ETV Bharat / bharat

ವಕೀಲರಿಗೆ ಡ್ರೆಸ್​ಕೋಡ್​: ಬಿಸಿಐಗೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್!

ವಕೀಲರಿಗೆ ಇರುವ ಡ್ರೆಸ್​ಕೋಡ್ ಹಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಕೋರ್ಟ್​ ಬಿಸಿಐಗೆ ನೋಟಿಸ್ ನೀಡಿದೆ.

ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್
author img

By

Published : Jul 17, 2021, 11:32 AM IST

ಲಖನೌ: ವಕೀಲರಿಗೆ ಕಪ್ಪು ಕೋಟ್​ ಮತ್ತು ನಿಲುವಂಗಿಯ ಡ್ರೆಸ್​ ಕೋಡ್​​ ನಿಷೇಧಿಸಬೇಕೆಂಬ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್,​ ಬಾರ್​ ಕೌನ್ಸಿಲ್​ ಆಫ್​ ಇಂಡಿಯಾಗೆ ನೋಟಿಸ್ ನೀಡಿದೆ. ಆಗಸ್ಟ್​ 18 ರೊಳಗೆ ಈ ಕುರಿತು ಲಖನೌ ನ್ಯಾಯಪೀಠ ಮತ್ತು ಹೈಕೋರ್ಟ್​​ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅಜಯ್​ ಕುಮಾರ್ ಶ್ರೀ ವಾಸ್ತವ ಅವರಿದ್ದ ವಿಭಾಗೀಯ ಪೀಠವು ಬಿಸಿಐಗೆ ನೋಟಿಸ್ ನೀಡಿತು. ಅರ್ಜಿದಾರರು, ಬಿಸಿಐ ನಿಯಮಗಳ 1975 ರ ನಾಲ್ಕನೇ ಅಧ್ಯಾಯದ ನಿಬಂಧನೆಗಳನ್ನು ಪ್ರಶ್ನಿಸಿದ್ದಾರೆ. ಇದು ವಕೀಲರ ಕಾಯ್ದೆ 1961 ರ ಸೆಕ್ಷನ್ 49 (ಐ) (ಜಿಜಿ) ಅಡಿಯಲ್ಲಿ ರೂಪಿಸಲ್ಪಟ್ಟಿದ್ದು, ಸಂವಿಧಾನದ ನಿಯಮಗಳನ್ನು ಮೀರಿದೆ ಎಂದು ಆರೋಪಿಸಿದ್ದಾರೆ. ಸೆಕ್ಷನ್​ 14, 21 ಮತ್ತು 25 ನೇ ವಿಧಿಗಳನ್ನು ಬಿಸಿಐ ಉಲ್ಲಂಘಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ನ್ಯಾಯಪೀಠದ ಮುಂದೆ ವಾದಿಸಿದ ಅರ್ಜಿದಾರರು, ಕೋಟ್ ಮತ್ತು ನಿಲುವಂಗಿಯನ್ನು ಧರಿಸಿ ಮತ್ತು ಕುತ್ತಿಗೆಗೆ ಬ್ಯಾಂಡ್ ಕಟ್ಟುವ ಪ್ರಸ್ತುತ ಡ್ರೆಸ್​ ಕೋಡ್ ದೇಶದ ಹವಾಮಾನ ಸ್ಥಿತಿಗೆ ಸೂಕ್ತವಲ್ಲ ಎಂದು ಒತ್ತಿ ಹೇಳಿದರು. ಪ್ರಸ್ತುತ ಇರುವ ಡ್ರೆಸ್​ ಕೋಡ್​ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಸಂಕೇತವಾಗಿದೆ.

ಕ್ರಿಶ್ಚಿಯನ್​ಯೇತರರು ಈ ರೀತಿಯ ಉಡುಪನ್ನು ಧರಿಸುವಂತೆ ಒತ್ತಾಯಿಸಲು ಆಗುವುದಿಲ್ಲ. ಬಿಳಿ ಸೀರೆ ಅಥವಾ ಬಿಳಿ ಸಲ್ವಾರ್ ಧರಿಸಿರುವುದು ಹಿಂದೂ ಸಂಪ್ರದಾಯದಲ್ಲಿ ವಿಧವೆಯರ ಸಂಕೇತವಾಗಿದೆ. ದೇಶದ ವಕೀಲರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಾಗ ಬಿಸಿಐ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಬಾವಿಯಲ್ಲಿ ಬಿದ್ದ ಬಾಲಕಿ: ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ್ರು 11 ಮಂದಿ

ಇನ್ನೂ, ಬಿಸಿಐ ಜಾರಿಗೆ ತಂದಿರುವ ಡ್ರೆಸ್​ಕೋಡ್​ಅನ್ನು ಟೀಕಿಸಿರುವ ಅರ್ಜಿದಾರ ಹುಚ್ಚ ಕೂಡ ಬೇಸಿಗೆಯಲ್ಲಿ ಕೋಟ್ ಮತ್ತು ನಿಲುವಂಗಿ ಧರಿಸುವುದಿಲ್ಲ. ಆದರೆ, ವಕೀಲರು ಮತ್ತು ನ್ಯಾಯಾಧೀಶರು ಈ ಸಮವಸ್ತ್ರವನ್ನು ಹೆಮ್ಮೆಯಿಂದ ಧರಿಸುತ್ತಾರೆ ಎಂದರು.

ಬಿಸಿಐ ಮತ್ತು ಹೈಕೋರ್ಟ್ ಆಡಳಿತವು ಸೂಚಿಸಿರುವ ಕಪ್ಪು ನಿಲುವಂಗಿಯು ಸಂವಿಧಾನದ 14, 21 ಮತ್ತು 25 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ವಕೀಲರ ಮೂಲ ಹಕ್ಕುಗಳ ಅಸಮಂಜಸ, ಅನ್ಯಾಯ, ಅನುಚಿತ ಮತ್ತು ಉಲ್ಲಂಘನೆಯಾಗಿದೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.