ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಭೀತಿಯ ಮಧ್ಯೆ, ದೇಶವು ಕ್ರಮೇಣ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವುದರ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಪ್ರಾಧ್ಯಾಪಕ ವಿಭಾಗದ ಸಹಾಯಕ ಪ್ರಾಧ್ಯಾಪಕ ನೀರಜ್ ನಿಶ್ಚಲ್ ಅವರು ಪ್ರತಿಕ್ರಿಯಿಸಿದ್ದು, ಮಾನವನ ವರ್ತನೆ ಕೋವಿಡ್ ಅನ್ನು ನಿರ್ಧರಿಸುವ ಒಂದು ಅಂಶವಾಗಿದೆ ಎಂದು ಹೇಳಿದರು.
ಕೋವಿಡ್ ಎರಡು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಒಂದು ವೈರಸ್-ಸಂಬಂಧಿತ ಮತ್ತು ಎರಡನೆಯದು ಮಾನವ-ಸಂಬಂಧಿತ ಅಂಶಗಳು. ವೈರಸ್ ರೂಪಾಂತರವು ನಮ್ಮ ನಿಯಂತ್ರಣಕ್ಕೆ ಮೀರಿದೆ. ಆದರೆ ಕೋವಿಡ್ ಸೂಕ್ತವಾದ ನಡವಳಿಕೆಯ ಮೂಲಕ ಈ ಅಲೆಗಳನ್ನು ತಡೆಯಬಹುದು ಎಂದು ನಿಶ್ಚಲ್ ಹೇಳಿದರು.
ಲಸಿಕೆ ಹಾಕಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದ ನಿಶ್ಚಲ್, "ನೀವು ಹಿಂದೆ ಸೋಂಕಿಗೆ ಒಳಗಾದರೂ ಸಹ ಮತ್ತೆ ಸೋಂಕು ಬರದಂತೆ ತಡೆಯಲು ವ್ಯಾಕ್ಸಿನೇಷನ್ ಸಹಾಯ ಮಾಡುತ್ತದೆ. ಆಗ ರೋಗ ತೀವ್ರ ಸ್ವರೂಪವನ್ನು ಪಡೆಯುವುದಿಲ್ಲ ಎಂದು ಹೇಳಿದ್ರು.
ಸ್ಪ್ಯಾನಿಷ್ ಜ್ವರ ಸಾಂಕ್ರಾಮಿಕ ರೋಗವು ಸಹ ಮೂರನೆಯ ಅಲೆಯನ್ನು ಹೊಂದಿತ್ತು ಎಂಬ ನೂರು ವರ್ಷಗಳ ಹಿಂದಿನ ಇತಿಹಾಸ ನಮ್ಮಲ್ಲಿದೆ. ಈ ಹಿನ್ನೆಲೆಯಿಂದ ಗಮಿನಿಸಿದರೆ ಇತಿಹಾಸವು ಪುನರಾವರ್ತನೆಯಾಗುತ್ತಿದೆ. ಏಕೆಂದರೆ ರೂಪಾಂತರಗಳ ಸಂಖ್ಯೆ ಮತ್ತು ಇತರ ವಿಷಯಗಳ ನಡುವೆ ಅನುಚಿತ ವರ್ತನೆಯಿಂದಾಗಿ ಎಂದು ಅವರು ವಿವರಿಸಿದರು.