ETV Bharat / bharat

14ರ ಪೋರನಿಗೆ ಪೋರ್ನ್​ ತೋರಿಸಿ ತನ್ನತ್ತ ಸೆಳೆದ 30ರ ನಾರಿ: ಕಿಡ್ನಾಪ್​ ಮಾಡಿ, ಹೈದರಾಬಾದ್​ನಲ್ಲಿ ಸಹಜೀವನ! - ಬಾಲಕನ ಕಿಡ್ನಾಪ್​ ಮಾಡಿದ ಮಹಿಳೆ

A lady affair with minor boy.. 14 ವರ್ಷದ ಬಾಲಕನ ಕಿಡ್ನಾಪ್​-ಪೋರ್ನ್​ ವಿಡಿಯೋ ತೋರಿಸಿ ದೈಹಿಕ ಸಂಬಂಧ- ಹೈದರಾಬಾದ್​ನಲ್ಲಿ ನಾರಿಯ ಸಹಜೀವನ​

andhra-police-arrest-a-30-year-old-woman-who-was-allegedly-having-an-affair-with-a-14-year-old-boy
14 ವರ್ಷದ ಬಾಲಕನಿಗೆ ಫೋರ್ನ್​ ತೋರಿಸಿ ತನ್ನತ್ತ ಸೆಳೆದ 30 ವರ್ಷದ ಮಹಿಳೆ: ಹೈದರಾಬಾದ್​ಗೆ ಕಿಡ್ನಾಪ್​ ಮಾಡಿ ಸಹಜೀವನ!
author img

By

Published : Jul 27, 2022, 8:02 PM IST

ಹೈದರಾಬಾದ್​ (ತೆಲಂಗಾಣ): ಆಕೆಗೆ ಮದುವೆಯಾಗಿ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ಆದರೆ, 14 ವರ್ಷದ ಬಾಲಕನ ಮೇಲೆ ಕಣ್ಣು ಬಿದ್ದಿದೆ. ಆ ಬಾಲಕನನ್ನು ಮಹಿಳೆ ತನ್ನತ್ತ ಸೆಳೆದುಕೊಂಡು ಕಿಡ್ನಾಪ್​ ಮಾಡಿದ್ದಾರೆ. ಇದೀಗ ಪೊಲೀಸರು ಹೈದರಾಬಾದ್​ನಲ್ಲಿ ಬಾಲಕನನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದ ಬಾಲಕ ಮತ್ತು ಈತನ ಎದುರುಗಡೆ ಮನೆಯಲ್ಲಿ ವಾಸವಾಗಿದ್ದ 30 ವರ್ಷದ ಮಹಿಳೆ ಜುಲೈ 19ರಿಂದ ಕಾಣುತ್ತಿಲ್ಲ ಎಂದು ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಅಘಾತಕಾರಿಗಳು ಅಂಶಗಳು ಬೆಳಕಿಗೆ ಬಂದಿವೆ.

ಬಾಲಕನಿಗೆ ಪೋರ್ನ್ ವಿಡಿಯೋ ಆಮಿಷ: ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದು, ಒಟ್ಟಿಗೆ ವಾಸವಾಗಿಲ್ಲವಂತೆ. ನಿತ್ಯ ಸಮಯ ಸಿಕ್ಕಾಗ ಮಕ್ಕಳೊಂದಿಗೆ ಸಲುಗೆಯಿಂದ ಆಟವಾಡುತ್ತಿದ್ದರಂತೆ ಈ ಗೃಹಿಣಿ. ಹೀಗೆ ಎದುರು ಮನೆಯಲ್ಲಿ ವಾಸಗಿದ್ದ ಬಾಲಕನನ್ನು ಈ ಮಹಿಳೆ ಆಕರ್ಷಿಸಿದ್ದಾರೆ. ಇತ್ತ, ಬಾಲಕ ಕೂಡ ಆಕೆಯ ಆಕರ್ಷಣೆಗೆ ಸಿಲುಕಿಕೊಂಡಿದ್ದಾನೆ. ಅಲ್ಲದೇ, ಪೋರ್ನ್ ವಿಡಿಯೋಗಳನ್ನು ತೋರಿಸುವ ಆಮಿಷವೊಡ್ಡಿ, ಬಾಲಕನೊಂದಿಗೆ ಕಳೆದ ಒಂದು ತಿಂಗಳಿನಿಂದ ದೈಹಿಕ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗ್ತಿದೆ.

