ಅಮಿತಾಬ್ ಬಚ್ಚನ್ ಆಗಿಂದಾಗ್ಗೆ ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಾಗೂ ತಮ್ಮ ಬಗೆಗಿನ ಹಳೆಯ ಫೋಟೋಗಳನ್ನು ಶೇರ್ ಮಾಡುತ್ತ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಇದೀಗ ತಮ್ಮ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿದ್ದು, ಖುಷಿ ನೀಡಿದ್ದಾರೆ.
ಹೌದು ತಾಯಿ ತೇಜಿ ಬಚ್ಚನ್ ಹಾಗೂ ತಮ್ಮ ಅಜಿತಾಬ್ ಬಚ್ಚನ್ ಜೊತೆ ಇರುವ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಬಗ್ಗೆ ಬರೆದಿರುವ ಅಮಿತಾವ್, 'ನನ್ನ ಮೊದಲ ಬುಶ್ ಶರ್ಟ್' ಎಂದು ಬರೆದುಕೊಂಡಿದ್ದಾರೆ.
'ಅಂದು ನನಗೆ ವಿಶೇಷ ದಿನವಾಗಿತ್ತು. ಯಾಂಕದ್ರೆ ಅಮ್ಮ ಮತ್ತು ತಮ್ಮನ ಜೊತೆ ನಿಂತು ಫೋಟೋಶೂಟ್ ಮಾಡಿಸಿದ್ದೆ. ಇದು ನನ್ನ ಮೊದಲ ಬುಶ್ ಶರ್ಟ್' ಎಂದಿದ್ದಾರೆ.