ETV Bharat / bharat

ಪತ್ನಿ- ಮಗಳನ್ನು 21 ತುಂಡುಗಳನ್ನಾಗಿ ಮಾಡಿ ಬಾವಿಗೆಸೆದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ - ಈಟಿವಿ ಭಾರತ ಕನ್ನಡ

ಗುಜರಾತ್​​ನಲ್ಲಿ ಪತ್ನಿ - ಮಗಳನ್ನು 21 ತುಂಡು ಮಾಡಿ ಕೊಲೆ - ಆರೋಪಿಗೆ 10 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Etv a-man-who-had-murdered-his-wife-and-daughter-dumped-the-body-after-cutting-it-into-21-pieces-sentenced-to-life-imprisonment
ಪತ್ನಿ-ಮಗಳನ್ನು 21 ತುಂಡುಗಳನ್ನಾಗಿ ಮಾಡಿ ಬಾವಿಗೆಸೆದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
author img

By

Published : Jan 10, 2023, 9:58 PM IST

ಗಾಂಧಿನಗರ (ಗುಜರಾತ್​​) : ತನ್ನ ಪತ್ನಿ ಮತ್ತು ಮಗಳನ್ನು 21 ಭಾಗಗಳಾಗಿ ಕತ್ತರಿಸಿ ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪ್ರಕರಣ ಸಂಬಂಧ ಗುಜರಾತ್​ ರಾಜ್ಯ ಮೀಸಲು ಪೊಲೀಸ್​ ಪಡೆಯ ಮಾಜಿ ಸಿಬ್ಬಂದಿಯೊಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅರವಿಂದ್ ಮಾರ್ತಾಭಾಯಿ ದಾಮೋರ್ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ.

ಘಟನೆ ವಿವರ: ಆರೋಪಿ ಅರವಿಂದ್​ ಮಾರ್ತಾಭಾಯಿ ಭಿಲೋದಾ ತಾಲೂಕಿನ ವಾಂಕಾನೇರ್ ನಿವಾಸಿಯಾಗಿದ್ದಾನೆ. ಈತ ಗಾಂಧಿನಗರ ಮತ್ತು ಡಾಮೋರ್​ನಲ್ಲಿ ರಾಜ್ಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಈ ವೇಳೆ, ಆರೋಪಿಗೆ ಹಸುಮತಿ ಎಂಬ ಮಹಿಳೆಯ ಪರಿಚಯವಾಗಿದೆ. ಬಳಿಕ ಪರಿಚಯ ಪ್ರೀತಿಗೆ ತಿರುಗಿ ಆಕೆಯನ್ನು ಮದುವೆಯಾಗಿದ್ದನು. ಬಳಿಕ ಇಬ್ಬರೂ ಗಾಂಧಿನಗರದ ಸರ್ಕಾರಿ ಕ್ವಾಟ್ರಸ್​​ನಲ್ಲಿ ವಾಸಿಸುತ್ತಿದ್ದರು.

ಪತ್ನಿ- ಮಗಳನ್ನು 21 ತುಂಡುಗಳಾಗಿ ಕತ್ತರಿಸಿದ್ದ ಆರೋಪಿ : ಅದಲ್ಲದೇ ಅರವಿಂದ್​ಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ಇವರ ಮಗನ ಮದುವೆಗೆ ಹಸುಮತಿ ತಾನೂ ಹೋಗುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವೇಳೆ, ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಆರೋಪಿ ಅರವಿಂದ್​, ಹಸುಮತಿ ಮತ್ತು ಆಕೆಯ 5 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಇಬ್ಬರ ಮೃತದೇಹವನ್ನು 21 ತುಂಡುಗಳಾಗಿ ಕತ್ತರಿಸಿ ತನ್ನ ಊರಿಗೆ ತಂದಿದ್ದಾನೆ. ಬಳಿಕ ಅಲ್ಲಿಂದ ತನ್ನ ಊರಿಗೆ ಬಂದು ಮತ್ತೋರ್ವನ ಸಹಾಯದಿಂದ ಈ ತುಂಡು ಮಾಡಿದ ಶವವನ್ನು ಬ್ಯಾರಲ್​ನಲ್ಲಿ ತುಂಬಿಸಿ ಬಾವಿಗೆ ಎಸೆದಿದ್ದಾನೆ.

