ಆಂಧ್ರಪ್ರದೇಶ : ಅಪಾರ್ಟ್ಮೆಂಟ್ ಜನರು ಸೋಂಕಿತರೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ನೆಲೋರ್ ನಗರದಲ್ಲಿ ನಡೆದಿದೆ. ಸೋಂಕಿತರಿರುವ ಮನೆಯನ್ನು ಲಾಕ್ ಮಾಡಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.
10 ದಿನದ ಹಿಂದೆ ಈ ಅಪಾರ್ಟ್ಮೆಂಟ್ನಲ್ಲಿರುವ ದಂಪತಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ತಮಗೆ ಬೇಕಾದ ಔಷಧಿ ಮತ್ತು ಇತರೆ ಅಗತ್ಯ ವಸ್ತುಗಳನ್ನು ತಮ್ಮ ಸಂಬಂಧಿಕರ ಸಹಾಯದಿಂದ ತರಿಸಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿ ಅವರಿಗೆ ಔಷಧಿ ಬೇಕಾಗಿದ್ದು, ಆ ಸಮಯದಲ್ಲಿ ಯಾರೂ ಲಭ್ಯವಾಗಿಲ್ಲ. ಹಾಗಾಗಿ, ಪತಿ ಹೊರಗೆ ಹೋಗಿ ಔಷಧಿಗಳನ್ನು ತಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲೂ ಲಾಕ್ಡೌನ್?: ನಾಳೆ ಹೊರಬೀಳಲಿದೆ ಮಹತ್ವದ ನಿರ್ಧಾರ!
ಇದನ್ನು ನೋಡಿದ ಅಪಾರ್ಟ್ಮೆಂಟ್ ಜನತೆಗೆ ಸೋಂಕು ತಗುಲುವ ಆತಂಕ ಎದುರಾಗಿದೆ. ಹಾಗಾಗಿ, ಇಂದು ಬೆಳಗ್ಗೆ ಸೋಂಕಿತರಿರುವ ಮನೆಯ ಬಾಗಿಲನ್ನು ಲಾಕ್ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಆ ಕೂಡಲೇ ಮನೆಗೆ ಹೋಗಿ ಬೀಗ ತೆಗೆದಿದ್ದಾರೆ.