ಲಕ್ನೋ: ಇದೇ ಮೊದಲ ಬಾರಿ ರಾಮ ಮಂದಿರದ ಭದ್ರತೆಗೆ ಕೃತಕ ಬುದ್ಧಿಮತ್ತೆ (AI) ಕಣ್ಗಾವಲನ್ನು ಇಡಲಾಗುತ್ತಿದೆ. ಜನವರಿ 22 ರಂದು ದೇಗುಲದ ಉದ್ಘಾಟನೆ ಭದ್ರತೆ ಮತ್ತು ಯಾತ್ರಿಕರ ಸಂಖ್ಯೆ ಹೆಚ್ಚಲಿದ್ದು, ಕಾಲ್ತುಳಿತವಾಗುವ ಸಂಭವ ಹೆಚ್ಚಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.
ಎಐ ಕಣ್ಗಾವಲಿನ ಆರಂಭಿಕ ಯೋಜನೆಯನ್ನು ಅಯೋಧ್ಯೆಯಲ್ಲಿ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಕೆಲ ಕಾಲಗಳ ಪರಿಶೀಲನೆ ನಂತರ ಇದು ಕಾರ್ಯಸಾಧ್ಯ ಎಂದು ತಿಳಿದು ಬಂದರೆ ಇದನ್ನು ಭದ್ರತೆ ಮತ್ತು ಕಣ್ಗಾವಲಿನ ಡ್ರಿಲ್ನ ಆಂತರಿಕ ಭಾಗವಾಗಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಐ ಕಣ್ಗಾವಲಿನ ಹೊರತಾಗಿ, ರಾಮ ಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಸಮಾರಂಭದಲ್ಲಿ 11ಸಾವಿರ ರಾಜ್ಯ ಪೊಲೀಸರು ಮತ್ತು ಪ್ಯಾರಮಿಲಿಟರಿ ಸೇನೆಯನ್ನು ಬಂದೋಬಸ್ತ್ಗೆ ನೇಮಿಸಲಾಗಿದೆ. ಅಯೋಧ್ಯೆಗೆ ಬೆದರಿಕೆ ಹಿನ್ನಲೆ ಅಯೋಧ್ಯೆಯಲ್ಲಿನ ಎಲ್ಲಾ ಚಲನವಲನದ ಮೇಲೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಐ ಕಣ್ಗಾವಲಿನಿಂದ ದೇಗುಲದ ಆವರಣದಲ್ಲಿ ಯಾವುದೇ ಅನುಮಾನದ ಘಟನೆ ಮತ್ತು ಜನ ಗುಂಪು ಹಾಗೂ ಪದೇ ಪದೇ ಭೇಟಿ ನೀಡುವವರನ್ನು ಪತ್ತೆ ಮಾಡಲು ಸಹಾಯಕವಾಗಲಿದೆ. ಇದರಿಂದ ಭದ್ರತೆ ಆಲರ್ಟ್ ಕೂಡ ತಕ್ಷಣಕ್ಕೆ ಮೂಡಿಸಲಾಗುವುದು, ಭದ್ರತಾ ಏಜೆಮನ್ಸಿಗಳು ಇದನ್ನು ಫಾಲೋ ಅಪ್ ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನ ಸಮಾರಂಭದ ಹಿನ್ನಲೆ ಈಗಾಗಲೇ ಮುನ್ನೆಚ್ಚರಿಕೆವಹಿಸಿರುವ ಉತ್ತರ ಪ್ರದೇಶ ಪೊಲೀಸರು ಸಾಮಾಜಿಕ ಮಾಧ್ಯಮ ಕಣ್ಗಾವಲನ್ನು ತೀವ್ರಗೊಳಿಸಿದ್ದಾರೆ. ಜನವರಿ 22ರ ಭದ್ರತಾ ಯೋಜನೆಯನ್ನು ಇನ್ನೂ ಅಂತಿಮಗೊಳಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಏಜೆನ್ಸಿಗಳು ಬೆದರಿಕೆ ಗ್ರಹಿಕೆ ಮತ್ತು ಭದ್ರತಾ ಅಗತ್ಯವನ್ನು ವಿಶ್ಲೇಷಿಸುತ್ತಿದ್ದಾರೆ. ರಾಮ ಮಂದಿರ ಇರುವ ಪ್ರದೇಶವನ್ನು ರೆಡ್ ಜೋನ್ ಆಗಿದ್ದು ಇದರ ಮೇಲೆ ಈಗಾಗಲೇ ವಿಡಿಯೋ ಕಣ್ಗಾವಲನ್ನು ಇಡಲಾಗಿದೆ. ಇಲ್ಲಿನ ಪ್ರತಿ ಘಟನೆ ಕುರಿತು ಜಾಗೃತಿವಹಿಸಲು ಸ್ಥಳೀಯ ಗುಪ್ತಚರ ಘಟಕದ 38 ಅಧಿಕಾರಿಗಳನ್ನು ನೇಮಿಸಲಾಗಿದೆ.
ರಾಮ ಮಂದಿರ ಸಮೀಪದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಸೆರಿದಂತೆ ಟ್ಯಾಕ್ಸಿ ಡ್ರೈವರ್, ಇ- ರಿಕ್ಷಾ ಡ್ರೈವರ್, ಹೋಟೆಲ್ ಸಿಬ್ಬಂದಿ, ಭಿಕ್ಷುಕ, ಅರ್ಚಕರು, ನಿವಾಸಿಗಳ ಪರಿಶೀಲನ ಪ್ರಕ್ರಿಯೆ ನಡೆಸಲಾಗಿದೆ. ಇದರ ಜೊತೆಗೆ ಕಾರ್ಯಕ್ರಮದಂದು ಬರುವ ಅತಿಥಿಗಳ ಮತ್ತು ಅವರೊಟ್ಟಿಗಿನ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲಿಸಲಾಗಿದೆ.
ಭದ್ರತೆಗೆ 26 ಕಂಪನಿಗಳ ಅರೆಸೇನಾಪಡೆ ಮತ್ತು ಪಿಎಸಿ ಹಾಗೂ ಸುಮಾರು 8,000 ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಯುಪಿಯ ಆಂಟಿ ಟೆರರ್ ಸ್ಕ್ವಾಡ್ ಮತ್ತು ಸ್ಪೆಷಲ್ ಟಾಸ್ಕ್ ಟೀಮ್ ಮತ್ತು ಕೇಂದ್ರದ ಏಜೆನ್ಸಿಗಳಾದ ರಾಷ್ಟ್ರೀಯ ಭದ್ರತಾ ಗಾರ್ಡ್ಗಳನ್ನು ಭದ್ರತೆಗೆ ನೇಮಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ರಾಮಮಂದಿರ, ಯುಪಿ ಸಿಎಂ ಯೋಗಿಗೆ ಬಾಂಬ್ ಬೆದರಿಕೆ: ಇಬ್ಬರ ಬಂಧನ