ಇದನ್ನೂ ಓದಿ : ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ

ಕೈಯಲ್ಲಿದ್ದ ಹಚ್ಚೆ ಮೂಲಕ ಮೃತರ ಗುರುತು ಪತ್ತೆ : ಬಳಿಕ ರೈತರೊಬ್ಬರು ತಮ್ಮ ಬಾವಿಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಭಿಲೋದಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾವಿಯಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆ ಮತ್ತು ಮಗುವಿನ ಛಿದ್ರ ಛಿದ್ರವಾದ ಶವ ಪತ್ತೆಯಾಗಿತ್ತು. ಬಾವಿಯಲ್ಲಿ ಪತ್ತೆಯಾದ ಮಹಿಳೆಯ ಕೈಯಲ್ಲಿ ಹೆಚ್‌ಬಿ ಎಂದು ಬರೆದಿರುವ ಹಚ್ಚೆ ಆಧಾರದ ಮೇಲೆ ಮೃತ ಮಹಿಳೆ ಮತ್ತು ಆಕೆಯ ಮಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಪ್ರಕರಣ ಸಂಬಂಧ ಪತಿ ಅರವಿಂದ್ ಮತ್ತು ಈತನಿಗೆ ಸಹಾಯ ಮಾಡಿದ ಆರೋಪಿಗಳನ್ನು ಬಂಧಿಸಿದ್ದರು. ಆ ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಅರಾವಳಿ ಸೆಷನ್ಸ್​ ನ್ಯಾಯಾಲಯವು, ವಾದ- ಪ್ರತಿವಾದ ಆಲಿಸಿ, ಆರೋಪಿ ತಪ್ಪಿತಸ್ಥನೆಂದು ಹೇಳಿದೆ. ಅಷ್ಟೇ ಅಲ್ಲ ಕೊಲೆ ಮಾಡಿ ಆರೋಪಿಗೆ ಹತ್ತು ವರ್ಷಗಳ ನಂತರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಇಬ್ಬರು ಪತ್ನಿಯರ ಜೊತೆ ವಾಸವಿದ್ದ ಆರೋಪಿ : ಗಾಂಧಿನಗರ ಎಸ್‌ಆರ್‌ಪಿಯಲ್ಲಿ ಕರ್ತವ್ಯದಲ್ಲಿದ್ದ ಅರವಿಂದ ತನ್ನ ಇಬ್ಬರೂ ಹೆಂಡತಿಯರೊಂದಿಗೆ ಸರ್ಕಾರಿ ಕ್ವಾಟ್ರಸ್​ನಲ್ಲಿ ವಾಸವಿದ್ದ. ಬಳಿಕ ಮೊದಲ ಪತ್ನಿಯನ್ನು ವಾಂಕನೇರ್‌ನ ಛಪ್ರಾ ಗ್ರಾಮಕ್ಕೆ ಕಳುಹಿಸಿದ್ದನು. ಎರಡನೇ ಪತ್ನಿಯೊಂದಿಗೆ ಸರ್ಕಾರಿ ಕ್ವಾಟ್ರಸ್​ನಲ್ಲಿ ವಾಸವಿದ್ದ ವೇಳೆ ಘಟನೆ ನಡೆದಿತ್ತು.

ಇದನ್ನೂ ಓದಿ : ಶ್ರದ್ಧಾ ವಾಲ್ಕರ್​ ನೆನಪಿಸುವ ಕೊಲೆ: ಕತ್ತರಿಸಿದ ಮೃತದೇಹ ಪ್ಲಾಸ್ಟಿಕ್​ ಚೀಲದಲ್ಲಿತ್ತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.