ಅನಂತಪುರ: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಹೆಚ್ಚಾಗಿದೆ. ಕೋವಿಡ್ನಿಂದಾಗಿ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಬೆಡ್ ಇರದ ಕಾರಣ ಒಂದೇ ಬೆಡ್ ಮೇಲೆ ಇಬ್ಬಿಬ್ಬರಿಗೆ ಚಿಕಿತ್ಸೆ ನೀಡುವ ಸ್ಥಿತಿ ಬಂದೊದಗಿದೆ.
ಕಣೇಕಲ್ಲು ತಾಲೂಕಿನ ನಿವಾಸಿಗೆ ವಯಸ್ಸಾಗಿದ್ದು, ಕೊರೊನಾದಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಗುರುವಾರ ಬೆಳಗ್ಗೆ ಅನಂತಪುರ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಬೆಡ್ ಇಲ್ಲದ ಕಾರಣ ಯುವಕನ ಪಕ್ಕದಲ್ಲೇ ಮಲಗಿಸಿ ಆಕ್ಸಿಜನ್ ನೀಡಿದ್ದಾರೆ.
ಆ ವೃದ್ಧನಿಗೆ ಆಕ್ಸಿಜನ್ ನೀಡಿ ಕೆಲ ಗಂಟೆಗಳ ಬಳಿಕ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೇರೆಡೆ ಸಾಗಿಸದೆ ಆಸ್ಪತ್ರೆ ಸಿಬ್ಬಂದಿ ಅಲ್ಲೇ ಬಿಟ್ಟಿದ್ದಾರೆ. ಮೃತದೇಹದ ಪಕ್ಕದಲ್ಲೇ ಮಲಗಿ ಆ ಯುವಕ ಆಕ್ಸಿಜನ್ ಪಡೆದಿದ್ದಾನೆ. ಎರಡ್ಮೂರು ಗಂಟೆ ಬಳಿಕ ಮೃತದೇಹವನ್ನು ಅಲ್ಲಿಂದ ಬೇರೆಡ ರವಾನಿಸಲಾಗಿದೆ.
ಬೆಡ್ಗಳ ಅಲಭ್ಯ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಇಂತಹ ಸ್ಥಿತಿ ಎದುರಾಗಿದೆ ಎನ್ನಲಾಗಿದೆ.