ETV Bharat / bharat

ಮ್ಯೂಸಿಯಂಗೆ ಶಿಫ್ಟ್ ಆಗಲಿದೆ ಬ್ರಿಟಿಷ್ ಆಳ್ವಿಕೆ ವೇಳೆ ವಶಪಡಿಸಿಕೊಂಡಿದ್ದ ಚಿನ್ನದ ಜಿಂಕೆ ಪ್ರತಿಮೆ - golden deer statue seized in British India

1940ರಲ್ಲಿ ಈ ಪ್ರತಿಮೆಯನ್ನು ಕಲ್ಕತ್ತಾ (ಇಂದು ಕೋಲ್ಕತ್ತಾ) ಪೊಲೀಸರ ಕಳ್ಳತನ ವಿರೋಧಿ ಘಟಕವು ವಶಪಡಿಸಿಕೊಂಡಿತ್ತು. ಸಾಮಾನ್ಯ ಜನರಿಗೂ ಇದನ್ನು ನೋಡಲು ಅವಕಾಶ ಮಾಡಿಕೊಡಲು ನಾವು ಪ್ರತಿಮೆಯ ಸ್ಥಳಾಂತರಕ್ಕೆ ಮುಂದಾಗಿದ್ದೇವೆ..

golden deer statue
ಚಿನ್ನದ ಜಿಂಕೆ ಪ್ರತಿಮೆ
author img

By

Published : Sep 4, 2021, 5:26 PM IST

Updated : Sep 4, 2021, 5:46 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ): ಚಿನ್ನದ ಜಿಂಕೆ ಪ್ರತಿಮೆಯನ್ನು ಕೋಲ್ಕತ್ತಾ ಪೊಲೀಸ್ ಮ್ಯೂಸಿಯಂನಲ್ಲಿರಿಸಲು ನಿರ್ಧರಿಸಲಾಗಿದೆ. ಇದೇನು ಸಾಮಾನ್ಯ ಜಿಂಕೆ ಪ್ರತಿಮೆ ಎಂದುಕೊಂಡಿರಾ? ಅಲ್ಲ.., ಈ ಬಂಗಾರ ಲೇಪಿತ ಜಿಂಕೆ ಪ್ರತಿಮೆಯನ್ನ ಭಾರತದಲ್ಲಿ ಬ್ರಿಟಿಷ್​ ಆಳ್ವಿಕೆಯಿದ್ದ ಕಾಲದಲ್ಲಿ ಅಂದಿನ ಕೋಲ್ಕತ್ತಾ ಪೊಲೀಸರು ಕಳ್ಳತನ ಪ್ರಕರಣವೊಂದನ್ನು ತನಿಖೆ ಮಾಡುವಾಗ ವಶಪಡಿಸಿಕೊಂಡಿದ್ದರು.

ಈವರೆಗೆ ಈ ಪ್ರತಿಮೆ ಕೋಲ್ಕತ್ತಾದ ಲಾಲ್‌ಬಜಾರ್‌ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿಡಲಾಗಿದೆ. ಇನ್ನು ಮುಂದೆ ಕೋಲ್ಕತ್ತಾ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ಈ ಪುರಾತನ ಮತ್ತು ಬೆಲೆಬಾಳುವ ಪ್ರತಿಮೆ ನೋಡಬಹುದಾಗಿದೆ.

ಇದನ್ನೂ ಓದಿ: ಆಜಾದಿ ಆಂದೋಲನದಲ್ಲಿ ಅಚ್ಚಳಿಯದ ಜಲಿಯನ್ ವಾಲಾಬಾಗ್.. ಸ್ವಾತಂತ್ರ್ಯದ ಕಿಡಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿತು ನರಮೇಧ..

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲ್ಕತ್ತಾ ಪೋಲಿಸ್ ಜಂಟಿ ಆಯುಕ್ತ (ಅಪರಾಧ) ಮುರಳೀಧರ್ ಶರ್ಮಾ, 1940ರಲ್ಲಿ ಈ ಪ್ರತಿಮೆಯನ್ನು ಕಲ್ಕತ್ತಾ (ಇಂದು ಕೋಲ್ಕತ್ತಾ) ಪೊಲೀಸರ ಕಳ್ಳತನ ವಿರೋಧಿ ಘಟಕವು ವಶಪಡಿಸಿಕೊಂಡಿತ್ತು. ಸಾಮಾನ್ಯ ಜನರಿಗೂ ಇದನ್ನು ನೋಡಲು ಅವಕಾಶ ಮಾಡಿಕೊಡಲು ನಾವು ಪ್ರತಿಮೆಯ ಸ್ಥಳಾಂತರಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

Last Updated : Sep 4, 2021, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.