ಕಾ ಅವರಿಂದು ಸಿಂಪ್ಲಿ ಸ್ಪೆಷಲ್ ಎನ್ನುವ ಫೋಟೋ ಪೋಸ್ಟ್ ಮಾಡಿದ್ದಾರೆ. ತಮ್ಮ ಇಬ್ಬರು ಮುದ್ದು ಮಕ್ಕಳಾದ ವಾಮಿಕಾ ಮತ್ತು ಅಕಾಯ್ಗಾಗಿ ಚಿಲ್ಡ್ರನ್ ಡೇ ಮೀಲ್ ತಯಾರಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ನೂಡಲ್ಸ್ ಬೌಲ್ ಹಂಚಿಕೊಂಡಿದ್ದಾರೆ. ಸ್ಲರ್ಪ್ ಫಾರ್ಮ್ ನೂಡಲ್ಸ್ ಆಗಿದ್ದು, ಮಕ್ಕಳಿಗಾಗಿ ಆರೋಗ್ಯಕರ ಮತ್ತು ಪೌಷ್ಠಿಕ ಆಯ್ಕೆಯಲ್ಲಿ ಹೆಸರುವಾಸಿ ಆಗಿರುವ ಬ್ರ್ಯಾಂಡ್ ಇದು. ಫೋಟೋದಲ್ಲಿ, ಚೈಲ್ಡ್ ಫ್ರೆಂಡ್ಲಿ ಬೌಲ್ನೊಂದಿಗೆ ಪ್ರಸ್ತುತಪಡಿಸಲಾದ ನೂಡಲ್ಸ್, ಮುದ್ದಾದ ಅನಿಮಲ್ ಕ್ಯಾರೆಕ್ಟರ್ ಮತ್ತು ಹಾರ್ಟ್ ಸಿಂಬಲ್ ಒಳಗೊಂಡಿದೆ. ಇದು ಪ್ರೀತಿ ಮತ್ತು ಕಾಳಜಿಯ ಸ್ಪರ್ಶವನ್ನೊದಗಿಸಿದೆ.
ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ
ಅನುಷ್ಕಾ ಅವರಿಗೆ ತಮ್ಮ ಮಕ್ಕಳೊಂದಿಗಿನ ಪ್ರತೀ ಸಣ್ಣ ಆಚರಣೆ ಕೂಡಾ ಅಮೂಲ್ಯವಾದ್ದು. ಅದನ್ನು ಬಹಳ ಸಂಭ್ರಮಿಸುತ್ತಾರೆ. ಸ್ಟಾರ್ ನಟಿಯಾದ್ರೂ, ಸಿರಿವಂತೆಯಾಗಿದ್ದರೂ ಕೂಡಾ ತಮ್ಮ ಕುಟುಂಬದ ಸಣ್ಣ ಸಣ್ಣ ಕ್ಷಣವನ್ನು ಆನಂದಿಸುತ್ತಾರೆ. ವಿರಾಟ್ ಅನುಷ್ಕಾ ಇಬ್ಬರೂ ತಮ್ಮ ಮಕ್ಕಳ ವಿಷಯದಲ್ಲಿ ದೊಡ್ಡ ಮಟ್ಟದ ಪ್ರೈವಸಿ ಬಯಸಿದ್ದಾರೆ, ಆ ಖಾಸಗಿತನವನ್ನು ಕಾಪಾಡಿಕೊಂಡು ಬಂದಿದ್ದಾರೆ. ತಾವು ಸ್ಟಾರ್ ಕಪಲ್ ಆಗಿದ್ರು, ಮಕ್ಕಳಿಗೆ ಸಾಮಾನ್ಯ ಬಾಲ್ಯವನ್ನನುಭವಿಸಲು ಬಿಟ್ಟಿದ್ದಾರೆ. ಮಾಧ್ಯಮಗಳಿಂದ ಮಕ್ಕಳ ನೋಟವನ್ನು ದೂರವಿಟ್ಟಿದ್ದಾರೆ. ಅದಾಗ್ಯೂ, ಈ ರೀತಿಯ ಕ್ಷಣಗಳ ಮೂಲಕ ಅನುಷ್ಕಾ ತಾಯಿಯಾಗಿ ತನ್ನ ಪ್ರಯಾಣದ ಒಂದು ಸಣ್ಣ ನೋಟವನ್ನು ಒದಗಿಸುತ್ತಾರೆ.
ಇದನ್ನೂ ಓದಿ: ಮೆಗಾ ಪವರ್ಸ್ಟಾರ್ ರಾಮ್ಚರಣ್ಗೆ ಶಾರುಖ್ ಖಾನ್ ಸಪೋರ್ಟ್: ನಡೆಯಲಿದೆ ಅದ್ಧೂರಿ 'ಗೇಮ್ ಚೇಂಜರ್' ಈವೆಂಟ್
ಸಖತ್ ಸಿಂಪ್ಲಿ ಆದ್ರು ಪ್ರೀತಿ ತುಂಬಿದ ಮಕ್ಕಳ ದಿನದ ಕ್ಷಣವನ್ನು ಹಂಚಿಕೊಳ್ಳುವ ಮೂಲಕ, ಅಭಿಮಾನಿಗಳಿಗೆ ಒಂದು ನೋಟವನ್ನು ಒದಗಿಸಿದ್ದಾರೆ. ಈ ಮೂಲಕ ತಮ್ಮ ಮಕ್ಕಳನ್ನು ಸರಳವಾಗಿ ಬೆಳೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ವಿಶ್ವಾದ್ಯಂತ ಜನಪ್ರಿಯರಾಗಿರುವ ವಿರುಷ್ಕಾ ದಂಪತಿ ಮಕ್ಕಳನ್ನು ಸೋಷಿಯಲ್ ಮೀಡಿಯಾ ಪ್ರಪಂಚದಿಂದ ದೂರವಿಟ್ಟಿದ್ದಾರೆ. ಸ್ಟಾರ್ ಕಪಲ್ನ ಈ ನಡೆ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ.