ETV Bharat / bharat

ಮಿಸ್ಟರ್ ​ಪರ್ಫೆಕ್ಷನಿಸ್ಟ್​ ಅಮೀರ್​ ಖಾನ್​ ಪುತ್ರಿ ಐರಾ ಖಾನ್​ ನಿಶ್ಚಿತಾರ್ಥ.. - Ira Khan Nupur Shikhare pics

ಅಮೀರ್​ ಖಾನ್​ ಪುತ್ರಿ ಐರಾ ಖಾನ್​ ಎರಡು ವರ್ಷದಿಂದ ಡೇಟಿಂಗ್​ ನಡೆಸುತ್ತಿದ್ದ ತನ್ನ ಪ್ರಿಯಕರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

Aamir K
ಐರಾ ಖಾನ್​ ಮತ್ತು ನುಪೂರ್​​ ಶಿಖರೆ
author img

By

Published : Sep 23, 2022, 12:17 PM IST

ಮುಂಬೈ: ಬಾಲಿವುಡ್​ನ ಸ್ಟಾರ್​ ನಟ ಅಮೀರ್​ ಖಾನ್​ ಅವರ ಪುತ್ರಿ ಐರಾ ಖಾನ್​ ಅವರು ಪ್ರಿಯಕರ ನುಪೂರ್​ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಕುರಿತು ಜೋಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಐರಾ ಮತ್ತು ನುಪೂರ್ ಶಿಖರೆ ಕಳೆದ ಎರಡು ವರ್ಷಗಳಿಂದ ಡೇಟಿಂಗ್​ ನಡೆಸುತ್ತಿದ್ದು, ಇಂದು ಇನ್​ಸ್ಟಾಗ್ರಾಮ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ನುಪೂರ್​ ಶಿಖರೆ ಪ್ರಪೋಸ್​ ಮಾಡುತ್ತಿರುವ ವಿಡಿಯೋ ತುಣುಕಿನ ಪೋಸ್ಟ್ ಅ​ನ್ನು ಐರಾ ಹಂಚಿಕೊಂಡಿದ್ದಾರೆ.

ಸೈಕಲಿಂಗ್​ ಕಾರ್ಯಕ್ರಮದಲ್ಲಿ ಪ್ರಿಯಕರ ನುಪೂರ್​ ಶಿಖರೆ ಸಿನಿಮಾ ಶೈಲಿಯಲ್ಲಿ ಐರಾ ಅವರಿಗೆ ಉಂಗುರ ನೀಡಿ, ನೀನು ನನ್ನ ಮದುವೆ ಆಗುವೆಯಾ ಎಂದು ಪ್ರಸ್ತಾಪಿಸಿದಾಗ ಐರಾ ಹೌದು ಎಂದು ಶಿಖರೆಗೆ ಚುಂಬಿಸಿ ಒಪ್ಪಿಗೆ ನೀಡುತ್ತಿರುವ ವಿಡಿಯೋ ತುಣುಕನ್ನು ಐರಾ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್​ಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಮೆಚ್ಚುಗೆ ವ್ಯಕ್ತಪಡಿಸಿ ಜೋಡಿಗಳಿಗೆ ಶುಭಹಾರೈಸಿದ್ದಾರೆ. ನಟ ಅಮೀರ್​ ಖಾನ್​ ಐರಾ ಮತ್ತು ಮೊದಲ ಪತ್ನಿ ರೀನಾ ಜೊತೆಗಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಮೊದಲ ಪತ್ನಿಯ ಮಗಳೇ ಐರಾ ಆಗಿದ್ದು, 2002 ರಲ್ಲಿ ಅಮೀರ್​ ಖಾನ್​ ರೀನಾ ದಂಪತಿ ವಿಚ್ಚೇದನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ಗೆ ಎಂಟ್ರಿ ಕೊಟ್ಟ ಮರಾಠಿ ಮಿಠಾಯಿ ಮಿಥಿಲಾ ಪಾಲ್ಕರ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.