ಈರೋಡ್ (ತಮಿಳುನಾಡು): ಬೀದಿ ನಾಟಕ ಕಲಾವಿದರೊಬ್ಬರು ನಾಟಕ ಪ್ರದರ್ಶನ ನೀಡುತ್ತಿದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಈಗ ವಿಡಿಯೋ ವೈರಲ್ ಆಗಿದೆ.
ಕಲಾವಿದ ರಾಜಯ್ಯ ಎಂಬುವವರೇ ಮೃತರಾಗಿದ್ದು, ದೇವಾಲಯದ ಉತ್ಸವಗಳಲ್ಲಿ ನಾಟಕ ಪ್ರದರ್ಶನ ನೀಡುತ್ತಿದ್ದರು. ಕುಪ್ಪಂತುರೈ ಗ್ರಾಮದಲ್ಲಿ ಜುಲೈ 17ರಂದು 'ಕುಪ್ಪಂತುರೈ ಇರಣಿಯ' ನಾಟಕವನ್ನು ರಾಜಯ್ಯ ಸೇರಿದಂತೆ ಸುಮಾರು 25 ಕಲಾವಿದರು ಪ್ರದರ್ಶಿಸುತ್ತಿದ್ದರು. ಈ ನಾಟಕದಲ್ಲಿ ನರತರ್ ನರಸಿಂಹನ ಪಾತ್ರವನ್ನು ನಿರ್ವಹಿಸುತ್ತಿದ್ದ ರಾಜಯ್ಯ ನೋಡನೋಡುತ್ತಲೇ ಕುಸಿದು ಬಿದ್ದಿದ್ದಾರೆ.
ಅಂತೆಯೇ, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ. ಇದರಿಂದ ಘಟನೆಯಿಂದ ಇಡೀ ಕಲಾವಿದರ ಬಳಗ ಮತ್ತು ಗ್ರಾಮಸ್ಥರು ದಿಗ್ಭ್ರಮೆಗೊಳಲಾಗಿದ್ದಾರೆ. ಅಲ್ಲದೇ, 'ಕುಪ್ಪಂತುರೈ ಇರಣಿಯ' ನಾಟಕ ಪ್ರದರ್ಶಿಸಿದರೆ ಆ ದಿನ ಮಳೆ ಬರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರೆ, ಏಕಾಏಕಿ ಕಲಾವಿದನ ಸಾವಿನಿಂದ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ರಸ್ತೆ ಇಲ್ಲದ ಕುಗ್ರಾಮ: ಸ್ಟ್ರೆಚರ್ನಲ್ಲೇ ಮೃತದೇಹ ಹೊತ್ತು ಸಾಗಿಸಿದ ಸಂಬಂಧಿಕರು