ETV Bharat / bharat

ಬಾಲಕಿಯರಿಗೆ ಇನೋವೇಶನ್ ಸೆಂಟರ್‌ ಆಗ್ತಿದೆ 150 ವರ್ಷ ಹಳೆಯ ಕಟ್ಟಡ - Gujarat heritage building

ಎಲ್ಎಕ್ಸ್ಎಸ್ ಫೌಂಡೇಶನ್, ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಭಾಗಿತ್ವದಲ್ಲಿ ಅಹಮದಾಬಾದ್​ನ ಖಾಮಾಸಾದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡವನ್ನು ಮರು ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ.

Ahmedabad
150 ವರ್ಷ ಹಳೆಯ ಕಟ್ಟಡ ಮರು ವಿನ್ಯಾಸ
author img

By

Published : Aug 1, 2021, 10:45 AM IST

Updated : Aug 1, 2021, 12:59 PM IST

ಅಹಮದಾಬಾದ್​: ಇಲ್ಲಿನ ಖಾಮಾಸಾದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡವನ್ನು ಮರು ವಿನ್ಯಾಸಗೊಳಿಸಿ, ಹಿಂದುಳಿದ ಬಾಲಕಿಯರಿಗಾಗಿ ಇನೋವೇಶನ್​ ಸೆಂಟರ್​ ತೆರೆಯಲು ಯೋಜನೆ ರೂಪಿಸಲಾಗಿದೆ. 2001ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಈ ಕಟ್ಟಡವು ಭಾರಿ ಹಾನಿಗೊಳಗಾಗಿತ್ತು. ಈ ಬಳಿಕ ಮೊದಲ ಬಾರಿ ಮರು ವಿನ್ಯಾಸ ಕಾರ್ಯ ನಡೆಸಲಾಗುತ್ತಿದೆ.

ಎಲ್ಎಕ್ಸ್ಎಸ್ ಫೌಂಡೇಶನ್, ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಭಾಗಿತ್ವದಲ್ಲಿ ಈ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಂದಾಜು 3.2 ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ಫೌಂಡೇಶನ್‌ನ ಸಹ ಸಂಸ್ಥಾಪಕಿ ಸಂಸ್ಕೃತಿ ಪಾಂಚಾಲ್ ಮಾತನಾಡಿ, "ಈ ಹಿಂದೆ ಇದು ಬಾಲಕಿಯರ ಕಾಲೇಜಾಗಿತ್ತು. ಆದರೆ 2001ರಲ್ಲಿ ಸಂಭವಿಸಿದ ಭೂಕಂಪನದಿಂದ ಹಾನಿಗೊಳಗಾಯಿತು. ಈ ಬಳಿಕ ಯಾರೂ ಸಹ ಇದನ್ನು ಅಭಿವೃದ್ಧಿ ಮಾಡಲು ಮುಂದಾಗಲಿಲ್ಲ. ಸರ್ಕಾರವು ಸಹ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಮುಂದಾಯಿತು" ಎಂದು ಹೇಳಿದರು.

150 ವರ್ಷ ಹಳೆಯ ಕಟ್ಟಡ ಮರು ವಿನ್ಯಾಸ

"2018 ರಲ್ಲಿ ನಾವು ಕಟ್ಟಡವನ್ನು ಪುನಃಸ್ಥಾಪಿಸಲು ನಿರ್ಧರಿಸಿದ್ದೆವು. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಸಚಿವರನ್ನು ಸಹ ಸಂಪರ್ಕಿಸಿದ್ದೇವೆ. ಇನ್ನು ಮುಂದಿನ ಎರಡು ವರ್ಷಗಳಲ್ಲಿ ಈ ಕೇಂದ್ರವನ್ನು ಪೂರ್ಣಗೊಳಿಸಲಾಗುವುದು" ಎಂದು ಅವರು ಹೇಳಿದರು.

Last Updated : Aug 1, 2021, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.