ETV Bharat / bharat

ಹೋರಾಟದಲ್ಲಿ ಪ್ರಾಣ ತೆತ್ತ 700ಕ್ಕೂ ಅಧಿಕ ರೈತ ಕುಟುಂಬಗಳ ತ್ಯಾಗ-ಬಲಿದಾನಕ್ಕೆ ಸಿಕ್ಕ ಫಲ : ಸೋನಿಯಾ - ಸೋನಿಯಾ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆ ವಾಪಸ್ ಪಡೆದುಕೊಳ್ಳುತ್ತಿದ್ದಂತೆ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗ್ತಿದೆ. ವಿವಿಧ ಮುಖಂಡರು ತರಹೇವಾರಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ..

repeal farm laws
repeal farm laws
author img

By

Published : Nov 19, 2021, 5:06 PM IST

ಮುಂಬೈ (ಮಹಾರಾಷ್ಟ್ರ) : ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ(Central Government) ಮೂರು ವಿವಾದಿತ ಕೃಷಿ ಕಾನೂನು(repeal farm laws) ವಾಪಸ್ ಪಡೆದುಕೊಂಡಿದೆ. ಇದಕ್ಕೆ ವಿವಿಧ ಪಕ್ಷದ ನಾಯಕರು ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ.

ಮುಂಬರುವ ಪಂಚರಾಜ್ಯ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ರೀತಿಯಾ ನಿರ್ಧಾರ ಕೈಗೊಂಡಿದೆ ಎಂದು ಅನೇಕ ಮುಖಂಡರು ಹೇಳಿದ್ದಾರೆ. ಇದಕ್ಕೆ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್(NCP chief Sharad Pawar), ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಹಾಗೂ ಎಸ್ಪಿಯ ಅಖಿಲೇಶ್ ಯಾದವ್​​ ಕೂಡ ಸಾಥ್​ ನೀಡಿದ್ದಾರೆ.

  • As UP, Punjab elections have neared and people in Haryana, Punjab started boycotting BJP, they took this decision to repeal the #FarmLaws. We can't forget that due to this govt, farmers were forced to sit on protest for 1 year: NCP chief Sharad Pawar pic.twitter.com/6NeoHZvUWl

    — ANI (@ANI) November 19, 2021 " class="align-text-top noRightClick twitterSection" data=" ">

ಬಿಜೆಪಿಯನ್ನ ಜನ ಬಹಿಷ್ಕರಿಸುತ್ತಿದ್ದಾರೆ : ವಿವಾದಿತ ಕೃಷಿ ಕಾಯ್ದೆ ವಾಪಸ್(farm laws)​ ಪಡೆದುಕೊಳ್ಳುತ್ತಿದ್ದಂತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಶರದ್ ಪವಾರ್​, ಉತ್ತರಪ್ರದೇಶ, ಪಂಜಾಬ್​ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಲಿನ ಜನರು ಬಿಜೆಪಿ ಬಹಿಷ್ಕಾರ ಮಾಡಲು ಶುರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ರೈತರು ಕಳೆದ 1 ವರ್ಷದಿಂದ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿಯಿತು ಎಂಬುದನ್ನ ನಾವು ಮರೆಯುವಂತಿಲ್ಲ. ಎಲ್ಲ ರಾಜ್ಯಗಳ ಕೃಷಿ ಸಚಿವರ ಸಲಹೆ ಪಡೆದುಕೊಂಡಿರಲಿಲ್ಲ. ಕೇಂದ್ರ ಸರ್ಕಾರ ಯಾವುದೇ ರೀತಿಯ ಚರ್ಚೆ ಮಾಡದೆ ವಿವಾದಿತ ಕೃಷಿ ಕಾಯ್ದೆಗಳನ್ನ ಜಾರಿಗೆ ತಂದಿತ್ತು ಎಂದು ಹೇಳಿದ್ದಾರೆ.

10 ವರ್ಷಗಳ ಕಾಲ ಕೇಂದ್ರ ಕೃಷಿ ಸಚಿವನಾಗಿ ಕೃಷಿ ವಿಷಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಎಲ್ಲ ರಾಜ್ಯದ ಕೃಷಿ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೃಷಿ ಕಾನೂನು ಜಾರಿಗೆ ತಂದಿರುವುದು ಸರಿಯಲ್ಲ ಎಂದರು.

