ETV Bharat / bharat

ಪಂಜಾಬಿ ಗಾಯಕ ಮೂಸೆವಾಲ ಹತ್ಯೆ: ಆಪ್‌ ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು - Aam Admi Party

ಆಮ್​ ಆದ್ಮಿ ಪಾರ್ಟಿ(ಎಎಪಿ) ಪಂಜಾಬ್​ನಲ್ಲಿ ಗದ್ದುಗೆಗೇರಿದ ನಂತರದಲ್ಲಿ ಮೂರು ಬಾರಿ ಅಲ್ಲಿನ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ಶಾಸಕರು, ಮಾಜಿ ಸಭಾಪತಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ ಸೇರಿದಂತೆ 424 ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ.

Punjabi singer Sidhu Moose Wala
ಪಂಜಾಬಿ ಗಾಯಕ ಸಿಧು ಮೂಸೆವಾಲಾ
author img

By

Published : May 30, 2022, 12:49 PM IST

Updated : May 30, 2022, 1:02 PM IST

ಚಂಡೀಗಢ: ಭಗವಂತ್ ಮನ್ ನೇತೃತ್ವದ ಎಎಪಿ ಸರ್ಕಾರ ಪಂಜಾಬ್‌ನಲ್ಲಿನ ರಾಜಕೀಯ ಮತ್ತು ಧಾರ್ಮಿಕ ಮುಖಂಡರೂ ಸೇರಿದಂತೆ ವಿಐಪಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಈ ಪೈಕಿ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನವೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಇತರರು ಪಂಜಾಬ್ ಸರ್ಕಾರವನ್ನು ಹತ್ಯೆಗೆ ಹೊಣೆಗಾರರನ್ನಾಗಿಸಿದೆ.

  • Shubhdeep Singh Sidhu Moosewala Ji’s blood is on your hands Mr. Chief Minister @BhagwantMann and the sad part is instead of being remorseful your party @AamAadmiParty choose to blame the victim for his death by labelling his daylight murder a Gang war.

    — Punjab Congress (@INCPunjab) May 30, 2022 " class="align-text-top noRightClick twitterSection" data=" ">

ಸಿಧು ಮೂಸೆವಾಲಾ ಹತ್ಯೆಗೆ ಸರ್ಕಾರ ಮತ್ತು ಪೊಲೀಸರ ನಿರ್ಲಕ್ಷ್ಯವೇ ಕಾರಣ. ಅವರಿಗಿದ್ದ ಭದ್ರತೆಯನ್ನು ಪೊಲೀಸರು ಹಿಂತೆಗೆದುಕೊಂಡ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಲಾಗಿದೆ. ಇದನ್ನು ಆಪ್​ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ.

ಅಧಿಕೃತ ಆದೇಶದ ಪ್ರಕಾರ, ಭದ್ರತೆಯನ್ನು ಮೊಟಕುಗೊಳಿಸಿದ 424 ವಿಐಪಿಗಳಲ್ಲಿ ಮೂಸೆವಾಲಾ ಅವರ ಹೆಸರೂ ಇದ್ದ ಮಾಹಿತಿ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದೇಶದ ಪ್ರಕಾರ, ಮೂಸೆ ವಾಲಾ ಅವರಿಗೆ ವಹಿಸಿದ್ದ ಇಬ್ಬರು ಗನ್​ಮ್ಯಾನ್​ಗಳನ್ನು ಹಿಂಪಡೆಯಲಾಗಿದೆ. ಪಂಜಾಬ್‌ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಮೂರು ಬಾರಿ ವಿಐಪಿಗಳ ಭದ್ರತೆಯನ್ನು ಕಡಿತಗೊಳಿಸಿತ್ತು.

184 ವಿಐಪಿಗಳ ಭದ್ರತೆ ಮೊದಲ ಬಾರಿಗೆ ಕಡಿತ: ಏಪ್ರಿಲ್​ 23ರಂದು ಎಎಪಿ ಸರ್ಕಾರ 184 ವಿಐಪಿಗಳ ಭದ್ರತೆಯನ್ನು ಹಿಂತೆಗೆದುಕೊಂಡು ಗನ್​ ಸಂಸ್ಕೃತಿಯನ್ನು ಕೊನೆಗೊಳಿಸವುದಾಗಿ ಹೇಳಿತ್ತು. ಆದರೆ ದುರಾದೃಷ್ಟವಶಾತ್​ ಗಾಯಕ ಸಿಧು ಮೂಸೆವಾಲಾ ಭಾನುವಾರ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅದೇ ಗನ್​ ಸಂಸ್ಕೃತಿಗೆ ಬಲಿಯಾಗಿದ್ದಾರೆ.

ಎಎಪಿ ಸರ್ಕಾರವು ಅವರ ಭದ್ರತೆಯನ್ನು ಕಡಿಮೆಗೊಳಿಸಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ಮೂಸೆವಾಲಾ ಸಾವಿನ ಹಿಂದೆ ಗ್ಯಾಂಗ್ ಗಲಾಟೆ ಕಾರಣ ಇರಬಹುದೆಂದು ಅವರು ಶಂಕಿಸಿದ್ದಾರೆ. ಇದರ ಮಧ್ಯೆ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಎಂಬಾತ ಕಾಂಗ್ರೆಸ್ ನಾಯಕನ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ.

ಸರ್ಕಾರ ಎರಡನೇ ಬಾರಿಗೆ ಎಂಟು ಜನರ ಭದ್ರತೆಯನ್ನು ಹಿಂಪಡೆದಿತ್ತು. ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್, ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಾಲ್ ಮತ್ತು ಇತರ ಹಲವು ನಾಯಕರ ಭದ್ರತೆಯನ್ನು ಕಡಿತಗೊಳಿಸಿತ್ತು. ಭದ್ರತೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಹಲವಾರು ನಾಯಕರಿಂದ 127 ಬಂದೂಕುಧಾರಿಗಳು ಮತ್ತು ವಾಹನಗಳನ್ನು ಹಿಂಪಡೆಯಲಾಗಿದೆ.

424 ವಿಐಪಿಗಳ ಭದ್ರತೆ ಭಾನುವಾರ ಹಿಂದಕ್ಕೆ: ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ಶಾಸಕರು, ಮಾಜಿ ಸಭಾಪತಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ ಸೇರಿದಂತೆ 424 ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದಿದೆ. ಅವರಲ್ಲಿ ಗಿಯಾನಿ ಹರ್‌ಪ್ರೀತ್ ಸಿಂಗ್, ಅಕಲ್ ತಖತ್ ಸಾಹಿಬ್‌ನ ಸಂಬಂಧಿ, ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಪ್ರಮುಖರು.

ಇದನ್ನೂ ಓದಿ: ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ

Last Updated : May 30, 2022, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.