ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಎನ್ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಸೇರ್ಪಡೆ ಬಗ್ಗೆ ವರದಿಗಳು ಹರಿದಾಡುತ್ತಿರುವ ನಡುವೆ ಜಗನ್ ಭೇಟಿಯಾಗಿರುವುದು ಕುತೂಹಲ ಹೆಚ್ಚಿಸಿದೆ.
ಸಿಎಂ ಜಗನ್ಮೋಹನ್ ರೆಡ್ಡಿ ಅವರು ಭೇಟಿಯ ವೇಳೆ ತಿರುಪತಿ ವೆಂಕಟರಮಣನ ಫೋಟೋವನ್ನು ಕಾಣಿಕೆಯಾಗಿ ನೀಡಿದರು. ಈಚೆಗಷ್ಟೇ ಆಯ್ಕೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನೂ ಆಂಧ್ರ ಸಿಎಂ ಭೇಟಿ ಮಾಡಲಿದ್ದಾರೆ. ಚುನಾವಣೆಯ ವೇಳೆ ಈ ಇಬ್ಬರಿಗೆ ವೈಎಸ್ಆರ್ಸಿಪಿ ಬೆಂಬಲ ನೀಡಿತ್ತು.
ಎನ್ಡಿಎ ಹೊಸ ಮಿತ್ರ ಯಾರು?: ಬಿಹಾರದಲ್ಲಿ ಜೆಡಿಯು ಬಿಜೆಪಿ ಸಖ್ಯ ಕಡಿದುಕೊಂಡ ಬಳಿಕ ಎನ್ಡಿಎ ಹೊಸ ಮಿತ್ರನ ಹುಡುಕಾಟದಲ್ಲಿದೆ. ಈ ಮಧ್ಯೆ ಆಂಧ್ರಪ್ರದೇಶದ ಎರಡು ಪ್ರಮುಖ ಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಎನ್ಡಿಎ ಬಳಗ ಸೇರುವ ಸಾಧ್ಯತೆ ಇದೆ.
ಆದರೆ, ಆಂಧ್ರಪ್ರದೇಶದಲ್ಲಿ ಈ ಎರಡೂ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿದ್ದು ಯಾವ ಪಕ್ಷ ಎನ್ಡಿಎ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ರಾಷ್ಟ್ರಪತಿ ಚುನಾವಣೆಯ ವೇಳೆ ವೈಎಸ್ಆರ್ಸಿಪಿ ಎನ್ಡಿಎ ಅಭ್ಯರ್ಥಿಗಳಿಗೆ ಬೆಂಬಲ ನೀಡಿತ್ತು.
ಇದನ್ನೂ ಓದಿ: ರಾಮೋಜಿಯವರ ಜೀವನ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿ: ಅಮಿತ್ ಶಾ