ETV Bharat / bharat

ಬ್ಲಾಗರ್ ರಿತಿಕಾ ಮರ್ಡರ್ ಕೇಸ್​: ಹೊಸ ವಿಡಿಯೋ ವೈರಲ್.. ಪತಿಯೇ ಕೊಲೆಗಾರ? - ರಿತಿಕಾ ಕೊಲೆ ವೈರಲ್ ವಿಡಿಯೋ

ಪೊಲೀಸರು ಫೊರೆನ್ಸಿಕ್ ತಂಡದೊಂದಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕೊಲೆಗಾರರಿಂದ ಬಚಾವಾಗಲು ಕೊನೆಕ್ಷಣದವರೆಗೂ ರಿತಿಕಾ ಹೋರಾಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಿತಿಕಾ ಹಾಗೂ ವಿಪುಲ್ ವಾಸಿಸುತ್ತಿದ್ದ ಫ್ಲ್ಯಾಟ್ ನಲ್ಲಿನ ವಸ್ತುಗಳು ಸಂಪೂರ್ಣ ಹರಡಿವೆ. ಗೋಡೆಯ ಮೇಲೆ ಉಗುರಿನ ಗೀಚು ಕಲೆಗಳಿವೆ. ಹೂಕುಂಡಗಳು ಒಡೆದಿರುವುದು ಕಾಣಿಸುತ್ತಿದೆ.

agra-ritika-murder-case-accused-akash-wanted-to-destroy-evidence-after-murder

author img

By

Published : Jun 25, 2022, 3:29 PM IST

ಆಗ್ರಾ(ಉತ್ತರ ಪ್ರದೇಶ): ಬ್ಲಾಗರ್ ರಿತಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳು ಒಂದೊಂದಾಗಿ ಹೊರಬರಲಾರಂಭಿಸಿವೆ. ಜೂನ್ 24 ರ ಮಧ್ಯಾಹ್ನ 12ರ ಸುಮಾರಿಗೆ ರಿತಿಕಾ ಪತಿ ಹಾಗೂ ನಾದಿನಿ ಇಬ್ಬರೂ ಸೇರಿ ರಿತಿಕಾರನ್ನು ತಾಜ​ಗಂಜ್ ನಲ್ಲಿರುವ​ ಓಂ ಶ್ರೀ ಅಪಾರ್ಟಮೆಂಟಿನ ನಾಲ್ಕನೇ ಮಹಡಿಯಿಂದ ಕೆಳಗೆಸೆದು ಕೊಲೆ ಮಾಡಿದ್ದರು.

ಇದಾಗಿ 15 ನಿಮಿಷಗಳ ನಂತರ ರಿತಿಕಾ ಪತಿ, ಕೆಳಗೆ ಬಂದು ಆಕೆಯ ಕತ್ತು ಹಾಗೂ ಕೈಗಳಿಗೆ ಬಿಗಿಯಲಾಗಿದ್ದ ಹಗ್ಗಗಳನ್ನು ಬಿಚ್ಚುತ್ತಿರುವುದು ಈಗ ಸಿಕ್ಕ ವಿಡಿಯೋದಲ್ಲಿ ಬಹಿರಂಗವಾಗಿದೆ. ರಿತಿಕಾರನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆಯುತ್ತಿರುವ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಿತಿಕಾ ನಾಲ್ಕನೇ ಮಹಡಿಯಿಂದ ಕೆಳಗೆ ಬೀಳುವುದು ಇದರಲ್ಲಿ ಕಾಣಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ರಿತಿಕಾ ಪತಿ ಆಕಾಶ ಗೌತಮ್, ಅವರ ಇಬ್ಬರು ಸಹೋದರಿಯರು ಹಾಗೂ ರಿತಿಕಾಳ ಪ್ರಿಯಕರನನ್ನು ಬಂಧಿಸಿದ್ದಾರೆ.

ಕೊಲೆ ನಡೆದ ದಿನದಂದು ರಿತಿಕಾಳ ಪತಿ ಆಕಾಶ ಗೌತಮ್, ಇಬ್ಬರು ನಾದಿನಿಯರು ಹಾಗೂ ಇನ್ನಿಬ್ಬರು ವ್ಯಕ್ತಿಗಳು ತಾಜಗಂಜ್​ನಲ್ಲಿರುವ ಓಂ ಶ್ರೀ ಅಪಾರ್ಟಮೆಂಟಿನ ಪ್ರವೇಶದ್ವಾರದ ಬಳಿ ಬಂದಿದ್ದಾರೆ. ಅಪಾರ್ಟಮೆಂಟ್​ಗೆ ಬಂದು ಹೋಗುವವರ ಬಗ್ಗೆ ಇವರು ಪರಿಶೀಲನೆ ಮಾಡಿದ್ದರು. ಅಪಾರ್ಟಮೆಂಟ್ ಎದುರಿನ ಸಿಸಿಟಿವಿಯಲ್ಲಿ ಇದೆಲ್ಲವೂ ಸೆರೆಯಾಗಿದೆ. ಇವರೆಲ್ಲರೂ ಎರಡು ಬೈಕ್​ಗಳ ಮೇಲೆ ಬಂದಿದ್ದರು. ಸೆಕ್ಯೂರಿಟಿ ಗಾರ್ಡ್​ಗೆ ತಪ್ಪು ಫ್ಲ್ಯಾಟ್ ನಂಬರ್ ಹೇಳಿ ದಾರಿ ತಪ್ಪಿಸಿದ್ದರು.

