ಹರಿಯಾಣ(ಉತ್ತರಪ್ರದೇಶ) : ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಜಿನ್ನಾ ಅವರನ್ನು ಸರ್ದಾರ್ ಪಟೇಲ್‌ಗೆ ಹೋಲಿಸಿದ್ದು, ಅವರ ಹೇಳಿಕೆಗಳಿಗೆ ಬಿಜೆಪಿ ಮತ್ತು ಇತರರು ಅವರನ್ನು ತರಾಟೆಗೆ ತೆಗೆದುಕೊಂಡರು.
ಸ್ವಾತಂತ್ರ್ಯ ಹೋರಾಟದಲ್ಲಿ ಜಿನ್ನಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಿಗೆ ಸಮಾನವಾಗಿ ಕೊಡುಗೆ ನೀಡಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವರು ತಮ್ಮ ವಿಭಜಕ ಮನಸ್ಥಿತಿಯನ್ನು ತಡೆಯುತ್ತಿಲ್ಲ. ಸಮಾಜವಾದಿ ಪಕ್ಷದ ಅಧ್ಯಕ್ಷರ ಹೇಳಿಕೆಯು ಇದನ್ನು ಪ್ರತಿಬಿಂಬಿಸುತ್ತದೆ. ಅವರು ಜಿನ್ನಾರನ್ನು ವೈಭವೀಕರಿಸಿದ್ದಕ್ಕಾಗಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಸೋಮವಾರ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ಯಾಲ ಗ್ರಾಮದಲ್ಲಿರುವ ನಾಥ ಪಂಥದ ಬಾಬಾ ಶಾಂತಿನಾಥ ಮಠದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಅಖಿಲೇಶ್ ಅವರು ಜಿನ್ನಾ ಕುರಿತು ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ. ಅದು ಖಂಡನೀಯ ಮತ್ತು ಎಸ್ಪಿ ಮುಖ್ಯಸ್ಥರು ಇತಿಹಾಸವನ್ನು ಚೆನ್ನಾಗಿ ಕಲಿಯಬೇಕು ಮತ್ತು ಭಾರತವನ್ನು ವಿಭಜಿಸಿದವರನ್ನು ಶ್ಲಾಘಿಸುವುದನ್ನು ನಿಲ್ಲಿಸಬೇಕು.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಾವು ಏಕ ಭಾರತ, ಶ್ರೇಷ್ಠತೆಯತ್ತ ಸಾಗುತ್ತಿದ್ದೇವೆ. ಭಾರತದ ಪರಿಕಲ್ಪನೆ ಮತ್ತು ವಿರೋಧ ಪಕ್ಷದ ನಾಯಕ ದೇಶದ ವಿಭಜನೆಯ ಮುಖ್ಯ ಶಿಲ್ಪಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.