ETV Bharat / bharat

60ರ ಹರೆಯದಲ್ಲೂ ಸೈಕಲ್‌ನಲ್ಲೇ ಓಡಾಡುವ ಮಹಿಳೆ - Cycling for good health

ಸೈಕಲ್ ಓಡಿಸಲು ಕಲಿತು ಈಗ ಎಲ್ಲಿಗೆ ಹೋಗಬೇಕಾದರೂ ಸೈಕಲ್​ನಲ್ಲೇ ಹೋಗಿ ಬರುತ್ತಾರೆ. ಇವರ ವಯಸ್ಸು 60, ಆದರೂ ಮೈಲುಗಟ್ಟಲೆ ಸೈಕಲ್ ತುಳಿದು ಸಾಗುತ್ತಾರೆ. ಬಿಸಿಲಾದರೂ ದಣಿಯದೇ ವಾರಂಗಲ್, ಕಾಜಿಪೇಟ್, ಹನುಮಕೊಂಡನಂತಹ ಸ್ಥಳಗಳಿಗೆ ಸೈಕಲ್‌ನಲ್ಲೇ ಪ್ರಯಾಣಿಸುತ್ತಾರೆ.

A Woman in Her 60's Hasbeen Riding Bicycle and using it as her transport
60ರ ಹರೆಯದಲ್ಲೂ ಬೈಸಿಕಲ್​ಲ್ಲೇ ಓಡಾಡುವ ಮಹಿಳೆ
author img

By

Published : Jun 13, 2022, 10:43 PM IST

ಹೈದರಾಬಾದ್​: ದಿನವಿಡೀ ಚೈತನ್ಯದಿಂದ ಇರಬೇಕಾದರೆ ವ್ಯಾಯಾಮ ಮಾಡಬೇಕು. ದಿನದಲ್ಲಿ ಸ್ವಲ್ಪ ಹೊತ್ತು ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಾಗಿಯೇ ಹೈದರಾಬಾದ್, ವಾರಂಗಲ್‌ನಂತಹ ನಗರಗಳಲ್ಲಿ ಸೈಕಲ್ ಸವಾರಿಯ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಅದರಲ್ಲಿ ಸೈಕಲ್​ ಸವಾರಿಯನ್ನು ಫಾಲೋ ಮಾಡುವವರು ಹೆಚ್ಚಿನವರು ಯುವಕರೇ ಆಗಿದ್ದಾರೆ. ಆದರೆ ಇಲ್ಲೊಬ್ಬ 60 ವರ್ಷದ ಮಹಿಳೆ ಎಲ್ಲಿ ಹೋಗಬೇಕಾದರೂ ತನ್ನ ಸಾರಿಗೆಯಾಗಿ ಸೈಕಲ್​ ಅನ್ನೇ ಬಳಸಿ, ಯುವಕರಿಗೆ ಮಾತ್ರವಲ್ಲ, ಹಿರಿಯರಿಗೂ ಮಾದರಿಯಾಗಿದ್ದಾಳೆ.

ಹನುಮಕೊಂಡದ ಹೊಸ ಸಾಯನಪೇಟೆಯ ಶಕುಂತಲಾ ಸೈಕ್ಲಿಂಗ್ ಅನ್ನು ತುಂಬಾ ಇಷ್ಟ ಪಡುತ್ತಾರೆ. ಬೈಸಿಕಲ್ ಓಡಿಸಲು ಕಲಿತು ಈಗ ಎಲ್ಲಿಗೆ ಹೋಗಬೇಕಾದರೂ ಸೈಕಲ್​ನಲ್ಲೇ ಹೋಗಿ ಬರುತ್ತಾರೆ. ವಯಸ್ಸು 60 ಆದರೂ ಮೈಲುಗಟ್ಟಲೆ ಸೈಕಲ್ ತುಳಿದು ಸಾಗುತ್ತಾರೆ. ಬಿಸಿಲಾದರೂ, ದಣಿಯದೇ ವಾರಂಗಲ್, ಕಾಜಿಪೇಟ್, ಹನುಮಕೊಂಡನಂತಹ ಸ್ಥಳಗಳಿಗೆ ಸೈಕಲ್‌ನಲ್ಲೇ ಪ್ರಯಾಣಿಸುತ್ತಾರೆ.

