ETV Bharat / bharat

ಹೊಸ ಪಾರ್ಕಿಂಗ್ ನೀತಿ ಅಳವಡಿಸಲು ಅಹಮದಾಬಾದ್ ಸಜ್ಜು - ಅಹಮದಾಬಾದ್ ಲೇಟೆಸ್ಟ್ ನ್ಯೂಸ್

ಪಾರ್ಕಿಂಗ್ ಸ್ಥಳಾವಕಾಶದ ಅಗತ್ಯವಿದ್ದು, ವಾಹನಗಳನ್ನು ರಸ್ತೆಗಳ ಇಕ್ಕೆಲಗಳಲ್ಲಿ ನಿಲ್ಲಿಸುವುದು ಸಾಮಾನ್ಯ ದೃಶ್ಯವಾಗಿದೆ. ಇದನ್ನು ಪರಿಗಣಿಸಿ, ಅಹಮದಾಬಾದ್ ಆಡಳಿತವು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ತರಲು ಮುಂದಾಗಿದೆ.

Ahmedabad civic body announces new parking policy
ಹೊಸ ಪಾರ್ಕಿಂಗ್ ನೀತಿ ಅಳವಡಿಸಲು ಅಹಮದಾಬಾದ್ ಸಜ್ಜು
author img

By

Published : May 18, 2021, 3:46 AM IST

ಅಹಮದಾಬಾದ್, ಗುಜರಾತ್​: ವಾಹನ ಮಾಲೀಕರು ತಮ್ಮ ವಾಹನಗಳನ್ನು ತಮ್ಮ ವಸತಿ ಪ್ರದೇಶದಲ್ಲಿ ಮತ್ತು ತಮ್ಮ ವ್ಯಾಪಾರ ಅಥವಾ ವಾಣಿಜ್ಯ ಕೆಲಸದ ಸ್ಥಳದಲ್ಲಿ ನಿಲುಗಡೆ ಮಾಡಲು ಅಹಮದಾಬಾದ್​​ನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಹೊಸ ನಿಯಮಾವಳಿ ಜಾರಿಗೊಳಿಸಲು ಮುಂದಾಗಿದೆ.

ವಾಹನ ನಿಲುಗಡೆಗೆ ಮಾಸಿಕ ಪರವಾನಗಿ ಪರಿಚಯಿಸುವ ಕುರಿತಂತೆ ನಗರಸಭೆ ಆಯುಕ್ತರು ಪ್ರಸ್ತಾಪಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಕಾರು ಹೊಂದಿರುವವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ವಸತಿ ಪ್ರದೇಶಗಳು ಮತ್ತು ಖಾಸಗಿ ಕಟ್ಟಡಗಳಲ್ಲಿನ ಪಾರ್ಕಿಂಗ್ ವಲಯಗಳನ್ನು ಮಹಾನಗರ ಪಾಲಿಕೆ ಬಿಲ್ಡರ್‌ಗಳೊಂದಿಗೆ ಸಮಾಲೋಚಿಸಿ ಗೊತ್ತುಪಡಿಸಲಾಗುತ್ತದೆ. 2012ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದ್ವಿಚಕ್ರ ವಾಹನಗಳು ನಗರದ ಶೇಕಡಾ 26ರಷ್ಟು ವಾಹನಗಳನ್ನು ಒಳಗೊಂಡಿದ್ದು, ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: ಹೆಲ್ಪ್​ಲೈನ್​ಗೆ ಅಶ್ಲೀಲ ವಿಡಿಯೋ, ಫೋಟೋ ಕಳಿಸಿದ್ದವನಿಗೆ ಪೊಲೀಸರ ಹುಡುಕಾಟ

ಪಾರ್ಕಿಂಗ್ ಸ್ಥಳಾವಕಾಶದ ಅಗತ್ಯವಿದ್ದು, ವಾಹನಗಳನ್ನು ರಸ್ತೆಗಳ ಇಕ್ಕೆಲಗಳಲ್ಲಿ ನಿಲ್ಲಿಸುವುದು ಸಾಮಾನ್ಯ ದೃಶ್ಯವಾಗಿದೆ. ಇದನ್ನು ಪರಿಗಣಿಸಿ, ಆಡಳಿತವು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ತರಲು ಮುಂದಾಗಿದೆ.

ಪ್ರಸ್ತುತ, ವಾಹನಗಳು ರಸ್ತೆಯ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳಿಗೆ ತಿರುಗಾಡಲು ಕಷ್ಟಕರವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.