ETV Bharat / bharat

ಡಿಎಸ್​ಪಿ ಅಯೂಬ್​ ಪಂಡಿತ್​ ಹತ್ಯೆ ಪ್ರಕರಣ : ಆರೋಪಿಗೆ ಜಾಮೀನು ಮಂಜೂರು - ಕೊಲೆ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು

ಆರೋಪಿಯು 2 ಲಕ್ಷ ರೂ. ಶ್ಯೂರಿಟಿ ಬಾಂಡ್​ ಸಲ್ಲಿಸಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ಜಮ್ಮು-ಕಾಶ್ಮೀರ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ..

ಜಮ್ಮು-ಕಾಶ್ಮೀರದ ಡಿಎಸ್​ಪಿ ಮೊಹಮ್ಮದ್​ ಅಯೂಬ್​ ಪಂಡಿತ್​ ಹತ್ಯೆ ಪ್ರಕರಣ

author img

By

Published : Apr 12, 2022, 12:47 PM IST

ಶ್ರೀನಗರ(ಜಮ್ಮು-ಕಾಶ್ಮೀರ) : ಜಮ್ಮು-ಕಾಶ್ಮೀರದ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ (ಡಿಎಸ್​ಪಿ) ಮೊಹಮ್ಮದ್​ ಅಯೂಬ್​ ಪಂಡಿತ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ಒಬ್ಬನಾದ ಮೋಹಿನ್​ ಅಹ್ಮದ್​​ ಮಟೂಗೆ ನ್ಯಾಯಾಲಯ ಜಾಮೀನು ನೀಡಿದೆ. ಶ್ರೀನಗರದ ನೌಹಟ್ಟಾದಲ್ಲಿ 2017ರ ಜೂ.22ರಂದು ಡಿಎಸ್​ಪಿ ಅಯೂಬ್​ ಪಂಡಿತ್​ ಅವರನ್ನು ಹೊಡೆದು ಕೊಲೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿ ಒಟ್ಟಾರೆ 21 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ನಂತರ ಅಕ್ಟೋಬರ್​ನಲ್ಲಿ 17 ಜನರ ವಿರುದ್ಧ ಪೊಲೀಸರು ಚಾರ್ಜ್​​ಶೀಟ್​ ದಾಖಲಿಸಿದ್ದರು. ನಾಲ್ವರು ಅಪ್ರಾಪ್ತರ ವಿರುದ್ಧ ಪ್ರತ್ಯೇಕವಾದ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಆರೋಪಿಗಳಲ್ಲಿ ಒಬ್ಬನಾದ ಮೋಹಿನ್​ ಅಹ್ಮದ್​​ ಮಟೂಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಆರೋಪಿಯು 2 ಲಕ್ಷ ರೂ. ಶ್ಯೂರಿಟಿ ಬಾಂಡ್​ ಸಲ್ಲಿಸಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೇ ಜಮ್ಮು-ಕಾಶ್ಮೀರ ಬಿಟ್ಟು ಹೋಗುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: ಪಿಎನ್​ಬಿ ವಂಚನೆ ಪ್ರಕರಣ: ನೀರವ್ ಮೋದಿ ಆಪ್ತ ಈಜಿಪ್ಟ್​ನಿಂದ ಗಡಿಪಾರು, ಸಿಬಿಐನಿಂದ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.