60ರ ಹರೆಯದಲ್ಲೂ ಬೈಸಿಕಲ್​ಲ್ಲೇ ಓಡಾಡುವ ಮಹಿಳೆ

ಶಕುಂತಲಾ ಅವರದು ತೀರಾ ಬಡತನದ ಕುಟುಂಬ, ಪತಿ ಸಣ್ಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ದಂಪತಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಕುಟುಂಬ ನಿರ್ವಹಣೆಗೆ ತನ್ನ ಪತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಶಕುಂತಲಾ. ಮದುವೆ ಸಮಾರಂಭಗಳಿಗೆ ಬೇಕಾಗುವ ಅಡುಗೆ, ತಿನಿಸುಗಳನ್ನು ಶಕುಂತಳಾ ಮಾಡುತ್ತಾರೆ. ತನ್ನ 60ರ ಹರೆಯದಲ್ಲೂ ಎಲ್ಲಾ ರೀತಿಯ ಮನೆಕೆಲಸಗಳನ್ನು ಮಾಡುವ ಆರೋಗ್ಯವನ್ನು ಸೈಕಲ್​ ತುಳಿತ ನೀಡಿದೆ.

ಬಾಲ್ಯದಲ್ಲಿ ಸೈಕಲ್ ಓಡಿಸುವುದೆಂದರೆ ನನಗೆ ತುಂಬಾ ಇಷ್ಟವಿತ್ತು. ಆದರೆ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ನನಗೆ ಸೈಕಲ್ ಖರೀದಿಸಲು ಮತ್ತು ಸವಾರಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮದುವೆಯಾದ ನಂತರ ನನ್ನ ತಂದೆ ನನಗೆ ಸೈಕಲ್ ಖರೀದಿಸಿ ಕೊಟ್ಟರು. ಅಂದಿನಿಂದ ನಾನು ಸೈಕಲ್ ಓಡಿಸಲು ಪ್ರಾರಂಭಿಸಿದೆ ಮತ್ತು ಅದನ್ನು ನನ್ನ ಸಾರಿಗೆಯಾಗಿ ಬಳಸುತ್ತಿದ್ದೇನೆ. ಎಲ್ಲಿಗೆ ಹೋದರೂ ಸೈಕಲ್​ನಲ್ಲೇ ಹೋಗುತ್ತೇನೆ. ಇದರಿಂದಾಗಿ 60 ವರ್ಷ ವಯಸ್ಸಿನಲ್ಲೂ ನಾನು ತುಂಬಾ ಆರೋಗ್ಯವಾಗಿದ್ದೇನೆ. ನಾನು ಯಾರನ್ನೂ ಅವಲಂಬಿಸದೆ ನನ್ನ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹೇಳುತ್ತಾರೆ ಶಕುಂತಲಾ.

ಸದ್ಯ ಶಕುಂತಲಾ ಓಡಿಸುತ್ತಿರುವ ಸೈಕಲ್ ತುಂಬಾ ಹಳೆಯದು. ಓಡಿಸುವುದು ಕಷ್ಟವಾದರೂ ಆ ಸೈಕಲ್​ ಅನ್ನು ಬಿಟ್ಟಿರಲು ಅವರು ತಯಾರಿಲ್ಲ. ಹೊಸ ಸೈಕಲ್​ ಖರೀದಿಸುವಷ್ಟು ಅವರ ಆರ್ಥಿಕ ಸಾಮರ್ಥ್ಯ ಚೆನ್ನಾಗಿಲ್ಲ. ಹಾಗಾಗಿ ಹೊಸ ಸೈಕಲ್​ ಖರೀದಿಸಲು ದಾನಿಗಳಲ್ಲಿ ಸಹಾಯಕ್ಕಾಗಿ ವಿನಂತಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರು ಬೆಳಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡಬೇಕು: ಯಾಕೆ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.