ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ 'ಹಿಂದುಗಳ ಸರ್ಕಾರ'ದ ಹೇಳಿಕೆಗೆ ಕಿಡಿಕಾರಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ 'ಕಾಂಗ್ರೆಸ್ ಚುನಾವಣೆಗಾಗಿ ಹಿಂದುಗಳನ್ನು ಓಲೈಸುತ್ತಿದೆ' ಎಂದು ಟೀಕಿಸಿದ್ದಾರೆ.
-
Rahul & INC fertilised the ground for Hindutva. Now they’re trying to harvest majoritarianism. Bringing “Hindus to power” is a “secular” agenda in 2021. Wah!
— Asaduddin Owaisi (@asadowaisi) December 12, 2021 " class="align-text-top noRightClick twitterSection" data="
India belongs to all Bharatiyas. Not Hindus alone. India belongs to people of all faiths & also those who have no faith pic.twitter.com/9EfpynChqU
">Rahul & INC fertilised the ground for Hindutva. Now they’re trying to harvest majoritarianism. Bringing “Hindus to power” is a “secular” agenda in 2021. Wah!
— Asaduddin Owaisi (@asadowaisi) December 12, 2021
India belongs to all Bharatiyas. Not Hindus alone. India belongs to people of all faiths & also those who have no faith pic.twitter.com/9EfpynChqURahul & INC fertilised the ground for Hindutva. Now they’re trying to harvest majoritarianism. Bringing “Hindus to power” is a “secular” agenda in 2021. Wah!
— Asaduddin Owaisi (@asadowaisi) December 12, 2021
India belongs to all Bharatiyas. Not Hindus alone. India belongs to people of all faiths & also those who have no faith pic.twitter.com/9EfpynChqU
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಓವೈಸಿ, ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ನೆಲೆಸಿದ್ದಾರೆ. ಕೇಂದ್ರದಲ್ಲಿ ಮುಂದೆ ಹಿಂದು ಸರ್ಕಾರವನ್ನು ತರಬೇಕು ಎಂಬ ರಾಹುಲ್ ಗಾಂಧಿ ಹೇಳಿಕೆ ಕೇವಲ ಚುನಾವಣಾ ತಂತ್ರವಾಗಿದೆ ಎಂದು ಕಟಕಿಯಾಡಿದ್ದಾರೆ.
ಮುಂದುವರಿದು, ಕೇಂದ್ರದಲ್ಲಿ ಈಗಿರುವುದು ಹಿಂದುತ್ವವಾದಿಗಳ ಸರ್ಕಾರ. ಮುಂದೆ ಹಿಂದುಗಳ ಸರ್ಕಾರವನ್ನು ತರಬೇಕು ಎಂಬುದು 'ಜಾತ್ಯಾತೀತ' ಅಜೆಂಡಾವೇ ಎಂದು ಪ್ರಶ್ನಿಸಿರುವ ಅಸಾದುದ್ದೀನ್ ಓವೈಸಿ, ರಾಹುಲ್ ಹೇಳಿಕೆ ಕೇವಲ ಚುನಾವಣೆಯಲ್ಲಿ ಮತಗಳಿಕೆಗಾಗಿ ಹಿಂದುಗಳನ್ನು ಓಲೈಸುವುದಾಗಿದೆ ಎಂದು ಟೀಕಿಸಿದ್ದಾರೆ.
ರಾಜಸ್ತಾನದ ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಹಿಂದುತ್ವವಾದಿಗಳ ಸರ್ಕಾರವಿದೆ ಹೊರತು ಹಿಂದುಗಳ ಸರ್ಕಾರವಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದುತ್ವವಾದಿಗಳ ಕಿತ್ತೊಗೆದು ಹಿಂದುಗಳ ಸರ್ಕಾರ ತರಬೇಕು ಎಂದು ಕರೆ ನೀಡಿದ್ದರು. ಇದೀಗ ಚರ್ಚೆಗೆ ಗ್ರಾಸವಾಗಿದೆ.