ETV Bharat / bharat

ಹಲಸಿನ ಹಣ್ಣಿಗಾಗಿ ಆನೆಯಿಂದ ಸರ್ಕಸ್​..ಛಲದಂಕಮಲ್ಲನ ಪ್ರಯತ್ನ ಯಶಸ್ವಿ! ನೀವೂ ನೋಡಿ ವಿಡಿಯೋ!! - elephant plucked jackfruit from a tree

ಹಲಸಿನ ಹಣ್ಣು ಆನೆಗಳಿಗೆ ಪ್ರಿಯವಾದ ಆಹಾರ. ಅದು ಕಂಡಲ್ಲಿ ಪಡೆಯದೇ ಬಿಡವು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದು ಇದನ್ನು ಪುಷ್ಟೀಕರಿಸುತ್ತದೆ.

an-elephant-plucked-jackfruit-from-a-tree
ಹಲಸಿನ ಹಣ್ಣಿಗಾಗಿ ಆನೆಯಿಂದ ಸರ್ಕಸ್​
author img

By

Published : Aug 2, 2022, 9:55 AM IST

ಆನೆಗಳ ನೀರಾಟ, ಕೆಸರೆರಚಾಟದಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಅದರಂತೆ ಇಲ್ಲೊಂದು ಆನೆ ಮರದ ಮೇಲಿದ್ದ ಹಲಸಿನ ಹಣ್ಣನ್ನು ಕಿತ್ತುಕೊಳ್ಳಲು ಮಾಡಿದ ಸರ್ಕಸ್​ ಹುಬ್ಬೇರಿಸುವಂತೆ ಮಾಡಿದೆ.

ಮರದ ಮೇಲಿದ್ದ ಹಲಸಿನ ಹಣ್ಣನ್ನು ಆನೆಯು ಕೀಳಲು ಮರವನ್ನೇ ಅಲ್ಲಾಡಿಸಿದೆ. ಈ ಪ್ರಯತ್ನ ವಿಫಲವಾದಾಗ ಉಪಾಯ ಮಾಡಿದ ಆನೆ ತನ್ನೆರಡು ಕಾಲುಗಳನ್ನು ಎತ್ತಿ ಮರದ ಮೇಲಿಟ್ಟು ಸೊಂಡಿಲಿನಿಂದ ಎತ್ತರದಲ್ಲಿದ್ದ ಹಲಸನ್ನು ಕಿತ್ತಿದೆ.

  • Jackfruit is to Elephants what Mangoes are to humans.. and the applause by humans at the successful effort of this determined elephant to get to Jackfruits is absolutely heartwarming 😝

    video- shared pic.twitter.com/Gx83TST8kV

    — Supriya Sahu IAS (@supriyasahuias) August 1, 2022 " class="align-text-top noRightClick twitterSection" data=" ">

ಇದನ್ನು ಅಲ್ಲಿಯೇ ಇದ್ದ ಜನರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ಚಿತ್ರೀಕರಣ ವೇಳೆ ಜನರು ಆನೆಯ ಸಾಹಸವನ್ನು ಕಂಡ ಕೂಗಿದ್ದಾರೆ. ಅಲ್ಲದೇ, ಹಲಸನ್ನು ಯಶಸ್ವಿಯಾಗಿ ಕಿತ್ತ ಮೇಲೆ ಚಪ್ಪಾಳೆ ತಟ್ಟುತ್ತಿರುವುದು ವಿಡಿಯೋದಲ್ಲಿದೆ.

ಆನೆಯ ಈ ಸಾಹಸ ವಿಡಿಯೋವನ್ನು ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, "ಮನುಷ್ಯರಿಗೆ ಮಾವಿನ ಹಣ್ಣಿನಂತೆ, ಆನೆಗಳಿಗೆ ಹಲಸಿನ ಹಣ್ಣು ಪ್ರಿಯವಾದುದು. ಹಲಸಿನ ಹಣ್ಣನ್ನು ಪಡೆಯಲು ಆನೆ ಮಾಡಿದ ಯಶಸ್ವಿ ಪ್ರಯತ್ನ ಹೃದಯಸ್ಪರ್ಶಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.

ಓದಿ: 44 ವಿದೇಶ, 110 ನಗರ ಸುತ್ತಿದ 5 ವರ್ಷದ ಬಾಲಕಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.