ಬಾರಾಮತಿ(ಮಹಾರಾಷ್ಟ್ರ): ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇವರೇ ಉದಾಹರಣೆ. ದೃಢ ಸಂಕಲ್ಪ, ಕಠಿಣ ಪರಿಶ್ರಮದಿಂದ ಗುರಿ ಮುಟ್ಟಬಹುದು ಎಂಬುದನ್ನು ಅಲ್ತಾಫ್ ಶೇಖ್ ಸಾಬೀತು ಮಾಡಿದ್ದಾರೆ.
ಪರೀಕ್ಷೆಯಲ್ಲಿ 545ನೇ ರ‍್ಯಾಂಕ್ ಪಡೆದುಕೊಂಡಿರುವ ಅವರು ಸಂದರ್ಶನದ ವೇಳೆ ಐಪಿಎಸ್ ಆಗುವ ಇಂಗಿತ ವ್ಯಕ್ತಪಡಿಸಿದ್ದು, ಅದನ್ನೇ ಮೊದಲ ಆಯ್ಕೆಯಾಗಿಸಿಕೊಂಡಿದ್ದರು.
ಶಾಲಾ ದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಅಪ್ತಾಫ್
ಶಾಲಾ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಚಹಾ ಮತ್ತು ಭಜ್ಜಿ ಮಾರುತ್ತಿದ್ದ ಬಾರಾಮತಿಯ ಕಾಟೇವಾಡಿಯ ಅಲ್ತಾಫ್ ಶೇಖ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂದು ಟೀ ಮಾರುತ್ತಿದ್ದ ಬಾಲಕ ಇಂದು ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲ್ತಾಫ್ ಶೇಖ್ ಪ್ರಸ್ತುತ ಓಸ್ಮಾನಾಬಾದ್‌ನಲ್ಲಿ ಗುಪ್ತಚರ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅವರು ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು. ಅಲ್ತಾಫ್ ಆಹಾರ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿಯನ್ನೂ ಪಡೆದಿದ್ದಾರೆ. ತಮ್ಮ ಮಾಧ್ಯಮಿಕ ಶಿಕ್ಷಣವನ್ನು ನವೋದಯ ವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಓದಿ: ಅಕ್ಕನ ಹಾದಿಯಲ್ಲಿ ತಂಗಿ..UPSCಯಲ್ಲಿ 15ನೇ ಸ್ಥಾನ ಪಡೆದ IAS ಟಾಪರ್ ಟೀನಾ ಡಾಬಿ ಸಹೋದರಿ!