ETV Bharat / bharat

Earthquake: ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲು - ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ

ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಇಂದು ರಾತ್ರಿ ಭೂಕಂಪನ ಉಂಟಾಗಿದೆ. ಸದ್ಯಕ್ಕೆ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ಬಂದಿಲ್ಲ.

ಭೂಕಂಪನ
ಭೂಕಂಪನ
author img

By

Published : Aug 17, 2023, 7:49 AM IST

ರಾಜೌರಿ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗುರುವಾರ ಭೂಕಂಪನ ಉಂಟಾಗಿ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ 3.49 ನಿಮಿಷಕ್ಕೆ ಭೂಮಿ ನಡುಗಿದೆ. ರಿಕ್ಟರ್​ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ರಾಜೌರಿಯ ಸಮೀಪದಲ್ಲಿ ಕಂಪನದ ಕೇಂದ್ರಬಿಂದು ಕಂಡುಬಂದಿದೆ. 10 ಕಿಮೀ ಆಳದಲ್ಲಿ ಭೂಕಂಪದ ಅಲೆಗಳು ಎದ್ದಿವೆ. ಈವರೆಗೂ ಯಾವುದೇ ಅನಾಹುತಗಳ ಬಗ್ಗೆ ವರದಿಯಾಗಿಲ್ಲ. ರಾತ್ರೋರಾತ್ರಿ ಭೂಮಿ ನಡುಗಿದ ಕಾರಣ ಜನರು ಆತಂಕಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಂಪಿಸಿದ ಭೂಮಿ: ನಿನ್ನೆ(ಬುಧವಾರ) ಮಹಾರಾಷ್ಟ್ರ ಕೊಲ್ಲಾಪುರ ಸೇರಿದಂತೆ ಸಾಂಗ್ಲಿ, ಸತಾರಾ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಭೂಕಂಪದ ಕೇಂದ್ರ ಬಿಂದು ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿತ್ತು. ಏಕಾಏಕಿ ಭೂಮಿ ನಡುಕ ಉಂಟಾಗಿದ್ದರಿಂದ ನಾಗರಿಕರು ಭಯಗೊಂಡಿದ್ದರು. ಭೂಕಂಪ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿತ್ತು.

ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟು ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಜಿಲ್ಲೆಯ ಪಟಾನ್ ನಗರ ಹಾಗೂ ಸಮೀಪದ ಗ್ರಾಮಗಳಲ್ಲಿ ಬೆಳಗ್ಗೆ 6.40 ರ ಸುಮಾರಿಗೆ ಭೂಮಿ ನಡುಗಿದೆ. ಬೆಳಗಿನ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೊಯ್ನಾ ಡ್ಯಾಂ ಸಮೀಪ ಲಘು ಭೂಕಂಪನ: ಕೊಯ್ನಾ ಅಣೆಕಟ್ಟಿನಿಂದ 20 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೊಲ್ಹಾಪುರ ಸತಾರಾ ಸೇರಿದಂತೆ ಸಾಂಗ್ಲಿ ಜಿಲ್ಲೆಯ ಶಿರಾಲಾ ತಾಲೂಕಿನ ಚಂದೋಲಿ ಅಭಯಾರಣ್ಯ ಪ್ರದೇಶದಿಂದ 15 ಕಿಮೀ ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 3.2ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಬೆಳಗ್ಗೆ 6.55ಕ್ಕೆ ಭೂಮಿ ಕಂಪಿಸಿದ ಅನುಭವವಾಗಿತ್ತು.

ಟರ್ಕಿಯಲ್ಲಿ ಮತ್ತೆ ಭೂಕಂಪ: ಟರ್ಕಿಯಲ್ಲಿ ಫೆಬ್ರವರಿಯಲ್ಲಿ ವಿನಾಶಕಾರಿ ಭೂಕಂಪ ಉಂಟಾಗಿ 50 ಸಾವಿರಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿತ್ತು. ಆಗಸ್ಟ್​ 11 ರಂದು ರಾತ್ರಿ ವೇಳೆ ದೇಶದಲ್ಲಿ ಮತ್ತೆ ಭೂಕಂಪನವಾಗಿದೆ. ಟರ್ಕಿಯ ದಕ್ಷಿಣ ಪ್ರದೇಶದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂಧ ಅನೇಕ ಕಟ್ಟಡಗಳಿಗೆ ಹಾನಿಯಾಗಿರುವುದಲ್ಲದೇ 23 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಭೂಕಂಪದ ಕೇಂದ್ರಬಿಂದು ಮಾಲತ್ಯಾ ಪ್ರಾಂತ್ಯದ ಯೆಸಿಲುರ್ಟ್ ನಗರದಲ್ಲಿ ಕೇಂದ್ರಿಕೃತಗೊಂಡಿತ್ತು. ಅಡಿಯಾಮಾನ್‌ನಲ್ಲಿ ಭೂಕಂಪನದ ಅನುಭವವಾಗಿದೆ. ಫೆಬ್ರವರಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಟರ್ಕಿ, ಸಿರಿಯಾ ನಲುಗಿ ಹೋಗಿದ್ದವು.

ಇದನ್ನೂ ಓದಿ: ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ಮೂರು ಜಿಲ್ಲೆಯಲ್ಲಿ 3.4 ತೀವ್ರತೆ ಭೂಕಂಪ: ಯಾವುದೇ ಪ್ರಾಣ ಹಾನಿ ಇಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.