ಮಲಪ್ಪುರಂ (ಕೇರಳ): ಕೋವಿಡ್ ಅಲೆ ಜನತೆಯೂ ಸೇರಿ ಪ್ರಾಣಿ ವರ್ಗಕ್ಕೂ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಇದೀಗ ಎಲ್ಲೆಡೆ ಲಾಕ್‌ಡೌನ್ ಘೋಷಣೆಯಾಗಿದ್ದು, ಪೊಲೀಸರು ವಾಹನಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ವೇಳೆ ಪೊಲೀಸರ ಕರ್ತವ್ಯದಲ್ಲಿ ಬೀದಿ ನಾಯಿಯೊಂದು ಸಹಾಯಕ್ಕೆ ಬಂದಿರುವುದು ಕಂಡುಬಂದಿದೆ.
ಮಲಪ್ಪುರಂ - ಪಾಲಕ್ಕಾಡ್ ಜಿಲ್ಲಾ ಗಡಿಯುದ್ದಕ್ಕೂ ಲಾಕ್‌ಡೌನ್ ಕರ್ತವ್ಯದಲ್ಲಿ ಪೊಲೀಸರೊಂದಿಗೆ ನಾಯಿಯೊಂದು ಸೇರಿಕೊಂಡಿದೆ. ಲಾಕ್‌ಡೌನ್ ವೇಳೆ ವಾಹನ ತಪಾಸಣೆಗೆ ನಿಯೋಜನೆಗೆ ಆಯೋಜನೆಗೊಂಡಿದ್ದ ಸಿವಿಲ್ ಪೊಲೀಸ್ ಅಧಿಕಾರಿ ಸಜೀವನ್ ಅವರ ತಂಡದೊಂದಿಗೆ ಬೀದಿ ನಾಯಿ ಸತತ ವಾರಗಳಿಂದಲೂ ನಿಂತು ವಾಹನ ತಪಾಸಣೆಯಲ್ಲಿ ತೊಡಗಿದೆ.
ಮೊದಲಿಗೆ ಪೊಲೀಸ್ ತಂಡ ಈ ಸ್ಥಳಕ್ಕೆ ಆಗಮಿಸಿದಾಗ ಈ ನಾಯಿ ಅವರ ಹತ್ತಿರ ಬಂದು ಕುಳಿತಿರುತ್ತಿತ್ತು. ಆದ್ರೆ ಅಧಿಕಾರಿಗಳು ಈ ಕುರಿತು ಗಮನ ಹರಿಸಿರಲಿಲ್ಲ. ಬರು ಬರುತ್ತಾ ಬೀದಿ ನಾಯಿ ಪೊಲೀಸರಿಗೆ ಸ್ನೇಹಿತನಂತೆ ಜೊತೆಗೆ ಓಡಾಡುವುದು ಮಾಡುತ್ತಿತ್ತು. ಅವರೂ ಸಹ ನಾಯಿಗೆ ಆಹಾರ, ತಿಂಡಿ ನೀಡಿ ಆರೈಕೆ ಮಾಡಿದ್ದಾರೆ.
ಇದಾದ ಬಳಿಕ ಸತತ ಮಳೆಯಲ್ಲೂ ಪೊಲೀಸರ ಜೊತೆ ನಿಂತು ರಸ್ತೆಯಲ್ಲಿ ಅತ್ತಿಂದಿತ್ತಾ ಓಡಾಡುತ್ತಾ ಶಿಸ್ತಿನ ಸಿಪಾಯಿಯಂತೆ ಗಮನ ಸೆಳೆದಿದೆ.