ವಿಶಾಖಪಟ್ಟಣ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ತಿಳಿಸಿದೆ.
ಆಂಧ್ರಪ್ರದೇಶ ಟ್ರೇಡ್ ಪ್ರಮೋಷನ್ ಕಾರ್ಪೊರೇಷನ್ ಲಿಮಿಟೆಡ್ (ಎಪಿಟಿಪಿಸಿ) ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಪತ್ರ ಬರೆದಿದೆ. ಅಂತಾರಾಷ್ಟ್ರೀಯ ವಿಮಾನಗಳ ಕೊರತೆಯಿಂದ ತೀವ್ರ ನಷ್ಟವನ್ನು ಅನುಭವಿಸುತ್ತಿದ್ದೇವೆ ಮತ್ತು ವಿಮಾನ ನಿಲ್ದಾಣದಿಂದ ತಮ್ಮ ಸರಕು ಸೇವೆಗಳನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ವಿಮಾನಗಳು ಹಿಂತಿರುಗದ ಕಾರಣ ಸರಕುಗಳನ್ನು ಕಳುಹಿಸಲು ಅನುಮತಿಸಲಾಗುವುದಿಲ್ಲ ಮತ್ತು ವಿಮಾನ ನಿಲ್ದಾಣವು ಯಾವುದೇ ವಿನಾಯಿತಿಗಳನ್ನು ನೀಡುತ್ತಿಲ್ಲ ಎಂದು ಎರಡು ಕಂಪನಿಗಳು ಹೇಳಿಕೊಂಡಿವೆ. ಇನ್ನು ಗುಜರಾತ್ ಸ್ಟೇಟ್ ಎಕ್ಸ್‌ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (ಜಿಎಸ್‌ಇಸಿ) ವಕ್ತಾರ ಸತೀಶ್ ಮಾತನಾಡಿ, ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದರೂ ಲಾಕ್‌ಡೌನ್‌ನಿಂದ ಬಾಡಿಗೆ ಸೇರಿದಂತೆ ತಿಂಗಳಿಗೆ ಸುಮಾರು 7 ಲಕ್ಷ ರೂಪಾಯಿ ವೆಚ್ಚವನ್ನು ಕಂಪನಿಯು ಭರಿಸುವಂತಾಗಿದೆ ಎಂದಿದ್ದಾರೆ.