ETV Bharat / bharat

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲವೆಂದು ಮರವೇರಿದ ಭೂಪ: ಮುಂದೇನಾಯ್ತು?

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ವ್ಯಕ್ತಿಯೊಬ್ಬ ಮರವೇರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

vaccine
ಕೋವಿಡ್ ಲಸಿಕೆಗೆ ಹಾಕಿಸಿಕೊಳ್ಳುವುದಿಲ್ಲವೆಂದು ಮರವೇರಿದ ವ್ಯಕ್ತಿ
author img

By

Published : Jan 20, 2022, 11:27 AM IST

Updated : Jan 20, 2022, 11:52 AM IST

ಉತ್ತರ ಪ್ರದೇಶ: ಕೊರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಕೆಲವರಿಗೆ ಲಸಿಕೆಯ ಕುರಿತು ಇನ್ನೂ ಭಯ ಹೋಗಿಲ್ಲ. ಕೋವಿಡ್​-19 ಲಸಿಕೆಗೆ ಹೆದರಿ ಕೆಲವರು ಮನೆಯನ್ನೇ ಖಾಲಿ ಮಾಡಿ ಓಡಿಹೋದ್ರೆ ಇನ್ನೂ ಕೆಲವರು ಮೈ ಮೇಲೆ ದೇವರು ಬಂದಂತೆ ನಾಟಕವಾಡಿದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಭೂಪ ಇನ್ನೂ ಮುಂದಕ್ಕೆ ಹೋಗಿ ಮರವೇರಿ ಕುಳಿತಿದ್ದಾನೆ.

ಹೌದು, ನನಗೆ ಲಸಿಕೆ ಹಾಕಿಸಿಕೊಳ್ಳಲು ಇಷ್ಟ ಇಲ್ಲ, ಭಯವಾಗುತ್ತದೆ ಎಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮರವೇರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ವರ್ತನೆ ನಗು ಮೂಡಿಸುವಂತಿದೆ.

ಕೋವಿಡ್ ಲಸಿಕೆಗೆ ಹಾಕಿಸಿಕೊಳ್ಳುವುದಿಲ್ಲವೆಂದು ಮರವೇರಿದ ವ್ಯಕ್ತಿ

ಈ ಕುರಿತು ಮಾಹಿತಿ ನೀಡಿರುವ ತಾಲೂಕ್​ ಅಭಿವೃದ್ಧಿ ಅಧಿಕಾರಿ ಅತುಲ್ ದುಬೆ, ವ್ಯಾಕ್ಸಿನ್​ ತೆಗೆದುಕೊಳ್ಳಲು ಇಷ್ಟವಿಲ್ಲ ಎಂದು ಬಲ್ಲಿಯಾದಲ್ಲಿ ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತಿದ್ದ. ಆದರೆ ನಮ್ಮ ತಂಡವು ಆತನನ್ನು ಮನವರಿಕೆ ಮಾಡಿದ ನಂತರ ಲಸಿಕೆ ತೆಗೆದುಕೊಳ್ಳಲು ಒಪ್ಪಿಕೊಂಡು, ವ್ಯಾಕ್ಸಿನ್​ ಹಾಕಿಸಿಕೊಂಡಿದ್ದಾನೆ ಎಂದಿದ್ದಾರೆ.

  • Ballia, Bihar: A boatman and another man who climbed a tree (in different viral videos) were reluctant to take vaccines but took the jabs after they were convinced: Atul Dubey, Block Development Officer, Reoti pic.twitter.com/CsegpAPFQw

    — ANI (@ANI) January 20, 2022 " class="align-text-top noRightClick twitterSection" data=" ">

ಬಿಹಾರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹೈ ಡ್ರಾಮಾ

ಇನ್ನೊಂದು ವಿಡಿಯೋ ಬಿಹಾರದ್ದಾಗಿದ್ದು, ಇಲ್ಲಿ ಮೀನುಗಾರರಿಗೆ ವ್ಯಾಕ್ಸಿನೇಷನ್​ ಹಾಕಲು ವೈದ್ಯಕೀಯ ಸಿಬ್ಬಂದಿ ತೆರಳಿತ್ತು. ಈ ವೇಳೆ, ಮೀನುಗಾರನೊಬ್ಬ ಲಸಿಕೆ ಹಾಕಿಸಿಕೊಳ್ಳಲು ನಿರಾಕಸಿದ್ದಾರೆ. ಆದರೂ ಸಿಬ್ಬಂದಿ ಬಿಡದೇ ಇದ್ದಾಗ ಹೈ ಡ್ರಾಮಾ ಮಾಡಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆದರೂ ವೈದ್ಯಕೀಯ ಸಿಬ್ಬಂದಿ ಆತನನ್ನು ಬಿಡದೇ ಲಸಿಕೆ ಹಾಕಿಸುವಲ್ಲಿ ಯಶಸ್ವಿ ಆಗಿದೆ.

  • #WATCH Boatman refuses to take vaccine, mishandles a health care worker

    He was apprehensive initially but was convinced eventually to take vaccine. In another instance,a man climbed tree but took the vaccine eventually: Atul Dubey,Block Dev Officer,Reoti

    (Source: Viral video) pic.twitter.com/fVk5BGbP46

ಓದಿ: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮುಕ್ತ ಮಾರುಕಟ್ಟೆಗೆ ಡಿಜಿಸಿಐ ಶಿಫಾರಸು

Last Updated : Jan 20, 2022, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.