ಸೋನಿಪತ್ : ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ತಡರಾತ್ರಿ ಮತ್ತೋರ್ವ ರೈತ ಮೃತಪಟ್ಟಿದ್ದಾರೆ. ಪಂಜಾಬ್ನ ತರನ್ ತಾರನ್ ನಿವಾಸಿ ಜೋಗಿಂದರ್ ಮೃತ ರೈತ ಎಂದು ತಿಳಿದು ಬಂದಿದೆ.
ಜನವರಿ 20 ರಂದು ಸಿಂಘು ಗಡಿಗೆ ಬಂದ ರೈತರಲ್ಲಿ ಈವರೆಗೆ 15 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ವೇಳೆ ರೈತ ಗಾಯಗೊಂಡಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್' ಶುರು
ಘಟನಾ ಸ್ಥಳಕ್ಕೆ ಆಗಮಿಸಿದ ಕುಂಡ್ಲಿ ಠಾಣಾ ಪೊಲೀಸರು, ಜೋಗಿಂದರ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.