ಎಂಟನೇ ತರಗತಿ ಓದುತ್ತಿದ್ದ ಬಾಲಕ ಈ ಮಹಿಳೆಯ ಆಕರ್ಷಣೆಗೊಳಗಿದ್ದ ಕಾರಣ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಅಲ್ಲದೇ, ಮಹಿಳೆ ಮನೆಗೆ ನಿರಂತರವಾಗಿ ಬರುತ್ತಿರುವುನ್ನು ಪೋಷಕರು ನೋಡಿ, ಗದರಿಸಿದ್ದಾರೆ. ಈ ವಿಷಯವನ್ನು ಮಹಿಳೆಗೆ ಬಾಲಕ ತಿಳಿಸಿದ್ದಾನೆ. ಹೀಗಾಗಿ ತನ್ನ ಸಂಬಂಧದ ಬಗ್ಗೆ ಯಾರಿಗಾದರೂ ಅನುಮಾನ ಬರಬಹುದು ಮತ್ತು ಬಾಲಕ ತನ್ನಿಂದ ದೂರವಾಗಬಹುದು ಎಂದು ಬಾಲಕನನ್ನು ಗುಡಿವಾಡದಿಂದ ಕರೆದುಕೊಂಡು ಹೈದರಾಬಾದ್​​ಗೆ ಬಂದಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಬಾಡಿಗೆ ಮನೆ ಮಾಡಿ ಸಹಜೀವನ: ಹೈದರಾಬಾದ್​ಗೆ ಬಾಲಕನನ್ನು ಕರೆದುಕೊಂಡು ಬಂದಿದ್ದ ಮಹಿಳೆ, ಇಲ್ಲಿನ ಬಾಲನಗರದಲ್ಲಿ ಮನೆ ಬಾಡಿಗೆ ಪಡೆದು ಬಾಲಕನೊಂದಿಗೆ ಸಹಜೀವನ ಮಾಡಲು ಆರಂಭಿಸಿದ್ದರು. ಕೆಲ ದಿನಗಳಲ್ಲಿ ಈ ಬಾಲಕನಿಗೆ ತನ್ನ ಮನೆಗೆ ಹೋಗಬೇಕೆಂಬ ಇಚ್ಛೆಯಾಗಿದೆ. ಆದರೆ, ತನ್ನ ಬಳಿ ಹಣವಿರದ ಕಾರಣ ಊರಿನಲ್ಲಿದ್ದ ಪರಿಚಯಸ್ಥರಿಗೆ ಹಣ ಬೇಕೆಂದು ಮೆಸೇಜ್​ ಮಾಡಿದ್ದಾನೆ. ಆದರೆ, ಅವರು ಸ್ಪಂದಿಸದೇ ಇದ್ದಾಗ ತಂದೆ-ತಾಯಿಗೆ ಫೋನ್​ ಮಾಡಿ ತಾನು ಹೈದರಾಬಾದ್​ನಲ್ಲಿ ಇರುವುದಾಗಿ ಹೇಳಿದ್ದಾನೆ.

ಈ ವಿಷಯಯವನ್ನು ಪೋಷಕರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಮೊಬೈಲ್​ ಲೊಕೇಶನ್ ಆಧಾರದ ಮೇಲೆ ಮಂಗಳವಾರ ರಾತ್ರಿ ಹೈದರಾಬಾದ್​ಗೆ ಬಂದಿದ್ದಾರೆ. ಬಾಲಕ ಮತ್ತು ಮಹಿಳೆಯನ್ನು ಪತ್ತೆ ಹಚ್ಚಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಗ್ಗೆ ಗುಡಿವಾಡಕ್ಕೆ ಕರೆದುಕೊಂಡು ಹೋಗಿ ಬಾಲಕನನ್ನು ವೈದ್ಯಕೀಯ ಪರೀಕ್ಷೆ ಮತ್ತು ಕೌನ್ಸಿಲಿಂಗ್​ ನಡೆಸಿ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಮಹಿಳೆಯನ್ನು ಅಪಹರಣ ಮತ್ತು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಇದನ್ನೂ ಓದಿ: 8ರ ಬಾಲೆಗೆ 75 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ತೆ ಸಾವಿನ ನಂತರ ಕೃತ್ಯದ ವಿಡಿಯೋ ಹೊರಕ್ಕೆ, ಆರು ಜನರ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.