How to Make Beetroot Soup: ರಾಜ್ಯದಲ್ಲಿ ಚಳಿ ಹೆಚ್ಚಾಗುತ್ತಿದೆ. ದಿನವಿಡೀ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಚಳಿ ಹೆಚ್ಚಾಗುತ್ತಿದೆ. ಅನೇಕ ಜನರು ಈ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರ ಸೇವಿಸಲು ಇಷ್ಟಪಡುತ್ತಾರೆ. ಅದರಲ್ಲೂ ಸೂಪ್ ಕುಡಿಯಲು ತುಂಬಾ ಆಸಕ್ತಿ ತೋರಿಸುತ್ತಾರೆ. ಸೂಪ್ ಎಂದಾಕ್ಷಣ ನೆನಪಾಗುವುದು ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಟೊಮೆಟೊ ಹಾಕಿ ಮಾಡಿದ ವಿವಿಧ ಬಗೆಯ ಸೂಪ್ಗಳು. ಇದೀಗ ನಾವು ಬೀಟ್ರೂಟ್ನಿಂದ ರುಚಿಕರವಾದ ಸೂಪ್ ಸಹ ತಯಾರಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಸೂಪ್ ತೂಕ ನಷ್ಟಕ್ಕೂ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ತಡಮಾಡದೆ ಮನೆಯಲ್ಲಿಯೇ ಬೀಟ್ರೂಟ್ ಸೂಪ್ ಹೇಗೆ ಮಾಡೋದು ಎಂಬುದನ್ನು ಕಲಿಯೋಣ..
ಬೀಟ್ರೂಟ್ ಸೂಪ್ಗೆ ಬೇಕಾಗುವ ಪದಾರ್ಥಗಳು:
- ಬೀಟ್ರೂಟ್- 1
- ಬೆಣ್ಣೆ - 1 ಚಮಚ
- ಬಿರಿಯಾನಿ ಎಲೆ - 1
- ಮೆಣಸು - ಒಂದು ಟೀಚಮಚ
- ಒಂದು ಸಣ್ಣ ತುಂಡು ಶುಂಠಿ
- ಬೆಳ್ಳುಳ್ಳಿ ಎಸಳು - 3
- ಈರುಳ್ಳಿ- 1
- ಕ್ಯಾರೆಟ್- 1
- ಒಂದು ಚಿಟಿಕೆ ಕರಿಮೆಣಸಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವುದು ಹೇಗೆ?
- ಮೊದಲು ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣಗೆ ಕತ್ತರಿಸಿ.
- ನಂತರ ಬೀಟ್ರೂಟ್ನಿಂದ ಸಿಪ್ಪೆಯನ್ನು ತೆಗೆದುಹಾಕಿ ಮತ್ತು ಅದನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿ.
- ಈಗ ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಬಿರಿಯಾನಿ ಎಲೆ, ಕರಿಮೆಣಸು, ಶುಂಠಿ ತುಂಡು, ಬೆಳ್ಳುಳ್ಳಿ ಚೆನ್ನಾಗಿ ಹಾಕಿ ಫ್ರೈ ಮಾಡಿ.
- ಬೆಳ್ಳುಳ್ಳಿ ಸ್ವಲ್ಪ ಹುರಿದ ನಂತರ ಈರುಳ್ಳಿ ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
- ನಂತರ ಬೀಟ್ರೂಟ್ ಚೂರುಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಸ್ಟವ್ ಅನ್ನು ಮಧ್ಯಮ ಉರಿಯಲ್ಲಿರಿಸಿ, ಸರಿಯಾಗಿ ಮಚ್ಚಳವನ್ನು ಮುಚ್ಚಿ 5 ನಿಮಿಷ ಬೇಯಿಸಿ.
- ಬಳಿಕ ಒಂದು ಕಪ್ ನೀರು ಸುರಿಯಿರಿ. ಮತ್ತೆ ಮುಚ್ಚಿ, ಸ್ವಲ್ಪ ಸಮಯ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
- ನಂತರ ಬಿರಿಯಾನಿ ಎಲೆ ತೆಗೆದು ಈ ಮಿಶ್ರಣವನ್ನು ಮಿಕ್ಸಿಂಗ್ ಬೌಲ್ಗೆ ಹಾಕಿ.
- ಈ ಮಿಶ್ರಣವನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ.
- ಈ ಸೂಪ್ನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದರಿಂದ ಮೂರು ನಿಮಿಷಗಳ ಕಾಲ ಕುದಿಸಿ.
- ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಲೆ ಆಫ್ ಮಾಡಿ.
- ಈಗ ಬೀಟ್ರೂಟ್ ಸೂಪ್ನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಸೇವಿಸಿ.
- ನಿಮಗೆ ಇಷ್ಟವಾದರೆ, ಈ ಚಳಿಗಾಲದಲ್ಲಿ ಒಮ್ಮೆಯಾದರೂ ಈ ಸೂಪ್ನ್ನು ಪ್ರಯತ್ನಿಸಿ.