ETV Bharat / bharat

ವಿಡಿಯೋ ನೋಡಿ: ಹಲಸಿನ ಮರದಲ್ಲಿ ಪೇರಲ ಹಣ್ಣು! - ಕೇರಳದಲ್ಲಿ ಹಲಸಿನ ಮರದಲ್ಲಿ ಪೇರಲ ಹಣ್ಣು

ಕೇರಳದ ಕೋಯಿಕೋಡ್ ಜಿಲ್ಲೆಯಲ್ಲಿ ಅಚ್ಚರಿಯೊಂದು ನಡೆದಿದೆ. ಇಲ್ಲಿನ ಹಲಸಿನ ಮರದಲ್ಲಿ ಪೇರಲ ಹಣ್ಣಾಗಿದೆ. ಇದನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸುತ್ತಿದ್ದಾರೆ.

A jackfruit tree in Kozhikode, ಕೇರಳದಲ್ಲಿ ಹಲಸಿನ ಮರದಲ್ಲಿ ಪೇರಲ ಹಣ್ಣು
ಕೇರಳದಲ್ಲಿ ಹಲಸಿನ ಮರದಲ್ಲಿ ಪೇರಲ ಹಣ್ಣು
author img

By

Published : Apr 27, 2021, 7:29 AM IST

ಕೋಯಿಕೋಡ್ (ಕೇರಳ): ಕೋಯಿಕೋಡ್ ಜಿಲ್ಲೆಯ ಮುಕ್ಕೋಮ್​ನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿರುವ ಹಲಸಿನ ಮರದಲ್ಲಿ ಪೇರಲ ಹಣ್ಣು ಬೆಳೆದಿರುವುದು ಕುತೂಹಲ ಕೆರಳಿಸಿದೆ.

ಕೇರಳದಲ್ಲಿ ಹಲಸಿನ ಮರದಲ್ಲಿ ಪೇರಲ ಹಣ್ಣು

ತಾಯಿ-ಮಗಳಿಬ್ಬರು ಈ ಮರವಿರುವ ದಾರಿಯಲ್ಲಿ ಹಾದು ಹೋಗುವಾಗ ಹಲಸಿನ ಮರವನ್ನು ನೋಡಿದ್ದಾರೆ. ಆಗ ಹಲಸು ಬಿಟ್ಟು ಬೇರೆ ಆಕಾರದ ಹಣ್ಣೊಂದನ್ನು ಕಂಡಿದ್ದಾರೆ. ಬಳಿಕ ಅದು ಏನೆಂದು ಹತ್ತಿರ ಹೋಗಿ ಪರೀಕ್ಷಿಸಿದಾಗ ಪೇರಲ ಹಣ್ಣಿರುವುದು ತಿಳಿದು ಆಶ್ಚರ್ಯಗೊಂಡಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆಯೇ ಹಲಸಿನ ಮರದಲ್ಲಿ ಆಗಿರುವ ಪೇರಲದ ಹಣ್ಣು ನೋಡಲು ಸುತ್ತಮುತ್ತಲಿನ ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಕರಸೇರಿ ಪಂಚಾಯತ್‌ನ ಪಾಲಿಯಿಲ್ ಕುನ್ನುಮ್ಮಲ್‌ನಲ್ಲಿ ಈ ಅಚ್ಚರಿಯ ಘಟನೆ ಜರುಗಿದೆ. ಇದು ಪೇರಲದ ಹಣ್ಣೋ ಅಥವಾ ಹಲಸಿನ ಹಣ್ಣೇ ಇಂತಹ ಆಕಾರದಲ್ಲಿ ಆಗಿದೆಯೇ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.