ETV Bharat / bharat

ಆನ್​ಲೈನ್​​​ನಲ್ಲಿ ಪಿಜ್ಜಾ ಖರೀದಿಸಲು ಹೋಗಿ 30 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

200 ರೂಪಾಯಿಯ ಪಿಜ್ಜಾ ಆರ್ಡರ್​ ಮಾಡಲು ಹೋಗಿ ಖಾತೆಯಲ್ಲಿದ್ದ 30 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಕ್ಯೂ ಆರ್​ ಕೋಡ್​​ ಸ್ಕ್ಯಾನ್ ಮಾಡಿದ ಪರಿಣಾಮ ಖಾತೆಯ ಹಣ ಎಗರಿಸಲಾಗಿದೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

author img

By

Published : Nov 23, 2020, 9:41 AM IST

Updated : Nov 23, 2020, 10:02 AM IST

ordering-pizza-online-is-expensive
ಆನ್​ಲೈನ್​​​ನಲ್ಲಿ ಪಿಜ್ಜಾ ಖರೀದಿಸಲು ಹೋಗಿ 30 ಸಾವಿರ ಕಳೆದುಕೊಂಡ ವ್ಯಕ್ತಿ

ಪಾಟ್ನಾ (ಬಿಹಾರ್): ಆನ್​ಲೈನ್​​​ನಲ್ಲಿ ಪಿಜ್ಜಾ ಆರ್ಡರ್​​​​ ಮಾಡಿದ ವ್ಯಕ್ತಿಯ ಖಾತೆಯಿಂದ ಬರೋಬ್ಬರಿ 30 ಸಾವಿರ ರೂಪಾಯಿ ಸೈಬರ್​​​ ಕಳ್ಳರ ಪಾಲಾಗಿರುವ ಘಟನೆ ನಡೆದಿದೆ.

ಇಲ್ಲಿನ ದಾನಾಪುರ ಬಳಿಯ ಸುಲ್ತಾನ್​ಪುರದ ನಿವಾಸಿ ನಿಕೇತ್ ರಾಜ್ ಅವರು ಪಿಜ್ಜಾ ಆರ್ಡರ್ ಮಾಡಿದ್ದರು. ಈ ಪಿಜ್ಜಾಗೆ 280 ರೂಪಾಯಿ ಎಂದು ನಮೂದಿಸಲಾಗಿತ್ತು. ಇದೇ ವೇಳೆ, ಆನ್​ಲೈನ್​​​ನಲ್ಲಿ ಹಣ ಪಾವತಿಸಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಸಂದೇಶ ಬಂದಿತ್ತು.

ಇದನ್ನು ಪಾಲಿಸಿದ ನಿಕೇತ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ರೀತಿ ಸ್ಕ್ಯಾನ್ ಮಾಡಿದ ಮರುಕ್ಷಣವೇ ಖಾತೆಯಿಂದ ಹಂತ ಹಂತವಾಗಿ 29,998 ರೂಪಾಯಿ ಖಾಲಿಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿಕೇತ್ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Last Updated : Nov 23, 2020, 10:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.