ಸವಿ ಮಾಧೋಪುರ್ (ರಾಜಸ್ಥಾನ) : ಬಾಲಿವುಡ್ ಸ್ಟಾರ್ಸ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನ ಎಲ್ಲಾ ಗೇಟ್‌ಗಳಲ್ಲಿ 1ರಿಂದ 4 ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕೋಟೆಗೆ ಮೂರು ದ್ವಾರಗಳಿದ್ದು, ಅಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯ ಪೊಲೀಸರ ಪ್ರಕಾರ, ಕ್ಯಾಟ್,ವಿಕ್ಕಿ ಆಂತರಿಕ ಭದ್ರತೆಯ ಪ್ರತ್ಯೇಕ ತಂಡ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ವಿಕ್ಕಿ ಕೌಶಲ್ ವಿಂಟೇಜ್ ಕಾರಿನಲ್ಲಿ ದುರ್ಗವನ್ನು ಪ್ರವೇಶಿಸಲಿದ್ದಾರೆ. ಮುಸ್ಸಂಜೆ ವೇಳೆ ಮದುವೆ ಜರುಗಲಿದೆ. ಅದೇ ಸಮಯದಲ್ಲಿ, ಮಂಟಪ ಮತ್ತು ಚೆಂಡು ಹೂ ಮತ್ತು ಆರ್ಕಿಡ್ ಹೂವು (ಸೀತೆ ಹೂ) ಗಳಿಂದ ಅಲಂಕರಿಸಲಾಗಿದೆ. ಸುಮಾರು 70 ರಿಂದ 80 ಕುಶಲಕರ್ಮಿಗಳು ಮಂಟಪ ಮತ್ತು ಹೋಟೆಲ್ ಅನ್ನು ಅಲಂಕರಿಸುತ್ತಿದ್ದಾರೆ.
ಮದುವೆ ಸ್ಥಳದ ವಿಶೇಷ : ಚೌತ್ ಕಾ ಬರ್ವಾರಾದಲ್ಲಿನ ಕೋಟೆಯನ್ನು 14 ನೇ ಶತಮಾನದಲ್ಲಿ ರಜಪೂತ ಆಡಳಿತಗಾರರು ನಿರ್ಮಿಸಿದ್ದರು. ಇದರಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಸಿಕ್ಸ್ ಸೆನ್ಸಸ್ ಕಂಪನಿ ಆರಂಭಿಸಿದೆ. ಇದನ್ನು ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಯಿತು ಮತ್ತು ಈ ಅಲಿಶನ್ ಕೋಟೆಯು ಇಂದು ಸಂಜೆ 6 ಗಂಟೆಗೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ವಿವಾಹಕ್ಕೆ ಸಾಕ್ಷಿಯಾಗಲಿದೆ.
ದಂಪತಿಗಳಿಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿಯಲಿದ್ದಾರೆ. ಈ ವೇಳೆ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಯಾಟ್-ವಿಕ್ಕಿ ವೆಡ್ಡಿಂಗ್ ಹೋಟೆಲ್ ರೂಪಾಂತರವಾದ ಕೋಟೆಯಲ್ಲಿ ನಡೆಯುತ್ತಿರುವ ಮೊದಲ ರಾಯಲ್ ವೆಡ್ಡಿಂಗ್ ಎಂದು ಹೇಳಲಾಗುತ್ತಿದೆ.