ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ ಇಂದು ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಈ ಮೂಲಕ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಊಹಾಪೋಹಗಳಿಗೆ ಅವರು ತೆರೆ ಎಳೆದರು.
ಜಂಗೀಪುರದಿಂದ ಕಾಂಗ್ರೆಸ್ನ ಮಾಜಿ ಸಂಸದರಾಗಿದ್ದ ಅಭಿಜಿತ್ ಮುಖರ್ಜಿ ಅವರಿಗೆ ಮುಂಬರುವ ಉಪಚುನಾವಣೆಯಲ್ಲಿ ಜಂಗೀಪುರ ವಿಧಾನಸಭಾ ಸ್ಥಾನದ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಇವರ ತಂದೆ, ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರ್ ಸಂಸದೀಯ ಕ್ಷೇತ್ರದಿಂದ ಎರಡು ಸಲ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿರಿ: ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ತೆಗೆದು ಹಾಕಲು ಕಾರಣವಿಲ್ಲ: ಕಪಿಲ್ ದೇವ್
ಈ ವೇಳೆ ಮಾತನಾಡಿದ ಅಭಿಜಿತ್, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ಮಮತಾ ಬ್ಯಾನರ್ಜಿ ಯಶಸ್ವಿಯಾಗಿದ್ದಾರೆ. ಬರುವ ದಿನಗಳಲ್ಲಿ ದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರದ ರೀತಿಯಲ್ಲಿ ತಡೆಯುತ್ತೇವೆ. ಜತೆಗೆ ಪಕ್ಷದಲ್ಲಿ ನನಗೆ ಯಾವುದೇ ರೀತಿಯ ಸ್ಥಾನ ಬೇಕಾಗಿಲ್ಲ ಎಂದಿರುವ ಅವರು, ಕೆಳ ಹಂತದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತೇನೆ. ನನಗೆ ಈ ಪಕ್ಷದಲ್ಲಿ ಭವಿಷ್ಯ ಕಾಣುತ್ತಿದ್ದು, ಬರುವ ದಿನಗಳಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.