ಈಗ ಈ ಪ್ರಕರಣದಲ್ಲಿ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಪತ್ನಿಯನ್ನು ನಾಲ್ಕನೇ ಮಹಡಿಯಿಂದ ಎಸೆದ 15 ನಿಮಿಷಗಳ ನಂತರ ಆಕಾಶ್​ ಗೌತಮ್ ಶವದ ಬಳಿಗೆ ಬರುತ್ತಾರೆ. ರಿತಿಕಾಳ ಕುತ್ತಿಗೆಗೆ ಸಿಲುಕಿದ ಬಟ್ಟೆ, ಹಗ್ಗ ಹಾಗೂ ಕೈಗೆ ಕಟ್ಟಲಾದ ಹಗ್ಗಗಳನ್ನು ಬಿಚ್ಚುವ ಪ್ರಯತ್ನ ಮಾಡುತ್ತಾರೆ. ಇದರ ವಿಡಿಯೋವನ್ನು ಸಹ ಯಾರೋ ಸೆರೆಹಿಡಿದಿದ್ದಾರೆ.

ಪೊಲೀಸರು ಫೊರೆನ್ಸಿಕ್ ತಂಡದೊಂದಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕೊಲೆಗಾರರಿಂದ ಬಚಾವಾಗಲು ಕೊನೆಕ್ಷಣದವರೆಗೂ ರಿತಿಕಾ ಹೋರಾಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಿತಿಕಾ ಹಾಗೂ ವಿಪುಲ್ ವಾಸಿಸುತ್ತಿದ್ದ ಫ್ಲ್ಯಾಟ್ ನಲ್ಲಿನ ವಸ್ತುಗಳು ಸಂಪೂರ್ಣ ಹರಡಿವೆ. ಗೋಡೆಯ ಮೇಲೆ ಉಗುರಿನ ಗೀಚು ಕಲೆಗಳಿವೆ. ಹೂಕುಂಡಗಳು ಒಡೆದಿರುವುದು ಕಾಣಿಸುತ್ತಿದೆ.

ರಿತಿಕಾರ ವಿವಾಹ ಜೀವನದ ಬಗ್ಗೆ ಆಕೆಯ ಸಹೋದರ ಉತ್ಕರ್ಷ ಪೊಲೀಸರಿಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ರಿತಿಕಾ ಹಾಗೂ ಆಕಾಶ್ ಗೌತಮ್ 2014 ರಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಆಕಾಶ ಫಿರೋಜಾಬಾದಿನ ಟೂಂಡ್ಲಾ ನಿವಾಸಿಯಾಗಿದ್ದರು. ರಿತಿಕಾ ಕುಟುಂಬದವರು ಆಕೆಯೊಂದಿಗೆ ಸಂಬಂಧ ಕಡಿದುಕೊಂಡಿದ್ದರು. ಆದರೆ ಆಕಾಶ್ ಮನೆ ಬಳಿಯೇ ವಾಸವಿದ್ದ ರಿತಿಕಾಳ ಮಾವನ ಕುಟುಂಬದವರು ರಿತಿಕಾ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತ್ತಿದ್ದರು. ಆಕಾಶ್​ ಮೊದಲಿನಿಂದಲೂ ಏನೂ ದುಡಿಯುತ್ತಿರಲಿಲ್ಲ. ಆತನಿಗೆ ಕೆಲಸಕ್ಕೆ ಹೋಗುವಂತೆ ರಿತಿಕಾ ಒತ್ತಾಯಿಸುತ್ತಿದ್ದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಹಲವಾರು ಬಾರಿ ಜಗಳವಾಗಿತ್ತು. ಒಂದು ಬಾರಿ ಆಕಾಶ್ ರಿತಿಕಾರಿಗೆ ಬೆಂಕಿ ಹಚ್ಚಿದ್ದ. ಆತ ರಿತಿಕಾರಿಗೆ ಸತತವಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದ ಎನ್ನಲಾಗ್ತಿದೆ.

ಆಕಾಶ್ ಏನೂ ಕೆಲಸ ಮಾಡದ್ದರಿಂದ ರಿತಿಕಾ ಫಿರೊಜಾಬಾದಿನ ಶಾಲೆಯೊಂದರಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಆಕಾಶ್​ನ ಹಿಂಸೆ ತಡೆಯಲಾಗದೆ ಆಕೆ ಆತನಿಂದ ದೂರವಾದರು. ಇಬ್ಬರೂ ಕೇವಲ ಮೂರು ವರ್ಷ ಮಾತ್ರ ಜೊತೆಯಾಗಿದ್ದರು. ಇದರ ನಂತರ ಫಿರೋಜಾಬಾದಿನ ವಿಪುಲ್ ಅಗ್ರವಾಲ್ ಎಂಬಾತನ ಪರಿಚಯ ಅವರಿಗಾಯಿತು. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರಿಂದ ಲಿವ್ ಇನ್ ರಿಲೇಶನಶಿಪ್​ನಲ್ಲಿ ಇರತೊಡಗಿದರು. ಇದು ಆಕಾಶ್​ಗೂ ತಿಳಿದಿತ್ತು. ಗುರುವಾರವಷ್ಟೇ ರಿತಿಕಾ ತಾಯಿಯೊಂದಿಗೆ ಮಾತನಾಡಿದ್ದರು. ಅಂದು ಆಕೆ ವಿಪರೀತ ಆತಂಕದಲ್ಲಿದ್ದಂತೆ ತಾಯಿಗೆ ಅನಿಸಿತ್ತು. ಶುಕ್ರವಾರ ಗಾಜಿಯಾಬಾದ್​ಗೆ ಬರುವುದಾಗಿ ಆಕೆ ಹೇಳಿದ್ದರು. ಆದರೆ ಸಂಜೆ ರಿತಿಕಾ ಕೊಲೆಗೀಡಾದ್ದರು. ರಿತಿಕಾ ಫುಡ್ ಆ್ಯಂಡ್ ಫ್ಯಾಷನ್ ಬ್ಲಾಗರ್ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.