ETV Bharat / bharat

Watch- ಹಿಜಾಬ್​ ಧರಿಸಿದ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್‌.. ನೆಟ್ಟಿಗರಿಂದ ಕ್ಲಾಸ್‌ - ಹಿಜಾಬ್

ಈ ವಿಡಿಯೋವನ್ನು ಹಿಜಾಬ್​ ಧರಿಸಿ ಬಂದಿದ್ದ ಯುವತಿ ಗೆಳೆಯ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಜಾತ್ಯಾತೀತ ಸಮಾಜದಲ್ಲಿ ಇಂತಹ ಅವಿವೇಕಿ ನಿರ್ಬಂಧಗಳು ಇರುವುದು ನನಗೆ ಆಶ್ಚರ್ಯವಾಗಿದೆ ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾನೆ. ಇದನ್ನು ಕಂಡ ನೆಟ್ಟಿಗರು ರೆಸ್ಟೋರೆಂಟ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಹಿಜಾಬ್​ ಧರಿಸಿದ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್‌

author img

By

Published : Oct 19, 2021, 5:28 PM IST

Updated : Oct 19, 2021, 7:24 PM IST

ಮುಂಬೈ (ಮಹಾರಾಷ್ಟ್ರ) : ಹಿಜಾಬ್ ಧರಿಸಿ ಬಂದ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್‌ ಸಿಬ್ಬಂದಿಯನ್ನ ಮತ್ತೊಬ್ಬ ಯುವತಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮುಂಬೈನ Tap Resto Bar ಹೆಸರಿನ ರೆಸ್ಟೋರೆಂಟ್​ನಲ್ಲಿ ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎರಡು ನಿಮಿಷಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಹಿಜಾಬ್ ಧರಿಸಿ ಬಂದ ತನ್ನ ಸ್ನೇಹಿತೆಗೆ ಯಾಕೆ ಪ್ರವೇಶ ನೀಡುತ್ತಿಲ್ಲ ಎಂದು ಯುವತಿಯೊಬ್ಬರು ರೆಸ್ಟೋರೆಂಟ್‌ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ.

ಅದಕ್ಕೆ ಆತ "ನಾವು ಸೀರೆ, ಹಿಜಾಬ್​ ಧರಿಸಿ ಫುಲ್​ ಕವರ್​ ಆಗಿ ಬಂದ ಮಹಿಳೆಯರನ್ನು ನಮ್ಮ ರೆಸ್ಟೋರೆಂಟ್‌ನೊಳಗೆ ಬಿಟ್ಟು ಕೊಳ್ಳುವುದಿಲ್ಲ. ಆಕೆಗೆ ಬೇಕಾದರೆ ವಾಷ್​ರೂಂಗೆ ಹೋಗಿ ಹಿಜಾಬ್​ ತೆಗೆದು ಬರಲು ಹೇಳಿ" ಎಂದಿದ್ದಾನೆ.

ರೆಸ್ಟೋರೆಂಟ್‌ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಯುವತಿ..

ಈ ವಿಡಿಯೋವನ್ನು ಹಿಜಾಬ್​ ಧರಿಸಿ ಬಂದಿದ್ದ ಯುವತಿ ಗೆಳೆಯ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಜಾತ್ಯಾತೀತ ಸಮಾಜದಲ್ಲಿ ಇಂತಹ ಅವಿವೇಕಿ ನಿರ್ಬಂಧಗಳು ಇರುವುದು ನನಗೆ ಆಶ್ಚರ್ಯವಾಗಿದೆ ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾನೆ. ಇದನ್ನು ಕಂಡ ನೆಟ್ಟಿಗರು ರೆಸ್ಟೋರೆಂಟ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Oct 19, 2021, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.