ಮತ ಪಡೆಯಲು ಕಾನೂನುಗಳ ಹಿಂತೆಗೆತ ; ಅಖಿಲೇಶ್​ : ಯಾವುದೇ ಕಾರಣಕ್ಕೂ ರೈತರು ಕ್ಷಮಿಸುವುದಿಲ್ಲ. ದೇಶದಲ್ಲಿ ಬಿಜೆಪಿ ಅಳಸಿ ಹಾಕುತ್ತಾರೆ. ಕೇಂದ್ರ ಸರ್ಕಾರಕ್ಕೆ ಚುನಾವಣೆಯ ಭಯವಿದೆ ಎಂದು ಅಖೀಲೇಶ್ ಯಾದವ್(SP Akhilesh Yadav) ಹೇಳಿದ್ದಾರೆ. ಮತ ಪಡೆದುಕೊಳ್ಳಲು ಈ ಕಾನೂನು ಹಿಂಪಡೆದುಕೊಳ್ಳಲಾಗಿದೆ. ಚುನಾವಣೆ ನಂತರ ಅಂತಹ ಕಾನೂನು ಮರಳಿ ತಂದರೆ? ಕೇಂದ್ರ ರೈತರ ಬಗ್ಗೆ ಯೋಚಿಸುತ್ತಿಲ್ಲ.

ಪ್ರತಿ ಹಂತದಲ್ಲೂ ಅನ್ನದಾತರ ಅವಮಾನ ಮಾಡಲಾಗಿದೆ. ರೈತರ ಶ್ರಮಕ್ಕೆ ಫಲ ಸಿಕ್ಕಿದೆ. ಇದು ಅಹಂಕಾರದ ಸೋಲು ಮತ್ತು ರೈತರ ಗೆಲುವು. ಮುಂಬರುವ ಚುನಾವಣೆಯಲ್ಲಿ ಜನರು ಕೇಂದ್ರವನ್ನ ಕ್ಷಮಿಸುವುದಿಲ್ಲ. ರೈತರ ಕ್ಷಮೆ ಕೇಳಿದವರು ರಾಜಕೀಯಕ್ಕೆ ಶಾಶ್ವತವಾಗಿ ರಾಜೀನಾಮೆ ನೀಡಬೇಕು ಎಂದರು.

ಇದನ್ನೂ ಓದಿರಿ: Farm Laws repealed: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ: ಮೂರೂ ಕೃಷಿ ಕಾನೂನುಗಳು ರದ್ದು!

ಸೋನಿಯಾ ಗಾಂಧಿ

  • Today, the sacrifices of more than 700 farmer families, whose members laid down their lives in this struggle for justice, have paid off. Today, truth, justice, & non-violence have won: Congress Interim President Sonia Gandhi in a statement on repeal of three #FarmLaws pic.twitter.com/bGGomx3eO1

ನ್ಯಾಯಕ್ಕಾಗಿ ನಡೆದ ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ತೆತ್ತ 700ಕ್ಕೂ ಹೆಚ್ಚು ರೈತ ಕುಟುಂಬಗಳ ತ್ಯಾಗ-ಬಲಿದಾನಕ್ಕೆ ಇಂದು ಫಲ ಸಿಕ್ಕಿದೆ. ಇಂದು ಸತ್ಯ, ನ್ಯಾಯ ಮತ್ತು ಅಹಿಂಸೆಗೆ ಜಯ ಸಿಕ್ಕಿದೆ ಎಂದು ಸೋನಿಯಾ(Sonia gandhi) ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ

  • What did the leaders of the Govt not call the farmers? 'Aandolanjeevi', goons, terrorists, traitors - who called them all this? Why was the PM silent when all of this was being said? He himself uttered the word 'aandolanjeevi': Congress general secretary Priyanka Gandhi Vadra pic.twitter.com/3mTVgoYGmc

    — ANI UP (@ANINewsUP) November 19, 2021 " class="align-text-top noRightClick twitterSection" data=" ">

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಸೂಚನೆ ಸಿಗುತ್ತಿದ್ದಂತೆ ಪ್ರಧಾನಿ ದಿಢೀರ್​ ಆಗಿ ಈ ನಿರ್ಧಾರ ಕೈಗೊಂಡಿದ್ದಾರೆ. ದೇಶದ ರೈತರು ಪ್ರಧಾನಿಯವರಿಗೆ ವಾಸ್ತವತೆಯ ಅರಿವು ಮೂಡಿಸಿದ್ದಾರೆ ಎಂದರು.

ಕಳೆದ 1 ವರ್ಷದಿಂದ ನಡೆದ ರೈತರ ಹೋರಾಟದಲ್ಲಿ 600ಕ್ಕೂ ಅಧಿಕ ರೈತರು ಹುತಾತ್ಮರಾಗಿದ್ದಾರೆ. ಅವರ ಸಾವಿಗೆ ಕಾರಣ ಯಾರು? ನಿಮ್ಮ ಸಚಿವರೊಬ್ಬರ ಮಗ ರೈತರ ಸಾವಿಗೆ ಕಾರಣವಾದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.