ETV Bharat / bharat

100 ಕೋಟಿ ಭ್ರಷ್ಟಾಚಾರ ಆರೋಪ: ಅನಿಲ್ ದೇಶಮುಖ್​ ನ್ಯಾಯಾಂಗ ಬಂಧನ ಮತ್ತೆ 14 ದಿನಕ್ಕೆ ವಿಸ್ತರಣೆ - ಸುಲಿಗೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳವರೆಗೆ ವಿಸ್ತರಿಸಲಾಗಿದೆ.

Maharashtra Home Minister Anil Deshmukh f
ಅನಿಲ್ ದೇಶಮುಖ್
author img

By

Published : Dec 27, 2021, 7:59 PM IST

ಮುಂಬೈ (ಮಹಾರಾಷ್ಟ್ರ): 100 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳವರೆಗೆ ವಿಸ್ತರಿಸಿ ಮುಂಬೈನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ನವೆಂಬರ್ 1 ರಂದು ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಅಂದಿನಿಂದ ಇಂದಿನ ವರೆಗೂ ಅನಿಲ್ ದೇಶಮುಖ್​ಗೆ ರಿಲೀಫ್​ ಸಿಕ್ಕಿಲ್ಲ. ಇಂದಾದರೂ ಬಂಧನದಿಂದ ಮುಕ್ತಿ ಸಿಗಬಹುದು ಅಂದುಕೊಂಡಿದ್ದ ಅವರಿಗೆ ಮತ್ತೆ ನಿರಾಸೆಯಾಗಿದೆ. ಪ್ರಸ್ತುತ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಅನಿಲ್‌ ದೇಶ್‌ಮುಖ್‌ಗೆ ಕ್ಲೀನ್ ಚಿಟ್ ಕುರಿತ ಪಿಇ ಮಾಹಿತಿ ಸೋರಿಕೆ ಆರೋಪ; ಸಿಬಿಐ ತನಿಖೆಗೆ ದೆಹಲಿ ಕೋರ್ಟ್‌ ಆದೇಶ

ಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಈ ವಾರದಲ್ಲಿ ದೇಶ್​ಮುಖ್​ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.