ನವದೆಹಲಿ: ಸರ್ಕಾರ ಮತ್ತು ರೈತರ ನಡುವಿನ ಎಂಟನೇ ಸುತ್ತಿನ ಮಾತುಕತೆ ಇಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿದೆ. ಷರತ್ತುಬದ್ಧ ಮಾತುಕತೆ ನಡೆದಾಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಮುಂದುವರೆದ ಅನ್ನದಾತರ ಹೋರಾಟ; ಎಂಟನೇ ಸುತ್ತಿನ ಮಾತುಕತೆ ಇಂದು
ಸರ್ಕಾರ ಮತ್ತು ರೈತರ ನಡುವೆ ಇಂದು ಮಧ್ಯಾಹ್ನ ಎಂಟನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅದಕ್ಕೂ ಮುನ್ನ ಕೈಲಾಶ್ ಚೌಧರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕೃಷಿ ಕಾನೂನುಗಳಲ್ಲಿ ಕೆಲವು ತಿದ್ದುಪಡಿ ಮಾಡಲು ಭಾರತ ಸರ್ಕಾರ ಸಿದ್ಧವಾಗಿದೆ. ಇಂದಿನ ಮಾತುಕತೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.