ETV Bharat / bharat

ಅರುಣಾಚಲ ಪ್ರದೇಶದಲ್ಲಿ 'ಶಾಲೆಗಾಗಿ ಫುಟ್‌ಬಾಲ್' ಕಾರ್ಯಕ್ರಮ - ಪ್ರತಿಭೆಗಳನ್ನು ರೂಪಿಸಲು ಶಾಲೆಗಾಗಿ ಫುಟ್‌ಬಾಲ್ ಕಾರ್ಯಕ್ರಮ

ಅರುಣಾಚಲ ಪ್ರದೇಶದ 200 ಶಾಲೆಗಳಲ್ಲಿ ಸದ್ಯದಲ್ಲೇ 'ಶಾಲೆಗಾಗಿ ಫುಟ್‌ಬಾಲ್' ಕಾರ್ಯಕ್ರಮ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ತಬಾ ಟೆದಿರ್ ಹೇಳಿದರು.

Arunachal to introduce football coaching program in 200 schools
ಅರುಣಾಚಲ 200 ಶಾಲೆಗಳಲ್ಲಿ ಫುಟ್ಬಾಲ್ ತರಬೇತಿ ಕಾರ್ಯಕ್ರಮವನ್ನು ಪರಿಚಯಿಸಲಿದೆ
author img

By

Published : Nov 22, 2022, 2:25 PM IST

ಇಟಾನಗರ: ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದ 200 ಶಾಲೆಗಳಲ್ಲಿ ಫುಟ್‌ಬಾಲ್ ಕ್ರೀಡೆ ಉತ್ತೇಜಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಶಿಕ್ಷಣ ಸಚಿವ ತಬಾ ಟೆದಿರ್ ಹೇಳಿದರು. 'ಶಾಲೆಗಾಗಿ ಫುಟ್‌ಬಾಲ್' ಕಾರ್ಯಕ್ರಮವು 6 ರಿಂದ 13 ವರ್ಷದೊಳಗಿನ ಪ್ರತಿಭೆಗಳನ್ನು ರೂಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಈ ವಿಷಯದ ಬಗ್ಗೆ ಸೋಮವಾರ ಸಭೆ ನಡೆಸಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳು ಮತ್ತು ಅರುಣಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ ​​​​(ಎಪಿಎಫ್‌ಎ) ಸದಸ್ಯರು ಹಾಜರಿದ್ದರು.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಖಜಾಂಚಿ ಕಿಪಾ ಅಜಯ್ ಮಾತನಾಡಿ, ಅರುಣಾಚಲ ಪ್ರದೇಶವು ಇಂತಹ ಕಾರ್ಯಕ್ರಮವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಿದೆ. ಇದು ಫುಟ್‌ಬಾಲ್ ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ :ಕ್ರೀಡೆ ಎಂಬುದು ಕೇವಲ ಆಟೋಟವಲ್ಲ, ಮನಸ್ಸಿಗೆ ನೆಮ್ಮದಿ: ಚಂದ್ರಶೇಖರ್ ಜಾಗಿರ್ ದಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.