ETV Bharat / bharat

ಪ್ರಕಾಶಂ ಬ್ಯಾರೇಜ್​ನಿಂದ ಬಂಗಾಳ ಕೊಲ್ಲಿಗೆ ನೀರು ರಿಲೀಸ್: ಪ್ರತಿಪಕ್ಷಗಳು ಕಿಡಿ

ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿಯಲ್ಲಿ ಸಮುದ್ರಕ್ಕೆ ನೀರು ಹರಿಬಿಡಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗ್ತಿದೆ. ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಪ್ರಕಾಶಂ ಬ್ಯಾರೇಜ್
ಪ್ರಕಾಶಂ ಬ್ಯಾರೇಜ್
author img

By

Published : Jul 3, 2021, 8:14 AM IST

ವಿಜಯವಾಡ (ಆಂಧ್ರಪ್ರದೇಶ): ಪ್ರಕಾಶಂ ಬ್ಯಾರೇಜ್​ನ 20​ ಗೇಟ್​ಗಳ​ ಮೂಲಕ ಕೃಷ್ಣಾ ನದಿಯ 8,500 ಕ್ಯೂಸೆಕ್​​ ನೀರನ್ನು ಬಂಗಾಳಕೊಲ್ಲಿಗೆ ಬಿಡುಗಡೆ ಮಾಡಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪುಲಿಚಿಂಟಾಲಾ ಯೋಜನೆಯಿಂದ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಬ್ಯಾರೇಜ್​ ಗೇಟ್​ಗಳನ್ನು ತೆರೆಯಲಾಗಿದೆ ಎಂದು ಎಂಜಿನಿಯರ್​ಗಳು ತಿಳಿಸಿದ್ದಾರೆ.

ಪ್ರಕಾಶಂ ಬ್ಯಾರೇಜ್​ನಿಂದ ಬಂಗಾಳ ಕೊಲ್ಲಿಗೆ ನೀರು ರಿಲೀಸ್

ತೆಲಂಗಾಣ ಅಧಿಕಾರಿಗಳು ವಿದ್ಯುತ್ ಉತ್ಪಾದನೆಗಾಗಿ 6,600 ಕ್ಯೂಸೆಕ್​​ ನೀರನ್ನು ಬಿಡುಗಡೆ ಮಾಡುತ್ತಿದ್ದಾರೆ. ಜಲಾನಯನ ಪ್ರದೇಶದಲ್ಲಿ 1,900 ಕ್ಯೂಸೆಕ್​​ ನೀರನ್ನು ನಾವು ಪಡೆಯುತ್ತಿದ್ದೇವೆ. 8,500 ಕ್ಯೂಸೆಕ್​ ನೀರನ್ನು ಪ್ರಕಾಶಂ ಬ್ಯಾರೇಜ್​ ಗೇಟ್​ ಮೂಲಕ ಹೊರಬಿಡಲಾಗಿದೆ. ನಾವೀಗ 20 ಗೇಟ್​ಗಳನ್ನು ನಿರ್ವಹಿಸುತ್ತಿದ್ದೇವೆ. ನೀರಿನ ಒಳಹರಿವು ಅವಲಂಬಿಸಿ, ಹೆಚ್ಚಿನ ನೀರನ್ನು ಬಿಡಬಹುದು ಅಥವಾ ಇಲ್ಲಿಗೆ ನಿಲ್ಲಿಸಬಹುದು ಎಂದು ಬ್ಯಾರೇಜ್​ನ ಕಾರ್ಯ ನಿರ್ವಾಹಕ ಎಂಜಿನಿಯರ್​ ಸ್ವರೂಪ್​ ಕುಮಾರ್ ತಿಳಿಸಿದ್ದಾರೆ.

ಪುಲಿಚಿಂಟಲಾ ಯೋಜನೆಯ ನೀರಿನ ಸಂಗ್ರಹ ಸಾಮರ್ಥ್ಯ 41 ಟಿಎಂಸಿ. ಇದರಿಂದ ತೆಲಂಗಾಣ ಸರ್ಕಾರವು ವಿದ್ಯುತ್ ಉತ್ಪಾದಿಸುತ್ತದೆ. ಆಂಧ್ರ ಪ್ರದೇಶದ ನೀರಾವರಿ ಇಲಾಖೆಯು ಅಗತ್ಯಗಳಿಗಾಗಿ ನೀರು ಬಿಡುಗಡೆ ಮಾಡಲು ಯಾವುದೇ ಪ್ಲಾನ್ ಮಾಡಿಲ್ಲ. ಹಾಗಾಗಿ ನೀರಿನ ಸಂಗ್ರಹ ಮತ್ತು ಸದ್ಬಳಕೆಗೆ ತೊಂದರೆಯಾಗಿದೆ. ಈಗ ರಾಜ್ಯ ನೀರಾವರಿ ಇಲಾಖೆಯ ಮುಂದೆ ಇದ್ದ ಏಕೈಕ ಮಾರ್ಗ ಬಂಗಾಳ ಕೊಲ್ಲಿಗೆ ನೀರನ್ನು ಬಿಡುವುದಾಗಿತ್ತು.

ಟಿಡಿಪಿ ಮುಖಂಡ ಮತ್ತು ಮಾಜಿ ನೀರಾವರಿ ಸಚಿವ ದೇವಿನೇನಿ ಉಮಮಹೇಶ್ವರ ರಾವ್, ಎರಡೂ ಸರ್ಕಾರಗಳು ನಾಟಕವಾಡುತ್ತಿವೆ ಎಂದು ತೆಲಂಗಾಣ ಮತ್ತು ಆಂಧ್ರ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ನಂಬರ್​ ಪ್ಲೇಟ್​ನಲ್ಲಿ Andhra CM ಹೆಸರು.. ದಂಡ ವಿಧಿಸಿದ ಖಾಕಿ

ಇಂದಿನ ಪರಿಸ್ಥಿತಿಗೆ ಎರಡೂ ತೆಲುಗು ರಾಜ್ಯಗಳ ಬೇಜವಾಬ್ದಾರಿಯ ಮನೋಭಾವವೇ ಕಾರಣ ಎಂದು ದೂರಿದ್ದಾರೆ. ಈ ಋತುವಿನಲ್ಲಿ ಕೃಷಿಗೆ ಬಳಸಬೇಕಾದ ನೀರನ್ನು ಬಂಗಾಳಕೊಲ್ಲಿಗೆ ಬಿಡಲು ಕಾರಣವೇನು? ಒಂದು ವೇಳೆ ನೀರನ್ನು ಬಿಡುಗಡೆ ಮಾಡಬೇಕೆಂದಿದ್ದರೆ, ಜೂನ್​ ತಿಂಗಳಿಗೂ ಮೊದಲೇ ರಿಲೀಸ್ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.