ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ದೇಶದ ಅನ್ನದಾತರು ಬರೋಬ್ಬರಿ 1 ವರ್ಷದ ನಂತರ ಪ್ರತಿಭಟನೆ ಹಿಂಪಡೆದುಕೊಂಡಿದ್ದು, ಇದೀಗ ಮನೆಗಳತ್ತ ಮುಖ ಮಾಡಿದ್ದಾರೆ. ಆಂದೋಲನ ಅಂತ್ಯ ಮಾಡಿ ಮನೆ ಕಡೆ ತೆರಳುತ್ತಿರುವ ರೈತರ ಮೇಲೆ ವಿಮಾನವೊಂದು ಹೂವಿನ ಸುರಿಮಳೆಯನ್ನೇ ಹರಿಸಿದೆ.
ದೆಹಲಿಯ ಗಡಿಯಲ್ಲಿ ತಾತ್ಕಾಲಿಕ ವಸತಿ ಟೆಂಟ್ ಕಿತ್ತು ಹಾಕಿ, ಇದೀಗ ಸಾವಿರಾರು ರೈತರು ತಮ್ಮ ಮನೆಗಳತ್ತ ಪ್ರಯಾಣ ಪ್ರಾರಂಭಿಸಿದ್ದಾರೆ. ಟ್ರ್ಯಾಕ್ಟರ್ ಹಾಗೂ ವಿವಿಧ ವಾಹನಗಳಲ್ಲಿ ಅವರು ತೆರಳುತ್ತಿದ್ದ ವೇಳೆ ಅವರ ಮೇಲೆ ವಿಮಾನ ಹೂವಿನ ಸುರಿಮಳೆಯನ್ನೇ ಹರಿಸಿದೆ.
-
Flower petals being showered on farmers.
— Tractor2ਟਵਿੱਟਰ (@Tractor2twitr) December 11, 2021 " class="align-text-top noRightClick twitterSection" data="
Yes, they deserve this grand welcome.#FarmersProtest_FatehMarch pic.twitter.com/1eu9Lyd5Di
">Flower petals being showered on farmers.
— Tractor2ਟਵਿੱਟਰ (@Tractor2twitr) December 11, 2021
Yes, they deserve this grand welcome.#FarmersProtest_FatehMarch pic.twitter.com/1eu9Lyd5DiFlower petals being showered on farmers.
— Tractor2ਟਵਿੱਟਰ (@Tractor2twitr) December 11, 2021
Yes, they deserve this grand welcome.#FarmersProtest_FatehMarch pic.twitter.com/1eu9Lyd5Di
ಕೇಂದ್ರ ಸರ್ಕಾರ ಕಳೆದ ವರ್ಷದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ವಿವಾದಿತ ಕೃಷಿ ಕಾಯ್ದೆ ಜಾರಿಗೊಳಿಸುತ್ತಿರುವುದಾಗಿ ತಿಳಿಸಿತ್ತು. ಇವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ರಸ್ತೆಗಳಿದು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.
ರೈತರ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಈ ಸಲದ ಚಳಿಗಾಲದ ಸಂಸತ್ ಅಧಿವೇಶನ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕೃಷಿ ಕಾಯ್ದೆ ಹಿಂಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿತ್ತು. ಕೇಂದ್ರದ ಈ ನಿರ್ಧಾರದಿಂದ ತೃಪ್ತಿಯಾಗದ ರೈತರು, ಕನಿಷ್ಠ ಬೆಂಬಲ ಬೆಲೆ, ರೈತರ ಮೇಲಿನ ಎಫ್ಐಆರ್ ಸೇರಿದಂತೆ ಅನೇಕ ಬೇಡಿಕೆ ಮುಂದಿಟ್ಟುಕೊಂಡು ತಮ್ಮ ಹೋರಾಟ ಮುಂದುವರೆಸಿದ್ದರು.
ಇದನ್ನೂ ಓದಿರಿ: ಪಿನಾಕ ರಾಕೆಟ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ರೈತರ ಎಲ್ಲ ಬೇಡಿಕೆ ಈಡೇರಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರಿಂದ ರೈತರು ಇದೀಗ ಹೋರಾಟ ಸ್ಥಳದಿಂದ ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ.